BYJU’S: ಇಡಿ ದಾಳಿ ವೇಳೆ ಬೈಜುಸ್ ಕಂಪನಿ ಸಿಇಒ ಪರಾರಿ, ಮಹತ್ವದ ದಾಖಲೆಗಳ ಪರಿಶೀಲನೆ

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದ ವೇಳೆ ಬೆಂಗಳೂರು ಮೂಲದ ಎಡ್-ಟೆಕ್ ಸಂಸ್ಥೆ ಬೈಜುಸ್ (BYJU’s) ಸಿಇಒ ಬೈಜು ರವೀಂದ್ರನ್ ಪರಾರಿಯಾಗಿದ್ದಾರೆ.

BYJUS: ಇಡಿ ದಾಳಿ ವೇಳೆ ಬೈಜುಸ್ ಕಂಪನಿ ಸಿಇಒ ಪರಾರಿ, ಮಹತ್ವದ ದಾಖಲೆಗಳ ಪರಿಶೀಲನೆ
ಬೈಜುಸ್ ಸಿಇಒ ಮನೆ ಹಾಗೂ ಕಚೇರಿ ಮೇಲೆ ಇಡಿ ದಾಳಿ
Rakesh Nayak Manchi

Updated on: Apr 29, 2023 | 9:48 PM

ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ (Enforcement Directorate) ದಾಳಿ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರು ಮೂಲದ ಎಡ್-ಟೆಕ್ ಸಂಸ್ಥೆ ಬೈಜುಸ್ (BYJU’s) ಸಿಇಒ ಬೈಜು ರವೀಂದ್ರನ್ ಪರಾರಿಯಾಗಿದ್ದಾರೆ. ಥಿಂಕ್ ಆ್ಯಂಡ್ ಲರ್ನ್ ಹೆಸರಿನಲ್ಲಿ ಕಂಪನಿ ನಡೆಸುತ್ತಿದ್ದ ರವೀಂದ್ರನ್​ ವಿರುದ್ಧ 28 ಸಾವಿರ ಕೋಟಿ ವಿದೇಶಿ ಬಂಡವಾಳ ನೇರ ಹೂಡಿಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಕಂಪನಿಯಿಂದ ವಿವಿಧ ದೇಶಗಳಿಗೆ 9,754 ಕೋಟಿ ಹಣ ರವಾನೆ ಮಾಡುವ ಮೂಲಕ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡಿದ ಹಿನ್ನೆಲೆ ಇಡಿ ಅಧಿಕಾರಿಗಳು ರವೀಂದ್ರನ್ ಅವರಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರು. ಆದರೆ ಪ್ರತಿಬಾರಿಯೂ ರವೀಂದ್ರನ್ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಫೆಮಾದ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ ಇಡಿ ಅಧಿಕಾರಿಗಳು, ಬೈಜು ರವೀಂದ್ರನ್ ಮತ್ತು ಅವರ ಕಂಪನಿ ‘ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್’ಗೆ ಸೇರಿದ ಮೂರು ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಬೈಜುಸ್ ಕಂಪನಿ ವ್ಯವಹಾರ ನಡೆಸಿರುವ ಬ್ಯಾಂಕ್ ಖಾತೆಗಳ ಶೋಧ ನಡೆಸಿದ್ದು, ಬೈಜುಸ್ ಕಂಪನಿ ಒದಗಿಸಿದ ಅಂಕಿಅಂಶಗಳನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಮಾತ್ರವಲ್ಲದೆ ಕೆಲವೊಂದು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಯ ಮೇಲೆ ಇಡಿ ದಾಳಿ; ಚೀನಾಕ್ಕೆ ರೂ.82 ಕೋಟಿ ರವಾನಿಸಿರುವ ಆರೋಪ

2011 ರಿಂದ 2023 ರ ಅವಧಿಯಲ್ಲಿ ಕಂಪನಿಯು ₹ 28,000 ಕೋಟಿಗಳಷ್ಟು (ಅಂದಾಜು) ವಿದೇಶಿ ನೇರ ಹೂಡಿಕೆಯನ್ನು ಸ್ವೀಕರಿಸಿದೆ ಎಂದು FEMA ಹುಡುಕಾಟಗಳು ಬಹಿರಂಗಪಡಿಸಿವೆ ಎಂದು ತನಿಖಾ ಸಂಸ್ಥೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ. ಇದೇ ಅವಧಿಯಲ್ಲಿ ಕಂಪನಿಯು ಸಾಗರೋತ್ತರ ನೇರ ಹೂಡಿಕೆಯ ಹೆಸರಿನಲ್ಲಿ ವಿವಿಧ ವಿದೇಶಿ ಸಂಸ್ಥೆಗಳಿಗೆ ಸುಮಾರು ₹ 9,754 ಕೋಟಿಗಳನ್ನು ಕಳುಹಿಸಿದೆ ಎಂದು ತಿಳಿಸಿದೆ.

BYJU’s ಸುಮಾರು 944 ಕೋಟಿ ರೂ.ಗಳನ್ನು ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚಗಳ ಅಡಿಯಲ್ಲಿ ನೋಂದಾಯಿಸಿದೆ, ಇದರಲ್ಲಿ ವಿದೇಶಿ ನ್ಯಾಯವ್ಯಾಪ್ತಿಗೆ ರವಾನೆ ಮಾಡಿದ ಮೊತ್ತವೂ ಸೇರಿದೆ. 2020-2021ರ ಆರ್ಥಿಕ ವರ್ಷದಿಂದ ಕಂಪನಿಯು ತನ್ನ ಹಣಕಾಸು ವರದಿಗಳನ್ನು ಸಿದ್ಧಪಡಿಸಿಲ್ಲ ಮತ್ತು ಅದರ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಿಲ್ಲ ಎಂದು ಆರೋಪಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:44 pm, Sat, 29 April 23

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Loading...
Unable to load recommendations.
Follow Us