ಬೆಂಗಳೂರು: ಆತ ಗುಜರಿ ಬ್ಯುಸಿನೆಸ್ನಿಂದ ಬೆಳೆದವ್ರು. ಅದ್ರಲ್ಲೇ ಅವರು ಕಟ್ಟಿದ ಸಾಮ್ರಾಜ್ಯ ಮಾತ್ರ ಬೆರಗುಹುಟ್ಟಿಸುತ್ತೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿ, ರಾಜಕಾರಣಿಯಾಗೆಲ್ಲ ಗುರುತಿಸಿಕೊಂಡಿರುವ ಅವರ ಮೇಲೆ, ಇಡಿ ಟೀಮ್ ದಾಳಿ ನಡೆಸಿತ್ತು. ಇದೀಗ, ವಿಚಾರಣೆಗಾಗಿ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಜೂನ್ 7ರಂದು ದೆಹಲಿಗೆ ತರಳಿ ಕೆಜಿಎಫ್ ಬಾಬು ವಿಚಾರಣೆ ಎದುರಿಸುವ ಸಾಧ್ಯತೆ ಇದೆ.
ಕೆಜಿಎಫ್ ಬಾಬು, ಸ್ಕ್ರ್ಯಾಪ್ ಬ್ಯುಸಿನೆಸ್ ಶುರುಮಾಡಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಬೆಳೆದಂತವ್ರು. ಕಳೆದ ಬಾರಿಯ ವಿಧಾನ ಪರಿಷತ್ ಎಲೆಕ್ಷನ್ಗೂ ನಿಂತು ಸದ್ದು ಮಾಡಿದ್ದವರು. ಆದ್ರೆ, ಇಂತಹ ಬಾಬು ಖಜಾನೆ ಮೇಲೆ ಇಡಿ ಕಣ್ಣು ಬಿದ್ದಿತ್ತು. ಮೇ 28ರ ಶನಿವಾರ ಬಾಬು ಮನೆ ಮೇಲೆ ರೇಡ್ ಮಾಡಿ, ಸುಮಾರು 18 ಗಂಟೆಗಳ ಕಾಲ ತಲಾಶ್ ನಡೆಸಿದ್ದ ಅಧಿಕಾರಿಗಳು ಹಲವು ಕಡತಗಳನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಕೆಜಿಎಫ್ ಬಾಬುಗೆ ವಿಚಾರಣೆಗಾಗಿ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಇದನ್ನೂ ಓದಿ: ಕುಂದಾಪುರದಲ್ಲಿ ಲವ್ ಜಿಹಾದ್ ಆರೋಪಿ ಪೊಲೀಸರ ವಶಕ್ಕೆ; ನಾಳೆ ಕುಂದಾಪುರದಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ಬಜರಂಗದಳ
ಕೆಜಿಎಫ್ ಬಾಬುಗೆ ಇಡಿ ಅಧಿಕಾರಿಗಳಿಂದ ಸಮನ್ಸ್
ಶನಿವಾರ ಬೆಳಗ್ಗೆ 6.30ರಿಂದ ರಾತ್ರಿ 12.30ರ ತನಕ ಕೆಜಿಎಫ್ ಬಾಬುವಿನ ಮನೆಯನ್ನ ಅಧಿಕಾರಿಗಳು ತಲಾಶ್ ಮಾಡಿದ್ರು. ಬಾಬುಗೆ ಸೇರಿದ ಎರಡು ಮನೆ, ಉಮ್ರಾ ಡೆವಲಪರ್ಸ್ ಕಚೇರಿ, ಸಂಬಂಧಿಗಳ ಮನೆಗಳಲ್ಲೂ ಶೋಧ ನಡೆಸಿದ್ರು. ಈ ವೇಳೆ 8.60 ಲಕ್ಷ ನಗದು, ಮೂರು ಕೆಜಿ 750 ಗ್ರಾಂ ಚಿನ್ನ, ಬ್ಯಾಂಕ್ ಖಾತೆಗಳು, ರಿಯಲ್ ಎಸ್ಟೇಟ್ ವ್ಯವಹಾರ ಪತ್ರಗಳು ಪತ್ತೆಯಾಗಿವೆ. ಇನ್ನೂ ಶಾಸಕ ಜಮೀರ್ ಅಹಮದ್ಗೆ ಮನೆ ತಗೊಳೋಕೆ, ಮೂರುವರೆ ಕೋಟಿಯನ್ನ ಬಾಬು ಸಾಲ ಕೊಟ್ಟಿದ್ರಂತೆ. ಅವರ ಮೇಲೆ ರೇಡ್ ಆದ ಬಳಿಕ ಬಾಬುಗೆ ಇಡಿಯಿಂದ ನೋಟಿಸ್ ಬಂದಿತ್ತಂತೆ. ಅದೇ ಲಿಂಕ್ನಲ್ಲಿ ಈಗ ರೇಡ್ ನಡೆದಿರಬಹುದು ಎಂದು ಕೆಜಿಎಫ್ ಬಾಬು ಹೇಳಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಇನ್ನೂ, ರಾಜಕೀಯದ ಬಗ್ಗೆ ಮಾತನಾಡಿದ ಬಾಬು, ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದೆ ದೊಡ್ಡ ಅಪರಾಧವಾಯ್ತು ಅಂತ ಬೇಸರ ಹೊರ ಹಾಕಿದ್ದಾರೆ. ಒಟ್ನಲ್ಲಿ, ನಾನು ಅಕ್ರಮ ಮಾಡಿಲ್ಲ ಅಂತ ಬಾಬು ಹೇಳುತ್ತಿದ್ದಾರೆ. ಆದ್ರೆ, ಮನೆಯಲ್ಲಿ ಸಿಕ್ಕಿರುವ ದಾಖಲೆಗಳನ್ನ ವಶಕ್ಕೆ ಪಡೆದಿರುವ ಅಧಿಕಾರಿಗಳು, ಬಾಬುಗೆ ಸಮನ್ಸ್ ಕೊಟ್ಟಿದ್ದಾರೆ. ಏಳು ದಿನಗಳಲ್ಲಿ ದೆಹಲಿಗೆ ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಆಮಿರ್ ಖಾನ್ ಮೇಲೆ ನಾಗ ಚೈತನ್ಯ ಫ್ಯಾನ್ಸ್ ಬೇಸರ; ‘ಲಾಲ್ ಸಿಂಗ್ ಚಡ್ಡಾ’ ಟ್ರೇಲರ್ನಿಂದ ನಿರಾಸೆ
ವರದಿ: ಜಗದೀಶ, ಟಿವಿ9 ಬೆಂಗಳೂರು