ಸತೀಶ್ ಜಾರಕಿಹೊಳಿಗೆ ಮತ್ತಷ್ಟು ಬಿಗಿಯಾಗಲಿದೆ ಇಡಿ ಕುಣಿಕೆ: ದೆಹಲಿ ಅಧಿಕಾರಿಗಳಿಂದ ನಡೆಯಲಿದ್ಯಂತೆ ತನಿಖೆ

ಸಚಿವ ಸತೀಶ್ ಜಾರಕಿಹೊಳಿ ವಿರುದ್ಧದ ಇಡಿ ತನಿಖೆಯನ್ನು ದೆಹಲಿ ಘಟಕಕ್ಕೆ ವರ್ಗಾಯಿಸಲು ಸಿದ್ಧತೆ ನಡೆದಿದ್ದು, ಲೋಕೋಪಯೋಗಿ ಕಾಮಗಾರಿಗಳ ಅಕ್ರಮ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಆರೋಪದಡಿ ತನಿಖೆ ಮತ್ತಷ್ಟು ಬಿಗಿಯಾಗುವ ಲಕ್ಷಣಗಳು ಗೋಚರಿಸಿವೆ. ಮತ್ತೊಂದೆಡೆ ದಾಳಿ ವೇಳೆ ಇಡಿ ಅಧಿಕಾರಿಗಳಿಗೆ ಸತೀಶ್​​ ಜಾರಕಿಹೊಳಿ ಅವರ ಮನೆಯಲ್ಲಿ ಬಲವಾದ ಸಾಕ್ಷ್ಯಗಳು ಸಿಕ್ಕಿವೆ ಎನ್ನಲಾಗಿರುವ ಕಾರಣ ಪ್ರಕರಣ ಮಹತ್ವ ಪಡೆದುಕೊಂಡಿದೆ.

ಸತೀಶ್ ಜಾರಕಿಹೊಳಿಗೆ ಮತ್ತಷ್ಟು ಬಿಗಿಯಾಗಲಿದೆ ಇಡಿ ಕುಣಿಕೆ: ದೆಹಲಿ ಅಧಿಕಾರಿಗಳಿಂದ ನಡೆಯಲಿದ್ಯಂತೆ ತನಿಖೆ
ಸತೀಶ್ ಜಾರಕಿಹೊಳಿ
Image Credit source: Satish Jarkiholi Facebook Page
Edited By:

Updated on: Sep 25, 2026 | 9:48 AM

ಬೆಂಗಳೂರು, ಸೆಪ್ಟೆಂಬರ್​​ 25: ಜಾರಿ ನಿರ್ದೇಶನಾಲಯ (ED) ದಾಳಿ ಪ್ರಕರಣ ಸಂಬಂಧ ಸತೀಶ್ ಜಾರಕಿಹೊಳಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಪ್ರಕರಣವನ್ನ ಬೆಂಗಳೂರಿನಿಂದ ದೆಹಲಿಗೆ ಶಿಫ್ಟ್ ಮಾಡಲು ಸಿದ್ದತೆ ನಡೆದಿದ್ದು, ಬೆಂಗಳೂರು ಅಧಿಕಾರಿಗಳ ಬದಲು ದೆಹಲಿ ಅಧಿಕಾರಿಗಳಿಂದ ತನಿಖೆ ನಡೆಯಲಿದೆ. ದಾಳಿ ವೇಳೆ ಸಿಕ್ಕಿರುವ ಸಾಕ್ಷ್ಯಗಳ ಪರಿಶೀಲನೆಯನ್ನು ದೆಹಲಿ ಅಧಿಕಾರಿಗಳು ನಡೆಸಿದ್ದು, ವಿದೇಶಿ ಬಂಡವಾಳ ಮತ್ತು ಮನಿ ಲ್ಯಾಂಡರಿಂಗ್​​ ವಿಚಾರವಾಗಿ ತನಿಖೆ ನಡೆಯಲಿದೆ. ಬೆಂಗಳೂರು ಇಡಿ ಅಧಿಕಾರಿಗಳು ಅನೇಕ ಹೈಫ್ರೋಫೆಲ್ ಕೇಸ್​​ಗಳ ತನಿಖೆ ನಡೆಸುತ್ತಿರುವ ಕಾರಣ, ದೆಹಲಿ ಅಧಿಕಾರಿಳಿಗೆ ಸತೀಶ್ ಜಾರಕಿಹೊಳಿ ಕೇಸ್ ವಹಿಸಲಾಗಿರುವ ಮಾಹಿತಿ ಇದೆ.

ದಾಳಿ ವೇಳೆ ಸಿಕ್ಕಿವೆ ಬಲವಾದ ಸಾಕ್ಷ್ಯಗಳು!

ಮತ್ತೊಂದೆಡೆ ದಾಳಿ ವೇಳೆ ಇಡಿ ಅಧಿಕಾರಿಗಳಿಗೆ ಸತೀಶ್​​ ಜಾರಕಿಹೊಳಿ ಅವರ ಮನೆಯಲ್ಲಿ ಬಲವಾದ ಸಾಕ್ಷ್ಯಗಳು ಸಿಕ್ಕಿವೆಯಂತೆ. ಸಂಬಂಧಿಕರು, ಸಹಚರರ ಬಳಿಯೂ ಸಾಕ್ಷ್ಯ ಪತ್ತೆಯಾಗಿದೆ ಕೇಂದ್ರದಿಂದ ಬಂದಂತ ಅನುದಾನದಲ್ಲಿ ಕ್ಯಾಪಿಟಲ್ ಅಸೋಸಿಯಟ್ಸ್ ಸ್ಕೀಮ್ ಅಡಿ ನಡೆದಿರುವ ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ಭಷ್ಟಚಾರ ಪತ್ತೆಯಾಗಿದೆ. ರಸ್ತೆ ಕಾಮಗಾರಿಗಳ ಗುತ್ತಿಗೆಯಲ್ಲಿ ಭಾರಿ ಅಕ್ರಮ ನಡೆದಿರುವ ಸಂಬಂಧ ಆಧಾರಗಳು ಸಿಕ್ಕಿವೆ ಎನ್ನಲಾಗಿದೆ.

ಇದನ್ನೂ ಓದಿ:  ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್​​ ಪ್ರಕರಣ: ತನಿಖೆಗಾಗಿ ಖುದ್ದು ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್

ರಾಜ್ಯದಲ್ಲಿ 110 ಕಿ.ಮೀ ಉದ್ದದ ಮೂರು ರಸ್ತೆ ಕಾಮಗಾರಿಗಳ ಸಂಬಂಧ 3,190 ಕೋಟಿ ರೂ. ಅನುಮೋದನೆ ನೀಡಲಾಗಿತ್ತು. ರಾಜ್ಯ ಸರ್ಕಾರದ 40% ಪಾಲು ಬಿಟ್ಟು ಕೇಂದ್ರ ಉಳಿದ ಹಣ ನೀಡಿತ್ತು. ಈ ಅನುದಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಇಡಿಗೆ ಸಾಕ್ಷ್ಯ ಲಭ್ಯವಾಗಿದೆ. ಪಶ್ಚಿಮ ಬಂಗಾಳ ಮೂಲದ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೆವೇಟ್​​ ಲಿಮಿಟೆಡ್​​ ಕಂಪನಿ ಸೇರಿದಂತೆ, ವಿವಿಧ ಕಂಪನಿಗಳಿಂದ ರಸ್ತೆ ಕಾಮಗಾರಿ ಗುತ್ತಿಗೆಗೆ ಲಂಚ ಪಾವತಿ ಪತ್ತೆಯಾಗಿದೆ. ಅಲ್ಲದೆ ವಿದೇಶಿ ಬಂಡವಾಳ ಹೂಡಿಕೆಯಲ್ಲೂ ನಿಯಮ ಮೀರಿದ್ದು ಕಂಡುಬಂದಿದ್ದು, ಆಫ್ರಿಕಾ ಖಂಡದ ಕಾಂಗೋ ದೇಶದ ಗಣಿ ಉದ್ಯಮದಲ್ಲಿ 40% ಪಾಲಿನ ಬಗ್ಗೆ ಮಾಹಿತಿ ಸಿಕ್ಕಿದೆಯಂತೆ. ಹೀಗಾಗಿ ಸಚಿವರಿಗೆ ಮತ್ತಷ್ಟು ಸಂಕಷ್ಟ ಫಿಕ್ಸ್​​ ಎನ್ನಲಾಗ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಕಿರಣ ಹೆಚ್​. ವಿ.
Loading...
Unable to load recommendations.
Follow Us