ಬೆಂಗಳೂರು: ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ, ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು: ವಿಡಿಯೋ ವೈರಲ್​

|

Updated on: Oct 02, 2023 | 7:37 AM

ಆಕಸ್ಮಿಕವಾಗಿ ಎಲೆಕ್ಟ್ರಿಕ್ ​ಕಾರಿಗೆ ಬೆಂಕಿ ಹೊತ್ತಿ ಸುಟ್ಟು ಭಸ್ಮವಾಗಿರುವಂತಹ ಘಟನೆ ದಕ್ಷಿಣ ಬೆಂಗಳೂರು ಜೆಪಿ ನಗರದ ದಾಲ್ಮಿಯಾ ಮೇಲ್ಸೇತುವೆಯಲ್ಲಿ ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬೆಂಗಳೂರು: ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ, ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರು: ವಿಡಿಯೋ ವೈರಲ್​
ಬೆಂಕಿಗೆ ಆಹುತಿಯಾದ ಎಲೆಕ್ಟ್ರಿಕ್ ಕಾರು
Follow us on

ಬೆಂಗಳೂರು, ಅಕ್ಟೋಬರ್​ 02: ಆಕಸ್ಮಿಕವಾಗಿ ಎಲೆಕ್ಟ್ರಿಕ್ ​ಕಾರಿಗೆ (Electric car) ಬೆಂಕಿ ಹೊತ್ತಿ ಸುಟ್ಟು ಭಸ್ಮವಾಗಿರುವಂತಹ ಘಟನೆ ದಕ್ಷಿಣ ಬೆಂಗಳೂರು ಜೆಪಿ ನಗರದ ದಾಲ್ಮಿಯಾ ಮೇಲ್ಸೇತುವೆಯಲ್ಲಿ ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ವತಃ ಕಾರು ಮಾಲೀಕರೇ ಚಾಲಾಯಿಸುತ್ತಿದ್ದು, ಈ ವೇಳೆ ಬಾನೆಟ್​ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಅವರು
ತಕ್ಷಣ ಕಾರು ನಿಲ್ಲಿಸಿ ಹೊರಗೆ ಬಂದಿದ್ದಾರೆ. ನೋಡ ನೋಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಕಾರು ಹೊತ್ತಿ ಉರಿದಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಗೊತ್ತಾಗಿಲ್ಲ ಎಂದು ಪುಟ್ಟೇನಹಳ್ಳಿ ಪೊಲೀಸ್​ ರಾಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆಯ ವಿಡಿಯೋವನ್ನು ಸಾರ್ವಜನಿಕರು ತಮ್ಮ ಮೊಬೈಲ್​ಗಳಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ರಾಕೇಶ್​ ಪ್ರಕಾಶ್​ ಎನ್ನುವವರು ತಮ್ಮ ಎಕ್ಸ್​ನಲ್ಲಿ ಈ ಕುರಿತಾಗಿ ವಿಡಿಯೋವನ್ನು ಹಂಚಿಕೊಂಡಿದ್ದು, ಬೆಂಗಳೂರಿನ ಜೆಪಿ ನಗರದ ದಾಲ್ಮಿಯಾ ವೃತ್ತದ ಬಳಿ ಎಲೆಕ್ಟ್ರಾನಿಕ್​ ಕಾರಿಗೆ ಬೆಂಕಿಗೆ ಆಹುತಿಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಬರೆದುಕೊಂಡಿದ್ದಾರೆ.

ಘಟನೆಯಲ್ಲಿ ಎಲೆಕ್ಟ್ರಿಕ್ ಕಾರು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಇವಿಯ ನಿರ್ದಿಷ್ಟ ತಯಾರಿಕಾ ಮತ್ತು ಮಾದರಿ ಯಾವುದು ಎಂಬುವುದು ಸ್ಪಷ್ಟವಾಗಿ ಗುರುತಿಸಲಾಗಿಲ್ಲವಾದರೂ, ಇದು ನೆಟ್ಟಿಗರಲ್ಲಿ ಊಹಾಪೋಹ ಮತ್ತು ಚರ್ಚೆಗೆ ಕಾರಣವಾಗಿದೆ. ಬಹುಶಃ ಇದು ಹಳೆಯ ಮಹೀಂದ್ರಾ ಇವಿ ಇ 20 ಆಗಿರಬಹುದು ಎಂದು ಕೆಲವರು ಸೂಚಿಸಿದ್ದಾರೆ. ಆದಾಗ್ಯೂ, ಅಧಿಕಾರಿಗಳು ಅಥವಾ ವಾಹನ ತಯಾರಕರಿಂದ ಅಧಿಕೃತ ಮಾಹಿತಿ ಇಲ್ಲ.

ಇದನ್ನೂ ಓದಿ: ಹುಟ್ಟುಹಬ್ಬ ಆಚರಣೆ ವೇಳೆ ಹೀಲಿಯಂ ಬಲೂನ್ ಸ್ಪೋಟ: ಓರ್ವ ವ್ಯಕ್ತಿ ಹಾಗೂ ನಾಲ್ವರು ಮಕ್ಕಳಿಗೆ ಗಾಯ

ಕಳೆದ ತಿಂಗಳು ಚೆನ್ನೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಲೆಕ್ಟ್ರಿಕ್ ಬಸ್ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೂನಮಲ್ಲಿ ಬಳಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ವಾಹನದಿಂದ ಹೊಗೆ ಬರುತ್ತಿರುವ ಬಗ್ಗೆ ಬಸ್ ನಿರ್ವಾಹಕರು ಎಚ್ಚರಿಸಿದ ನಂತರ ಬಸ್ಸಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್​ ಪಾರಾಗಿದ್ದರು. ಈ ಬಸ್ ಅನ್ನು ಗ್ರೀನ್ ಸೆಲ್ ಮೊಬಿಲಿಟಿ ತಯಾರಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:34 am, Mon, 2 October 23