ಬೆಂಗಳೂರು: ವಿಹಾನ್ ಡೈರೆಕ್ಟ್ ಸೆಲ್ಲಿಂಗ್ ಇಂಡಿಯಾ ಕಚೇರಿ ಮೇಲೆ ಇಡಿ ದಾಳಿ (ED raid) ಮಾಡಿದ್ದು, 36 ಬ್ಯಾಂಕ್ ಖಾತೆಗಳಲ್ಲಿದ್ದ 90 ಕೋಟಿ ರೂಪಾಯಿ ನಗದು ಜಪ್ತಿ ಮಾಡಲಾಗಿದೆ. ಬೆಂಗಳೂರು, ಮುಂಬೈ, ಚೆನ್ನೈನಲ್ಲಿರುವ ವಿಹಾನ್ ಡೈರೆಕ್ಟ್ ಸೆಲ್ಲಿಂಗ್ ಇಂಡಿಯಾ ಪ್ರೈ.ಲಿ ಸೇರಿದ ಕಚೇರಿಗಳ ಮೇಲೆ ಏಕಕಾಲದಲ್ಲಿ ಇಡಿ ದಾಳಿ ಮಾಡಿದೆ. ಅಕ್ರಮವಾಗಿ ಹಣ ವರ್ಗಾವಣೆ ಆರೋಪದಡಿ ಇಡಿ ಅಧಿಕಾರಿಗಳ ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಇಡಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ವಿಹಾನ್ ಡೈರೆಕ್ಟ್ ಸೆಲ್ಲಿಂಗ್ ಇಂಡಿಯಾ ಪ್ರೈ.ಲಿ. ಭಾರತದಲ್ಲಿ ಕ್ಯೂನೆಟ್ ಲಿಮಿಟೆಡ್‌ನ ಮಾಸ್ಟರ್ ಫ್ರಾಂಚೈಸಿ ಆಗಿರುವ ಕಂಪನಿ ಆಗಿದೆ.
ಇದನ್ನೂ ಓದಿ: ಚೈನಾ ಮೂಲದ ಬೆಂಗಳೂರಿನಲ್ಲಿನ ಯಲ್ಲೋ ಟ್ಯೂನ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಕಚೇರಿ ಮೇಲೆ ಇಡಿ ದಾಳಿ
ಅಕ್ರಮವಾಗಿ ಹಣ ವರ್ಗಾವಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟಿ ಕುಬೇರ ಕೆಜಿಎಫ್ ಬಾಬುಗೆ (KGF Babu) ಇಡಿ ಸಮನ್ಸ್ ನೀಡಿದೆ. ವಿಚಾರಣೆಗಾಗಿ ನಾಳೆ 11ಗಂಟೆಗೆ ನವದೆಹಲಿಯ ಇಡಿ(ED) ಕಚೇರಿಗೆ ಬರುವಂತೆ ಕೆಜಿಎಫ್ ಬಾಬು ಸಮನ್ಸ್ ನೀಡಲಾಗಿದೆ. ಕಳೆದ ಮೇ ತಿಂಗಳಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಕೆಜಿಎಫ್ ಬಾಬು ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. 6 ಕಾರುಗಳಲ್ಲಿ 3 ತಂಡವಾಗಿ ಬಂದಿದ್ದ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ಉದ್ಯಮಿ ಹಾಗೂ ರಾಜಕಾರಣಿ ಕೆಜಿಎಫ್ ಬಾಬು ನಿವಾಸ ಹಾಗೂ ಕಚೇರಿಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದ್ದರು.
ಇದನ್ನೂ ಓದಿ: ನನ್ನ ವಿರೋಧಿಗಳಿಂದ ಇಡಿ ದಾಳಿ ನಡೆದಿದೆ, ಜಮೀರ್ ಅಹ್ಮದ್ಗೆ ಸಾಲ ನೀಡಿದ್ದೆ; ಕೆಜಿಎಫ್ ಬಾಬು ಸುದ್ದಿಗೋಷ್ಟಿ
ಇತ್ತೀಚೆಗೆ ಚೀನಾ ಮೂಲದ ಲೋನ್ ಕಂಪನಿಗಳಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ ಅಧಿಕಾರಿಗಳು(ಜಾರಿ ನಿರ್ದೇಶನಾಲಯ) ನಗರದ 5 ಕಡೆ ದಾಳಿ ಮಾಡಿ 78 ಕೋಟಿ ಹಣ ಜಪ್ತಿ ಮಾಡಿದ್ದರು. ಸಿಐಡಿ ಸೈಬರ್ ಕ್ರೈಂ ವಿಭಾಗದಲ್ಲಿ 18 FIR ದಾಖಲಾಗಿದ್ದವು. ಕೇಸ್ ಆಧಾರದ ಮೇಲೆ ತನಿಖೆ ನಡೆಸಿದಾಗ ಎಲ್ಲಾ ಲೋನ್ ಆ್ಯಪ್ ಗಳ ಮೂಲ ಚೀನಾವೆಂದು ಪತ್ತೆಯಾಗಿತ್ತು. ಭಾರತೀಯ ಮೂಲದ ಉದ್ಯೋಗಿಗಳನ್ನೇ ಕಂಪನಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಕಡಿಮೆ ಸಾಲ ನೀಡಿ ಅಧಿಕ ಬಡ್ಡಿ ವಸೂಲಿ ಮಾಡಿ ಗ್ರಾಹಕರಿಗೆ ಕಿರುಕುಳ ನೀಡಲಾಗುತ್ತಿತ್ತು. ವಸೂಲಿಯಾದ ಹಣವನ್ನ ಅಕ್ರಮವಾಗಿ ವಿದೇಶಿ ಖಾತೆಗಳಿಗೆ ವರ್ಗಾಯಿಸಲಾಗುತ್ತಿತ್ತು. ಸದ್ಯ ಇಡಿ ಅಧಿಕಾರಿಗಳು ದಾಳಿ ನಡೆಸಿ 78 ಕೋಟಿ ಹಣ ಜಪ್ತಿ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:24 pm, Wed, 18 January 23