ವಾಲ್ಮೀಕಿ ಹಗರಣ: ಶಾಸಕ ನಾಗೇಂದ್ರ ಆಪ್ತ ಸಹಾಯಕನನ್ನು ಬಿಟ್ಟು ಕಳಿಸಿದ ಇಡಿ

ವಾಲ್ಮೀಕಿ ನಿಗಮದಲ್ಲಿ ನಡೆದಿದ್ದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಪಿಎ ಹರೀಶ್‌ನನ್ನು ನಾಗೇಂದ್ರಗೂ ಮುಂಚೆ ಇಡಿ ಅಧಿಕಾರಿಗಳು ತಮ್ಮ ಕಚೇರಿಗೆ ಕರೆದೊಯ್ದಿದ್ದರು. ಸತತ 7 ಗಂಟೆಗೂ ಹೆಚ್ಚು ಕಾಲ ವಿಚಾರಣೆ ಮಾಡಿದ ಅಧಿಕಾರಿಗಳು, ಆತನ ಹೇಳಿಕೆ ದಾಖಲಿಸಿಕೊಂಡು ವಾಪಸ್ ಕಳಿಸಿದ್ದಾರೆ. ಹಾಗಾದರೆ ನಾಗೇಂದ್ರಗೂ ಮುಂಚೆ ಹರೀಶ್​ನನ್ನು ಇಡಿ ವಶಕ್ಕೆ ಪಡೆದಿದ್ಯಾಕೆ? ಅಂತೀರಾ, ಈ ಸ್ಟೋರಿ ಓದಿ.

ವಾಲ್ಮೀಕಿ ಹಗರಣ: ಶಾಸಕ ನಾಗೇಂದ್ರ ಆಪ್ತ ಸಹಾಯಕನನ್ನು ಬಿಟ್ಟು ಕಳಿಸಿದ ಇಡಿ
ಶಾಸಕ ನಾಗೇಂದ್ರ ಆಪ್ತ ಸಹಾಯಕನನ್ನು ಬಿಟ್ಟು ಕಳಿಸಿದ ಇಡಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 10, 2024 | 9:46 PM

ಬೆಂಗಳೂರು, ಜು.10: ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣ ಹಾಗೂ ಹವಾಲಾ ಹಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಪಿಎ ಹರೀಶ್‌ನನ್ನು ಕರೆದೊಯ್ದಿದ್ದ ಇಡಿ ಅಧಿಕಾರಿಗಳು, ಇದೀಗ  ವಿಚಾರಣೆ ನಡೆಸಿ ಹರೀಶ್‌ನನ್ನು ವಾಪಸ್ ಕಳಿಸಿದ್ದಾರೆ. ಇಂದು(ಬುಧವಾರ) ಮಧ್ಯಾಹ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು  ಅವರನ್ನು ಶಾಂತಿನಗರದ ಇಡಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಿದ್ದರು. ಅದರಂತೆ ಹೇಳಿಕೆ ದಾಖಲಿಸಿಕೊಂಡು ಹರೀಶ್‌ನನ್ನು ವಾಪಸ್ ಕಳಿಸಿದ್ದು, ಅಗತ್ಯಬಿದ್ದಲ್ಲಿ ಮತ್ತೆ ವಿಚಾರಣೆಗೆ ಕರೆದಾಗ ಬರುವಂತೆ ಸೂಚನೆ ನೀಡಿದ್ದಾರೆ.

ನಾಗೇಂದ್ರಗೂ ಮುಂಚೆ ಹರೀಶ್​ನನ್ನು ಇಡಿ ವಶಕ್ಕೆ ಪಡೆದಿದ್ಯಾಕೆ?

ಇಂದು (ಜು.10) ಬೆಳ್ಳಂ ಬೆಳಗ್ಗೆ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್​​ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು, ನಾಗೇಂದ್ರ ಪಿಎ ಆಗಿರುವ ಹರೀಶ್‌ನನ್ನು ಮಾಧ್ಯಮಗಳ ಗಮನಕ್ಕೆ ಬಾರದಂತೆ ಕರೆದೊಯ್ದಿದ್ದರು. ಸತತ 7 ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಇನ್ನು ಹರೀಶ್​​ನನ್ನು ನಾಗೇಂದ್ರಗೂ ಮುಂಚೆ ಕರೆದುಕೊಂಡು ಹೋಗಿದ್ಯಾಕೆ ಎನ್ನುವುದನ್ನು ನೋಡೋದಾದರೆ, ‘ಇಡಿ ಅಧಿಕಾರಿಗಳ ಪ್ರತಿ ಪ್ರಶ್ನೆಗೂ ನಾಗೇಂದ್ರ ಅವರ ಮುಖ ನೋಡಿ ಹರೀಶ್ ಹೆದರಿಕೊಳ್ತಿದ್ದ. ಇಡಿ ಅಧಿಕಾರಿಗಳ ಯಾವುದೇ ಪ್ರಶ್ನೆಗೂ ಸಮಂಜಸ ಉತ್ತರ ಸಿಗುತ್ತಿರಲಿಲ್ಲ. ಹೆದರಿಕೆಯಿಂದ ಉತ್ತರಿಸಲಾಗದೆ ಸುಮ್ಮನೆ ಕುಳಿತಿದ್ದ. ಈ ಕಾರಣಕ್ಕೆ ಹರೀಶ್​ನನ್ನು ಇಡಿ ಅಧಿಕಾರಿಗಳು ಕಚೇರಿಗೆ ಕರೆದೊಯ್ದಿದ್ದರು.

ಇದನ್ನೂ ಓದಿ:ವಾಲ್ಮೀಕಿ ಹಗರಣ: ಇಡಿ ಸುಳಿಯಲ್ಲಿ ಸಿಲುಕಿರುವ ಬಸನಗೌಡ ದದ್ದಲ್, ನಾಗೇಂದ್ರಗೆ ಎಸ್​ಐಟಿ ಶಾಕ್

ಈ ಪ್ರಕರಣದಲ್ಲಿ ಹರೀಶ್​ ಪಾತ್ರವೇನು?

ಇನ್ನು ಈ ಪಿಎ ಹರೀಶ್​ ಮಾಜಿ ಸಚಿವ್​ ನಾಗೇಂದ್ರ ಅವರ ಪರವಾಗಿ ಹವಾಲಾ ಹಣ ಮತ್ತು ಚಿನ್ನದ ಬಿಸ್ಕೆಟ್‌ ಪಡೆದುಕೊಂಡಿದ್ದನು. ಅಲ್ಲದೆ, 50 ರಿಂದ 60 ಕೋಟಿ ರೂ. ವ್ಯವಹಾರ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನಲೆ ಹೆಚ್ಚಿನ ವಿಚಾರಣೆ ನಡೆಸಲು ಆತನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:45 pm, Wed, 10 July 24

ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ