AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌಜನ್ಯ ಪ್ರಕರಣ ಮರುತನಿಖೆ ಚುರುಕು; ಒಂದೇ ದಿನ ಎಸ್​ಐಟಿ ಮುಂದೆ ಸಾಲು ಸಾಲು ವಿಚಾರಣೆ!

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಮಂಗಳೂರಿನಲ್ಲಿ SIT ಅಧಿಕಾರಿಗಳು ಒಂದೇ ದಿನ ಹಲವು ಪ್ರಮುಖ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದಾರೆ. ಸಂತೋಷ್ ರಾವ್ ವೈದ್ಯಕೀಯ ಪರೀಕ್ಷೆ ನಡೆಸಿದ್ದ ಫೊರೆನ್ಸಿಕ್ ತಜ್ಞ ಡಾ. ಮಹಾಬಲ ಶೆಟ್ಟಿ, ಮರಣೋತ್ತರ ಪರೀಕ್ಷೆ ವೇಳೆ ಹಾಜರಿದ್ದ ವಾರ್ಡ್ ಬಾಯ್ ಅನಿಲ್ ಕುಮಾರ್ ಹಾಗೂ ಸೌಜನ್ಯ ತಾಯಿ ಕುಸುಮಾವತಿ ಅವರಿಂದ ಮಾಹಿತಿ ಸಂಗ್ರಹಿಸಲಾಗಿದೆ.

ಸೌಜನ್ಯ ಪ್ರಕರಣ ಮರುತನಿಖೆ ಚುರುಕು; ಒಂದೇ ದಿನ ಎಸ್​ಐಟಿ ಮುಂದೆ ಸಾಲು ಸಾಲು ವಿಚಾರಣೆ!
ಸೌಜನ್ಯ ಪ್ರಕರಣ ಮರುತನಿಖೆ ಚುರುಕು
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Nov 12, 2026 | 7:37 PM

Share

ಮುಖ್ಯಾಂಶಗಳು

  • ಸೌಜನ್ಯ ಪ್ರಕರಣ ಮರುತನಿಖೆಯಲ್ಲಿ ಫೊರೆನ್ಸಿಕ್ ತಜ್ಞ ಡಾ. ಮಹಾಬಲ ಶೆಟ್ಟಿ ವಿಚಾರಣೆ.
  • ಮರಣೋತ್ತರ ಪರೀಕ್ಷೆ ವೇಳೆ ಹಾಜರಿದ್ದ ವಾರ್ಡ್ ಬಾಯ್ ಅನಿಲ್ ಕುಮಾರ್‌ಗೆ SIT ಬುಲಾವ್.
  • ಸೌಜನ್ಯ ತಾಯಿ ಕುಸುಮಾವತಿ ಅವರಿಂದಲೂ ಅಧಿಕಾರಿಗಳು ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ.

ಮಂಗಳೂರು, ನವೆಂಬರ್ 12: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದೆ. ಪ್ರಕರಣದ ಹಲವು ಆಯಾಮಗಳನ್ನು ಪರಿಶೀಲಿಸುತ್ತಿರುವ ವಿಶೇಷ ತನಿಖಾ ತಂಡ, ಹಳೆಯ ತನಿಖೆಯ ಪ್ರಮುಖ ಸಾಕ್ಷಿಗಳು ಹಾಗೂ ವೈದ್ಯಕೀಯ ಪರೀಕ್ಷೆಗೆ ಸಂಬಂಧಿಸಿದ ವ್ಯಕ್ತಿಗಳ ವಿಚಾರಣೆ ನಡೆಸುತ್ತಿದೆ. ಇಂದು ಒಂದೇ ದಿನ ಫೊರೆನ್ಸಿಕ್ ತಜ್ಞರು, ಮರಣೋತ್ತರ ಪರೀಕ್ಷೆ ವೇಳೆ ಹಾಜರಿದ್ದ ವಾರ್ಡ್ ಬಾಯ್ ಹಾಗೂ ಸೌಜನ್ಯ ತಾಯಿ ಕುಸುಮಾವತಿ ಅವರನ್ನು ವಿಚಾರಣೆ ನಡೆಸಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಸಂತೋಷ್ ರಾವ್ ವೈದ್ಯಕೀಯ ವರದಿ ನೀಡಿದ್ದ ತಜ್ಞರ ವಿಚಾರಣೆ

ಪ್ರಕರಣದ ಆರೋಪಿಯಾಗಿದ್ದ ಸಂತೋಷ್ ರಾವ್‌ನ ವೈದ್ಯಕೀಯ ಪರೀಕ್ಷೆ ನಡೆಸಿದ್ದ ಫೊರೆನ್ಸಿಕ್ ತಜ್ಞ ಡಾ. ಮಹಾಬಲ ಶೆಟ್ಟಿ ಅವರನ್ನು SIT ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು. ಅಂದು ಸಂತೋಷ್ ರಾವ್ ದೇಹದಲ್ಲಿ 17 ಗಾಯಗಳಿದ್ದವು ಎಂದು ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆದ ಸಂದರ್ಭ, ಗಾಯಗಳ ಸ್ವರೂಪ ಹಾಗೂ ಅಂದು ನೀಡಿದ್ದ ವರದಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ವಿಚಾರಣೆ ಮುಗಿಸಿ ಹೊರಬಂದ ಡಾ. ಮಹಾಬಲ ಶೆಟ್ಟಿ, SIT ವಿಚಾರಣೆಗೆ ಕರೆದಿದ್ದರಿಂದ ಬಂದಿದ್ದೇನೆ ಎಂದು ತಿಳಿಸಿ ಹೆಚ್ಚಿನ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.

ಮರಣೋತ್ತರ ಪರೀಕ್ಷೆ ವೇಳೆ ಹಾಜರಿದ್ದ ವಾರ್ಡ್ ಬಾಯ್ ವಿಚಾರಣೆ

ಇನ್ನು ಸೌಜನ್ಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಸಂದರ್ಭದಲ್ಲಿ ವೈದ್ಯರಿಗೆ ಸಹಾಯ ಮಾಡಿದ್ದ ವಾರ್ಡ್ ಬಾಯ್ ಅನಿಲ್ ಕುಮಾರ್ ಅವರನ್ನೂ SIT ವಿಚಾರಣೆ ನಡೆಸಿದೆ. ಅಂದು ನಡೆದ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ, ಶವದ ಪರಿಶೀಲನೆ ಹಾಗೂ ಇತರ ವಿಚಾರಗಳ ಕುರಿತು ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ವಿಚಾರಣೆ ಬಳಿಕ ಮಾತನಾಡಿದ ಅನಿಲ್ ಕುಮಾರ್, ಮರಣೋತ್ತರ ಪರೀಕ್ಷೆ ವೇಳೆ ಶವವನ್ನು ಕತ್ತರಿಸಿದ್ದ ವಿಚಾರ ಸೇರಿದಂತೆ ತಮಗೆ ತಿಳಿದಿರುವ ಮಾಹಿತಿಯನ್ನು ಅಧಿಕಾರಿಗಳ ಮುಂದೆ ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ.

ಸೌಜನ್ಯ ತಾಯಿ ಕುಸುಮಾವತಿಗೂ SIT ಬುಲಾವ್

ಇದೇ ವೇಳೆ ಸೌಜನ್ಯ ತಾಯಿ ಕುಸುಮಾವತಿ ಅವರಿಗೂ SIT ನೋಟಿಸ್ ನೀಡಿತ್ತು. ಅದರಂತೆ ಅವರು ಮಂಗಳೂರಿನ SIT ಕಚೇರಿಗೆ ಆಗಮಿಸಿದ್ದು, ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಹಿನ್ನೆಲೆ ಹಾಗೂ ಕುಟುಂಬಕ್ಕೆ ತಿಳಿದಿರುವ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

ಒಟ್ಟಿನಲ್ಲಿ, ವೈದ್ಯಕೀಯ ವರದಿ, ಮರಣೋತ್ತರ ಪರೀಕ್ಷೆ ಮತ್ತು ಹಿಂದಿನ ತನಿಖೆಯ ಪ್ರಕ್ರಿಯೆಗಳ ಮೇಲೆ SIT ವಿಶೇಷ ಗಮನಹರಿಸಿದೆ. ಹಳೆಯ ಸಾಕ್ಷ್ಯಗಳನ್ನು ಮರುಪರಿಶೀಲಿಸುತ್ತಿರುವ ಅಧಿಕಾರಿಗಳ ಮುಂದಿನ ನಡೆ ಹಾಗೂ ತನಿಖೆಯಲ್ಲಿ ಹೊರಬರುವ ಹೊಸ ಸಂಗತಿಗಳ ಬಗ್ಗೆ ಕುತೂಹಲ ಮೂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿರಾಜ್​ ಬಿ.ಯು. ಮಂಗಳೂರು
ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ
ಅರಣ್ಯ ಇಲಾಖೆಯಿಂದ 51 ಕಾವಾಡಿ ಹುದ್ದೆಗೆ ನೇಮಕಾತಿ ಸ್ಥಗಿತ
ಅರಣ್ಯ ಇಲಾಖೆಯಿಂದ 51 ಕಾವಾಡಿ ಹುದ್ದೆಗೆ ನೇಮಕಾತಿ ಸ್ಥಗಿತ
ಮೆಟ್ರೋ ಅನುದಾನ ಜಟಾಪಟಿ: ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿ ಲೈವ್
ಮೆಟ್ರೋ ಅನುದಾನ ಜಟಾಪಟಿ: ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿ ಲೈವ್
ಜೈಲಿನಿಂದ ಪರೋಲ್​​ ಮೇಲೆ ಹೊರಬಂದು ತಲೆಮರೆಸಿಕೊಂಡ ಜೀವಾವಧಿ ಶಿಕ್ಷೆ ಕೈದಿ
ಜೈಲಿನಿಂದ ಪರೋಲ್​​ ಮೇಲೆ ಹೊರಬಂದು ತಲೆಮರೆಸಿಕೊಂಡ ಜೀವಾವಧಿ ಶಿಕ್ಷೆ ಕೈದಿ
ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಆಯ್ತು ಈಗ ಬಾಡಿಗೆ ದರವೂ ಏರಿಕೆ!
ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಆಯ್ತು ಈಗ ಬಾಡಿಗೆ ದರವೂ ಏರಿಕೆ!