ಕುಂದಾಪುರದಲ್ಲಿ ಲವ್ ಜಿಹಾದ್ ಆರೋಪಿ ಪೊಲೀಸರ ವಶಕ್ಕೆ; ನಾಳೆ ಕುಂದಾಪುರದಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ಬಜರಂಗದಳ
ಮದುವೆಯಾಗಿದ್ದರೂ ಹಿಂದೂ ಯುವತಿ ಜೊತೆ ಆರೋಪಿ ಸಂಪರ್ಕ ಇಟ್ಟುಕೊಂಡಿದ್ದನಂತೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದ. ಬಳಿಕ ಮದುವೆಯಾಗಲ್ಲ ಎಂದು ಹೇಳಿದ್ದ ಎಂಬ ಆರೋಪ ಕೇಳಿಬಂದಿದೆ.
ಉಡುಪಿ: ಕುಂದಾಪುರದಲ್ಲಿ ನಡೆದ ಲವ್ ಜಿಹಾದ್ (Love Jihad) ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಜೀಜ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇ 23ರಂದು ಆತ್ಮಹತ್ಯೆಗೆ ಯತ್ನಿಸಿದ್ದ ಹಿಂದೂ ಯುವತಿ ಶಿಲ್ಪಾ ದೇವಾಡಿಗ, ಚಿಕಿತ್ಸೆ ಫಲಿಸದೆ ಮೇ 25ರಂದು ಮೃತಪಟ್ಟಿದ್ದಳು. ಈಕೆಯ ಸಾವಿನ ಬಳಿಕ ಮತಾಂತರ ಒತ್ತಾಯ ಮತ್ತು ಲವ್ ಜಿಹಾದ್ ಆರೋಪ ಕೇಳಿಬಂದಿತ್ತು. ಮದುವೆಯಾಗಿದ್ದರೂ ಹಿಂದೂ ಯುವತಿ ಜೊತೆ ಆರೋಪಿ ಸಂಪರ್ಕ ಇಟ್ಟುಕೊಂಡಿದ್ದನಂತೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದ. ಬಳಿಕ ಮದುವೆಯಾಗಲ್ಲ ಎಂದು ಹೇಳಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಲವ್ ಜಿಹಾದ್ ಪ್ರಕರಣವನ್ನು ಖಂಡಿಸಿ ಬಜರಂಗದಳ ನಾಳೆ ಕುಂದಾಪುರದಲ್ಲಿ ಪ್ರತಿಭಟನೆಗೆ ಕರೆ ನೀಡಿದೆ.
ಯುವತಿ ಅಣ್ಣ ಹೇಳಿದ್ದೇನು? ನನ್ನ ತಂಗಿಯನ್ನು ಅಜೀಜ್ ದುರುಪಯೋಗಪಡಿಸಿಕೊಂಡಿದ್ದಾನೆ. ಟಾರ್ಚರ್ ಕೊಟ್ಟು ಮತಾಂತರವಾಗಲು ಒತ್ತಾಯಿಸಿರಬೇಕು. ಆಕೆ ಆಸ್ಪತ್ರೆಯಲ್ಲಿ ಕಿರುಕುಳ ಕೊಟ್ಟ ವಿಚಾರ ಹೇಳಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿ ಫೋಟೋ ವಿಡಿಯೋ ಮಾಡಿದ್ದಾಗಿ ಹೇಳಿದ್ದಾಳೆ. ಅವರಿಗೆ ಹೇಗೆ ಸಂಪರ್ಕವಾಗಿತ್ತು ನನಗೆ ಗೊತ್ತಿಲ್ಲ. ಆಕೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಅವನಿಗೆ ಈ ಮೊದಲೇ ಮದುವೆಯಾಗಿತ್ತು. ಮದುವೆಯಾಗಲು ಮತಾಂತರ ಆಗು ಎಂದು ಒತ್ತಾಯಿಸಿರುವ ಸಂಶಯ ಇದೆ ಎಂದರು.
ಹಿಂದೂ ಸಂಘಟನೆ ಒತ್ತಾಯ: ಲವ್ ಜಿಹಾದಿಗೆ ಯುವತಿ ಬಲಿಯಾಗಿದ್ದಾಳೆ ಎಂದು ಕುಂದಾಪುರದ ಹಿಂದೂ ಸಂಘಟನೆಗಳು ಆರೋಪಿಸಿವೆ. ಮದುವೆಯಾಗಿರುವ ಅಜೀಜ್ ಯುವತಿ ಜೊತೆ ಸಂಬಂಧ ಇರಿಸಿಕೊಂಡಿದ್ದ. ಅಜೀಜ್ಗೆ ತಕ್ಕ ಶಿಕ್ಷೆ ಕೊಡಬೇಕೆಂದು ಹಿಂದೂ ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿವೆ. ಸದ್ಯ ಕುಂದಾಪುರದಲ್ಲಿ ನಡೆದ ಈ ಪ್ರಕರಣದ ಬಗ್ಗೆ ಅನುಮಾನ ಹೆಚ್ಚಾಗಿದೆ. ಆರೋಪಿಯನ್ನು ಈಗಾಗಲೇ ಬಂಧಿಸಿದ್ದು, ವಿಚಾರಣೆ ಬಳಿಕ ಸತ್ಯ ತಿಳಿದುಬರಬೇಕಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Mon, 30 May 22