ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಕಾಮಗಾರಿ, ಬದಲಿ ಮಾರ್ಗ ಇಲ್ಲಿದೆ

ಹೆಬ್ಬಾಳ ಪ್ರೈಓವರ್ ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿದ್ದು, ವಿಮಾನ ನಿಲ್ದಾಣ ಮತ್ತು ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ರಸ್ತೆಯಲ್ಲಿ ಬಿಡಿಎ ಮತ್ತು ಬಿಎಂಆರ್​ಸಿಎಲ್​​ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಬದಲಿ ಮಾರ್ಗ ಸೂಚಿಸಲಾಗಿದೆ.

ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಕಾಮಗಾರಿ, ಬದಲಿ ಮಾರ್ಗ ಇಲ್ಲಿದೆ
ಹೆಬ್ಬಾಳ ಫ್ಲೈಓವರ್, ಬದಲಿ ಮಾರ್ಗ
Follow us
ವಿವೇಕ ಬಿರಾದಾರ
|

Updated on: Jul 11, 2024 | 7:43 AM

ಬೆಂಗಳೂರು, ಜುಲೈ 11: ವಿಮಾನ ನಿಲ್ದಾಣ (Airport), ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಫ್ಲೈಓವರ್ (Hebbal Flyover)​ ಬೆಂಗಳೂರು-ಬಳ್ಳಾರಿ (Bengaluru-Ballari Road) ರಸ್ತೆಯಲ್ಲಿ ಬಿಡಿಎ (BDA) ಮತ್ತು ಬಿಎಂಆರ್​ಸಿಎಲ್ (BMRCL)​​ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ನಿಧಾನಗತಿಯಲ್ಲಿರುತ್ತದೆ. ಹೀಗಾಗಿ ಸೂಚಿಸಿರುವ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕೆಂದು ಬೆಂಗಳೂರು ಸಂಚಾರಿ ಪೊಲೀಸ್​ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಹೆಬ್ಬಾಳ ಪ್ರೈಓವರ್ ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿದ್ದು, ವಿಮಾನ ನಿಲ್ದಾಣ ಮತ್ತು ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಪ್ರತಿದಿನ 2.5 ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸುವುದರಿಂದ ಹಾಗೂ ಹೆಬ್ಬಾಳ ಥೈಓವರ್​ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರದಿಂದ ಸಂಚಾರ ದಟ್ಟಣೆಯುಂಟಾಗುತ್ತದೆ. ಸಂಚಾರ ದಟ್ಟಣೆಯನ್ನು ನಿವಾರಿಸಲು ವಿವಿಧ ಪೌರ ಸಂಸ್ಥೆಗಳಿಂದ ಕಾಮಗಾರಿಗಳನ್ನು ಕೈಗೊಂಡಿವೆ.

ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಯಲ್ಲಿ 4 ದಿನ ಸಂಚಾರ ಬಂದ್​: ಪರ್ಯಾಯ ಮಾರ್ಗ ಸೂಚಿಸಿದ ಟ್ರಾಫಿಕ್ ​ಪೊಲೀಸ್​

ಬಿಡಿಎ ವತಿಯಿಂದ ಪ್ರೈಓವರ್ ಅಗಲೀಕರಣ ಹಾಗೂ ಬಿಎಂಆರ್‌ಸಿಎಲ್ ನಿಂದ ಮೆಟ್ರೋ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪೀಕ್ ಅವರ್ಸ್​​​ನಲ್ಲಿ ಸಂಚಾರ ನಿಧಾನಗತಿಯಲ್ಲಿರುತ್ತದೆ. ಇದರಿಂದಾಗಿ ಏರ್‌ಪೋರ್ಟ್‌ಗೆ ಚಲಿಸುವ ವಾಹನಗಳು ನಿಗದಿತ ವೇಳೆಗೆ ಏರ್‌ಪೋರ್ಟ್ ತಲುಪಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಗಧಿತ ಅವಧಿಗಿಂತ ಎರಡು ಗಂಟೆ ಮುಂಚಿತವಾಗಿ ಪ್ರಯಾಣ ಪ್ರಾರಂಭಿಸುವುದು.

ಮಾರ್ಗ ಬದಲಾವಣೆ ಇಲ್ಲಿದೆ

ಕೆ.ಆರ್​ ಪುರಂ-ಏರ್​​ಪೋರ್ಟ್​​​ ಕಡೆಗೆ ತೆರಳಲು ಬಳಸಬೇಕಾದ ಮಾರ್ಗಗಳು:

  • ಹೊರವರ್ತುಲ ರಸ್ತೆಯಲ್ಲಿ ಬಲ ತಿರುವು ಪಡೆದು ಹೆಣ್ಣೂರು ಕ್ರಾಸ್-ಬಾಗಲೂರು ರಸ್ತೆಯ ಏರ್‌ಪೋರ್ಟ್ ಪರ್ಯಾಯ ರಸ್ತೆಯ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗಬೇಕು.
  • ಹೊರವರ್ತುಲ ರಸ್ತೆಯಲ್ಲಿ ನಾಗವಾರ ಅಂಕ್ಷನ್ ಬಳ ಬಲ ತಿರುವು ಪಡೆದು ಥಣಿಸಂದ್ರ- ಹೆಗಡೆನಗರ ಮುಖ್ಯರಸ್ತೆ, ಬೆಳ್ಳಳ್ಳಿ ಸೇತುವೆ-ರೇವಾ ಜಂಕ್ಷನ್ ಮೂಲಕ ಬಲ ತಿರುವು ಪಡೆದು ಬಾಗಲೂರು ರಸ್ತೆಯ ಏರ್‌ಪೋರ್ಟ್ ಪರ್ಯಾಯ ರಸ್ತೆಯ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗಬೇಕು.

ಕೆ.ಆರ್ ಪುರಂ- ಬೆಂಗಳೂರು ಕಡೆಗೆ ಬರುವ ವಾಹನಗಳು ಬಳಸಬೇಕಾದ ಮಾರ್ಗಗಳು:

  • ಹೊರವರ್ತುಲ ರಸ್ತೆಯ ಮೂಲಕ ಚಲಿಸುವ ವಾಹನಗಳು ಐಓಸಿ-ಮುಕುಂದ ಥಿಯೇಟರ್ ರಸ್ತೆಯ ಅಂಗರಾಜಮರಂ ಮೇಲೇತುದೆ ಮಾರ್ಗ ಮೂಲಕ ನಗರದ ಕಡೆಗೆ ಹೋಗಬಹುದು.
  • ನಾಗವಾರ ಮತ್ತು ಬ್ಯಾನರಿ ರಸ್ತೆ ಮಾರ್ಗವಾಗಿ ನಗರಕ್ಕೆ ಪ್ರವೇಶಿಸಬಹುದು.

ಬೆಂಗಳೂರು-ಬಳ್ಳಾರಿ ರಸ್ತೆಯಿಂದ ನಗರದ ಕಡೆಗೆ ಬರುವ ಭಾರಿ ಮತ್ತು ಮಧ್ಯಮ ಗಾತ್ರದ ಸರಕು ಸಾಗಾಣಿಕ ವಾಹನಗಳು ಬಳಸಬೇಕಾದ ಮಾರ್ಗಗಳು:

  • ಬೆಂಗಳೂರು-ಬಳ್ಳಾರಿ ರಸ್ತೆಯಿಂದ ಬರುವ ವಾಹನಗಳು ದೇವನಹಳ್ಳಿಯ ರಾಣಿ ಕ್ರಾಸ್ ಬಳಿ ಎಡತಿರುವು ಪಡೆದು ಹೊಸಕೋಟೆ, ಕೋಲಾರ ಕಡೆಗೆ ಚಲಿಸಬೇಕು.
  • ಬೆಂಗಳೂರು-ಬಳ್ಳಾರಿ ರಸ್ತೆಯಿಂದ ಬರುವ ವಾಹನಗಳು ದೇವನಹಳ್ಳಿಯ ದೊಡ್ಡಬಳ್ಳಾಪುರ ಕ್ರಾಸ್ ಬಳಿ ಎಡತಿರುವು ಪಡೆದು ಹೊಸಕೋಟಿ, ಕೋಲಾರ ಕಡೆಗೆ ಚಲಿಸಬೇಕು.
  • ಬೆಂಗಳೂರು-ಬಳ್ಳಾರಿ ರಸ್ತೆಯಿಂದ ಬರುವ ವಾಹನಗಳು ವಿದ್ಯಾನಗರ ಕ್ರಾಸ್ ಬಳಿ ಎಡತಿರುವು ಪಡೆದು ರಜಾಕ್ ಪಾಳ್ಯ-ಬಾಗಲೂರು ಮೂಲಕ ಹೆಣ್ಣೂರು-ಕೆ.ಆರ್ ಪುರಂ ಮಾರ್ಗವಾಗಿ ನಗರದ ಕಡೆಗೆ ಚಲಿಸಬೇಕು.
  • ದೊಡ್ಡಬಳ್ಳಾಪುರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳು ರಾಜಾನುಕುಂಟೆ ಬಳಿ ಬಲ ತಿರುವು ಪಡೆದು ನೆಲಮಂಗಲ ಕಡೆಗೆ ಚಲಿಸುವುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ