ಬೆಂಗಳೂರು, ಜು.11: ವಾಲ್ಮೀಕಿ ಅಭಿವೃದ್ಧಿ ನಿಗಮ(Valmiki Development Corporation)ದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರ ವಿಲ್ಲಾ ಮತ್ತು ರಾಯಚೂರಿನ ನಿವಾಸದಲ್ಲಿ ಇಡಿ ಪರಿಶೀಲನೆ ಮುಕ್ತಾಯವಾಗಿದೆ. ಯಲಹಂಕ ಬಳಿಯ ಶ್ರೀನಿವಾಸಪುರದಲ್ಲಿರುವ ದದ್ದಲ್ಗೆ ಸೇರಿದ ವಿಲ್ಲಾದ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಬರೋಬ್ಬರಿ 37 ಗಂಟೆ ಶೋಧಕಾರ್ಯದ ಬಳಿಕ ಕಾರ್ಯಾಚರಣೆ ಮುಕ್ತಾಯಗೊಳಿಸಿದ್ದಾರೆ.
ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರನ್ನು ಕೂಡ ಇಡಿ ವಿಚಾರಣೆ ಒಳಪಡಿಸಿತ್ತು. ಇನ್ನು ಕಳೆದ ಎರಡು ದಿನಗಳಿಂದ ನಿರಂತರವಾಗಿ ದಾಖಲೆಗಳ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು, ದದ್ದಲ್ ವಿಲ್ಲಾದಲ್ಲಿ ಸಿಕ್ಕ ದಾಖಲೆಗಳನ್ನು ಇನೋವಾ ಕಾರಿನಲ್ಲಿ ಬೆಂಗಳೂರಿನ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಕೊಂಡೊಯ್ದಿದ್ದಾರೆ. ಇತ್ತ ಇಡಿ ದಾಳಿ ಅಂತ್ಯವಾದರೂ ಕೂಡ ಶಾಸಕ ಬಸವನಗೌಡ ದದ್ದಾಲ್ ಹೊರಗಡೆ ಬಾರದೆ, ಯಾವುದೇ ಪ್ರತಿಕ್ರಿಯೆ ನೀಡದೆ ಮನೆಯ ಡೋರ್ ಲಾಕ್ ಮಾಡಿಕೊಂಡು ಒಳಗಡೆ ಇದ್ದಾರೆ.
ಇದನ್ನೂ ಓದಿ:ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಪ್ರಕರಣ: ಹಗರಣದ ಆರೋಪಿಗಳ ಮತ್ತೊಂದು ಕಹಾನಿ ಬಯಲು
ಇತ್ತ ನಿನ್ನೆ ಬೆಳಗ್ಗೆ 7 ಗಂಟೆಯಿಂದ ರಾಯಚೂರಲ್ಲಿ ಪರಿಶೀಲನೆ ನಡೆಸುತ್ತಿದ್ದ ಇಡಿ ಅಧಿಕಾರಿಗಳ ದಾಳಿ ಕೂಡ ಮುಕ್ತಾಯವಾಗಿದೆ. ದದ್ದಲ್ ಮಾಜಿ ಪಿಎ ಪಂಪಣ್ಣ, ದದ್ದಲ್ ಅಳಿಯ ಚನ್ನಬಸವ ವಿಚಾರಣೆ ನಡೆಸಲಾಗಿತ್ತು. ಇದೀಗ ಯಾರನ್ನೂ ವಶಕ್ಕೆ ಪಡೆಯದೆ, ಬಸನಗೌಡ ದದ್ದಲ್ ಹಾಗೂ ಪಿಎ ಪಂಪಣ್ಣ ಮನೆಯಲ್ಲಿ ಸಿಕ್ಕ ದಾಖಲೆಗಳನ್ನು ಇಡಿ ವಶಕ್ಕೆ ಪಡೆದು, ಬ್ಯಾಗ್ಗಳಲ್ಲಿ ತುಂಬಿಸಿ ಕೊಂಡೊಯ್ದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ