Nepal Plane Crash: ನೇಪಾಳದಲ್ಲಿ ವಿಮಾನ ಪತನ; 21 ಶವಗಳು ಪತ್ತೆ, 4 ಭಾರತೀಯರು ಸೇರಿ 22 ಪ್ರಯಾಣಿಕರೂ ಸಾವನ್ನಪ್ಪಿರುವ ಶಂಕೆ

ನೇಪಾಳ ವಿಮಾನ ಪತನಗೊಂಡ ಸ್ಥಳದಲ್ಲಿ ಇದುವರೆಗೆ 21 ಮೃತದೇಹಗಳು ಪತ್ತೆಯಾಗಿವೆ. ಉಳಿದ ಆರು ಶವಗಳಿಗಾಗಿ ಪೊಲೀಸರು ಮತ್ತು ಸೇನಾ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

Nepal Plane Crash: ನೇಪಾಳದಲ್ಲಿ ವಿಮಾನ ಪತನ; 21 ಶವಗಳು ಪತ್ತೆ, 4 ಭಾರತೀಯರು ಸೇರಿ 22 ಪ್ರಯಾಣಿಕರೂ ಸಾವನ್ನಪ್ಪಿರುವ ಶಂಕೆ
ನೇಪಾಳದಲ್ಲಿ ವಿಮಾನ ಪತನವಾದ ದೃಶ್ಯImage Credit source: India Today
Follow us
| Updated By: ಸುಷ್ಮಾ ಚಕ್ರೆ

Updated on:May 30, 2022 | 5:20 PM

ನವದೆಹಲಿ: ನೇಪಾಳದಲ್ಲಿ (Nepal Plane Crash) ಅಪಘಾತಕ್ಕೀಡಾದ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೆಲ್ಲರೂ ಸಾವನ್ನಪ್ಪಿರುವ ಶಂಕೆಯಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಕ್ಷಣಾ ತಂಡಗಳು ನಾಲ್ಕು ಭಾರತೀಯರು ಸೇರಿದಂತೆ 22 ಜನರಿದ್ದ ವಿಮಾನದ ಅವಶೇಷಗಳಿಂದ 21 ಶವಗಳನ್ನು ಹೊರತೆಗೆದಿವೆ. ಈ ವಿಮಾನದಲ್ಲಿ 4 ಭಾರತೀಯರು ಸೇರಿ 22 ಮಂದಿ ಪ್ರಯಾಣಿಸುತ್ತಿದ್ದರು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾವು ಅನುಮಾನ ವ್ಯಕ್ತಪಡಿಸಿದ್ದೇವೆ. ಈ ವಿಮಾನ ಅಪಘಾತದಲ್ಲಿ ಯಾರೂ ಬದುಕುಳಿಯಲು ಸಾಧ್ಯವಿಲ್ಲ ಎಂದು ನಮಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆದರೆ ಅಧಿಕೃತ ಹೇಳಿಕೆಯು ಬಾಕಿಯಿದೆ ಎಂದು ಗೃಹ ಸಚಿವಾಲಯದ ವಕ್ತಾರ ಫದೀಂದ್ರ ಮಣಿ ಪೋಖ್ರೆಲ್ ಹೇಳಿದ್ದಾರೆ.

ನೇಪಾಳ ವಿಮಾನ ಪತನಗೊಂಡ ಸ್ಥಳದಲ್ಲಿ ಇದುವರೆಗೆ 21 ಮೃತದೇಹಗಳು ಪತ್ತೆಯಾಗಿವೆ. ಉಳಿದ ಆರು ಶವಗಳಿಗಾಗಿ ಪೊಲೀಸರು ಮತ್ತು ಸೇನಾ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಈ ವಿಮಾನವು 14,500 ಅಡಿ ಎತ್ತರದಲ್ಲಿ ಡಿಕ್ಕಿ ಹೊಡೆದ ನಂತರ ಪತನಗೊಂಡಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ಈ ಮೃತದೇಹಗಳನ್ನು ಹಿಂಪಡೆಯಲು 15 ನೇಪಾಳ ಸೇನೆಯ ಸೈನಿಕರ ತಂಡವನ್ನು ಸ್ಥಳದ ಬಳಿ ನೇಮಿಸಲಾಗಿದೆ ಎಂದು ನೇಪಾಳ ಸೇನೆಯ ವಕ್ತಾರರು ತಿಳಿಸಿದ್ದಾರೆ. ಈ ಅಪಘಾತದ ಸ್ಥಳವು ಸುಮಾರು 14,500 ಅಡಿ ಎತ್ತರದಲ್ಲಿದೆ.

ಇದನ್ನೂ ಓದಿ
Image
ವಿಮಾನ ಪತನದ ಸ್ಥಳ ಗುರುತಿಸಿದ ನೇಪಾಳ ಸೇನೆ: 22 ಮಂದಿ ಜೀವಂತ ಇರುವುದು ಅನುಮಾನ
Image
Nepal Plane ನಾಪತ್ತೆಯಾಗಿದ್ದ ನೇಪಾಳದ ತಾರಾ ಏರ್​​ಲೈನ್ಸ್​​​ ಕೊವಾಂಗ್​​ನಲ್ಲಿ ಪತ್ತೆ, ವಿಮಾನದ ಸ್ಥಿತಿ ಇನ್ನೂ ಖಚಿತವಾಗಿಲ್ಲ: ವರದಿ
Image
Breaking News: 4 ಮಂದಿ ಭಾರತೀಯರೂ ಸೇರಿ 22 ಪ್ರಯಾಣಿಕರಿದ್ದ ನೇಪಾಳದ ವಿಮಾನ ನಾಪತ್ತೆ

ಮುಸ್ತಾಂಗ್ ಜಿಲ್ಲೆಯ ಥಾಸಾಂಗ್‌ನ ಸಾನೋ ಸ್ವರೆ ಭಿರ್‌ನಲ್ಲಿ 14,500 ಅಡಿ ಎತ್ತರದಲ್ಲಿ ಅಪಘಾತದ ಸ್ಥಳದಿಂದ ಇದುವರೆಗೂ 21 ಮೃತದೇಹಗಳನ್ನು ಹೊರತೆಗೆಯಲಾಗಿದೆ. ವಿಮಾನ ನಾಪತ್ತೆಯಾಗಿ ಸುಮಾರು 20 ಗಂಟೆಗಳ ನಂತರ ಇಂದು ಬೆಳಗ್ಗೆ ಅಪಘಾತದ ಸ್ಥಳ ಪತ್ತೆಯಾಗಿತ್ತು. ಈ ವಿಮಾನ ಅಪಘಾತದ ಸ್ಥಳದಿಂದ 21 ಶವಗಳನ್ನು ಹೊರಗೆತೆಯಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ: Breaking News: 4 ಮಂದಿ ಭಾರತೀಯರೂ ಸೇರಿ 22 ಪ್ರಯಾಣಿಕರಿದ್ದ ನೇಪಾಳದ ವಿಮಾನ ನಾಪತ್ತೆ

ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರವಾಸಿ ನಗರವಾದ ಪೊಖರಾದಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ತಾರಾ ಏರ್ ನಿರ್ವಹಿಸುತ್ತಿದ್ದ ಟರ್ಬೊಪ್ರಾಪ್ ಟ್ವಿನ್ ಓಟರ್ 9ಎನ್-ಎಇಟಿ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಕೆನಡಾ ನಿರ್ಮಿತ ವಿಮಾನವು ಪೋಖರಾ ನಗರದಿಂದ ಮಧ್ಯ ನೇಪಾಳದ ಜನಪ್ರಿಯ ಪ್ರವಾಸಿ ಪಟ್ಟಣವಾದ ಜೋಮ್ಸೋಮ್‌ಗೆ ಪ್ರಯಾಣಿಸುತ್ತಿತ್ತು. (Source)

“ಈ ವಿಮಾನವು ಮುಸ್ತಾಂಗ್‌ನಲ್ಲಿನ ಜೋಮ್ಸಮ್‌ನ ಆಕಾಶದಲ್ಲಿ ಕಾಣಿಸಿಕೊಂಡಿತು. ನಂತರ ಮೌಂಟ್ ಧೌಲಗಿರಿಗೆ ತಿರುಗಿತು. ಆಮೇಲೆ ವಿಮಾನ ಎಲ್ಲಿ ಹೋಯಿತು ಎಂಬುದೇ ಗೊತ್ತಾಗಲಿಲ್ಲ, ವಿಮಾನ ನಾಪತ್ತೆಯಾಯಿತು” ಎಂದು ಮುಖ್ಯ ಜಿಲ್ಲಾ ಅಧಿಕಾರಿ ನೇತ್ರಾ ಪ್ರಸಾದ್ ಶರ್ಮಾ ಫೋನ್‌ನಲ್ಲಿ ANIಗೆ ದೃಢಪಡಿಸಿದ್ದಾರೆ.

ವಿಮಾನಯಾನ ಸಂಸ್ಥೆಯು ಪ್ರಯಾಣಿಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ನಾಲ್ಕು ಭಾರತೀಯರು ಕೂಡ ಇದ್ದಾರೆ. ಅಶೋಕ್ ಕುಮಾರ್ ತ್ರಿಪಾಠಿ, ಅವರ ಪತ್ನಿ ವೈಭವಿ ಬಾಂದೇಕರ್ ​​ ಮತ್ತು ಅವರ ಮಕ್ಕಳಾದ ಧನುಷ್ ಮತ್ತು ರಿತಿಕಾ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಗುರುತಿಸಲಾಗಿದೆ. ಈ ಕುಟುಂಬವು ಮುಂಬೈ ಸಮೀಪದ ಥಾಣೆ ನಗರದಲ್ಲಿ ವಾಸವಾಗಿತ್ತು.

ಇದನ್ನೂ ಓದಿ: ವಿಮಾನ ಪತನದ ಸ್ಥಳ ಗುರುತಿಸಿದ ನೇಪಾಳ ಸೇನೆ: 22 ಮಂದಿ ಜೀವಂತ ಇರುವುದು ಅನುಮಾನ

ನಾಪತ್ತೆಯಾಗಿರುವ ವಿಮಾನಗಳ ಹುಡುಕಾಟಕ್ಕಾಗಿ ನೇಪಾಳ ಗೃಹ ಸಚಿವಾಲಯವು ಮುಸ್ತಾಂಗ್ ಮತ್ತು ಪೊಖರಾದಿಂದ ಎರಡು ಖಾಸಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ಭದ್ರತಾ ಪಡೆಗಳಿಂದ ಗಸ್ತು ಮತ್ತು ಶೋಧ ಘಟಕಗಳು ಮತ್ತು ಸ್ಥಳೀಯರ ಗುಂಪುಗಳು ಧೌಲಗಿರಿ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿವೆ ಎಂದು ದಿ ಹಿಮಾಲಯನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಎವರೆಸ್ಟ್ ಸೇರಿದಂತೆ ವಿಶ್ವದ 14 ಅತಿ ಎತ್ತರದ ಪರ್ವತಗಳಲ್ಲಿ 8 ನೇಪಾಳವು ವಿಮಾನ ಅಪಘಾತಗಳ ದಾಖಲೆಯನ್ನು ಹೊಂದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Mon, 30 May 22