ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಪ್ರಕರಣ: ಹಗರಣದ ಆರೋಪಿಗಳ ಮತ್ತೊಂದು ಕಹಾನಿ ಬಯಲು
ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಅದರಂತೆ ಇದೀಗ ಆರೋಪಿಗಳ ಮತ್ತೊಂದು ಕಹಾನಿ ಬಯಲಾಗಿದ್ದು, ಹೈದರಾಬಾದ್ ಫಸ್ಟ್ ಬ್ಯಾಂಕ್ನಲ್ಲಿ ತೆರೆದಿದ್ದ 18 ನಕಲಿ ಖಾತೆಗಳಿಗೂ ಬೆಂಗಳೂರಿನ ಕನೆಕ್ಷನ್ ಇರುವುದು ತಿಳಿದು ಬಂದಿದೆ.
ಬೆಂಗಳೂರು, ಜು.11: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮ (Maharshi Valmiki Development Corporation)ದಲ್ಲಿ ಆಗಿರುವ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ(SIT) ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಅದರಂತೆ ದಿನಕ್ಕೊಂದು ವಿಚಾರಗಳು ಬೆಳಕಿಗೆ ಬರುತ್ತಲಿದೆ. ಇದೀಗ ಆರೋಪಿಗಳ ಮತ್ತೊಂದು ಕಹಾನಿ ಬಯಲಾಗಿದ್ದು, ಹೈದರಾಬಾದ್ ಫಸ್ಟ್ ಬ್ಯಾಂಕ್ನಲ್ಲಿ ತೆರೆದಿದ್ದ 18 ನಕಲಿ ಖಾತೆಗಳಿಗೂ ಬೆಂಗಳೂರಿನ ಕನೆಕ್ಷನ್ ಇರುವುದು ತಿಳಿದು ಬಂದಿದೆ.
ಉದ್ಯಮಿಗಳ ಹೆಸರಲ್ಲಿ ನಕಲಿ ಖಾತೆ
ಬೆಂಗಳೂರಿನ ಉದ್ಯಮಿಗಳ ಹೆಸರಲ್ಲಿ ಆರೋಪಿಗಳು ನಕಲಿ ಖಾತೆಗಳನ್ನು ತೆರೆದಿದ್ದರು. ಆ ನಕಲಿ ಖಾತೆಗಳ ಮೂಲಕವೇ ಖದೀಮರು ಕೋಟ್ಯಾಂತರ ರೂ. ಹಣ ವರ್ಗಾಯಿಸಿಕೊಂಡಿದ್ದಾರೆ. ಬೆಂಗಳೂರಿನ ರಾಮ್ ಎಂಟರ್ ಪ್ರೈಸೆಸ್(5.7 ಕೋಟಿ ರೂ.), ಜಿ ಎನ್ ಇಂಡಸ್ಟ್ರೀಸ್, (4.42 ಕೋಟಿ ರೂ.), ಸುಜಲಾ ಎಂಟರ್ ಪ್ರೈಸೆಸ್(5.63 ಕೋಟಿ), ನೊವೆಲ್ ಸೆಕ್ಯುರಿಟಿ ಸರ್ವಿಸ್(4 ಕೋಟಿ) ಸೇರಿದಂತೆ 18 ಉದ್ಯಮಿಗಳ ಹೆಸರಲ್ಲಿ ನಕಲಿ ಖಾತೆಗಳು ತೆರೆಯಲಾಗಿದೆ.
ಇದನ್ನೂ ಓದಿ:ವಾಲ್ಮೀಕಿ ನಿಗಮದ ಹಗರಣ: ಬಿ ನಾಗೇಂದ್ರ ಫ್ಲ್ಯಾಟ್ನಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಇಡಿ
ನಕಲಿ ಖಾತೆಗಳಿಗೆ 89 ಕೋಟಿ ಹಣ ವರ್ಗಾವಣೆ
ಹೌದು, ಬೆಂಗಳೂರಿನ ಉದ್ಯಮಿಗಳ ಹೆಸರು, ವಿಳಾಸ ಬಳಸಿ ಫಸ್ಟ್ ಫೈನಾನ್ಸ್ ಬ್ಯಾಂಕ್ನಲ್ಲಿ ನಕಲಿ ಖಾತೆ ತೆರೆಯಲಾಗಿದೆ. ಬಳಿಕ ಆರೋಪಿಗಳು ಈ ನಕಲಿ ಅಕೌಂಟ್ಗಳಿಗೆ ಯೂನಿಯನ್ ಬ್ಯಾಂಕ್ನಿಂದ ಕೋಟ್ಯಾಂತರ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಸುಳ್ಳು ದಾಖಲೆಗಳನ್ನ ಸೃಷ್ಟಿಸಿ ತೆರಿದಿದ್ದ 18 ನಕಲಿ ಖಾತೆಗಳಿಗೆ 89 ಕೋಟಿ ಹಣ ವರ್ಗಾವಣೆಯಾಗಿತ್ತು. ಈ ವಿಚಾರ ಗೊತ್ತಾದ ಮೇಲೆ ಉದ್ಯಮಿಗಳು ವಂಚನೆ ಕೇಸ್ ದಾಖಲು ಮಾಡಿದ್ದರು. ಬೆಂಗಳೂರಿನ ಕೆಲ ಪೊಲೀಸ್ ಠಾಣೆಗಳಲ್ಲಿ ಉದ್ಯಮಿಗಳ ದೂರಿನ ಅನ್ವಯ ಎಫ್ಐಆರ್ ದಾಖಲಿಸಿದ್ದರು. ಸಧ್ಯ ಈ ಕೇಸ್ಗಳನ್ನು ವರ್ಗಾವಣೆ ಮಾಡಿಕೊಂಡು ಎಸ್ಐಟಿ ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ