BESCOM Negligence: ಟ್ರಾನ್ಸ್​ಫಾರ್ಮರ್​ ಸ್ಫೋಟ, ಗಂಭೀರವಾಗಿ ಗಾಯಗೊಂಡಿದ್ದ ಅಪ್ಪನ ಸಾವು, ಮಗಳ ಸ್ಥಿತಿ ಗಂಭೀರ

| Updated By: ಸಾಧು ಶ್ರೀನಾಥ್​

Updated on: Mar 23, 2022 | 8:53 PM

ಮದುವೆಗೆ ಕಲ್ಯಾಣ‌ ಮಂಟಪ ಬುಕ್ ​ಮಾಡಿ ಬರುವಾಗ ಘಟನೆ ನಡೆದಿದೆ. ತಂದೆ ಶಿವರಾಜ್ ಹಾಗೂ ಚೈತನ್ ಗಂಭಿರವಾಗಿ ಗಾಯಗೊಂಡವರು.

BESCOM Negligence: ಟ್ರಾನ್ಸ್​ಫಾರ್ಮರ್​ ಸ್ಫೋಟ, ಗಂಭೀರವಾಗಿ ಗಾಯಗೊಂಡಿದ್ದ ಅಪ್ಪನ ಸಾವು, ಮಗಳ ಸ್ಥಿತಿ ಗಂಭೀರ
ಟ್ರಾನ್ಸ್​ಫಾರ್ಮರ್​ ಸ್ಫೋಟಗೊಂಡ ಸ್ಥಳ
Follow us on

ಬೆಂಗಳೂರು: ಇಂದು ಮಧ್ಯಾಹ್ನ ಬೆಂಗಳೂರಿನ ಮಂಗನಹಳ್ಳಿ ಬ್ರಿಡ್ಜ್​ ಬಳಿ ಬೆಸ್ಕಾಂ ಸಂಸ್ಥೆಯ ಟ್ರಾನ್ಸ್​ಫಾರ್ಮರ್​ ಸ್ಫೋಟಗೊಂಡು ತಂದೆ-ಮಗಳಿಗೆ ಗಂಭೀರ ಗಾಯಗಳಾಗಿದ್ದವು. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Jnanabharathi police station) ಈ ಘಟನೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ತಂದೆ ಶಿವರಾಜ್ (55) ಹಾಗೂ ಚೈತನ್ಯಾ (18) (Father and Daughter) ಅವರಿಬ್ಬರಿಗೂ ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಾವು ಬದುಕಿನ ಮಧ್ಯೆ ಅಪ್ಪ-ಮಗಳು ಹೋರಾಟ ನಡೆಸಿದ್ದರು. ತಾಜಾ ಮಾಹಿತಿ ಪ್ರಕಾರ ತಂದೆ ಶಿವರಾಜ್ ಅವರು ಅಸುನೀಗಿದ್ದಾರೆ. ಚೈತನ್ಯಾಗೆ ಚಿಕಿತ್ಸೆ ಮುಂದುವರಿದಿದೆ.

ಬೆಳಗ್ಗೆ 11.30ಕ್ಕೆ ಟ್ರಾನ್ಸ್​​ಫಾರ್ಮರ್​ನಲ್ಲಿ ಪ್ರಾಬ್ಲಂ ಇತ್ತು. ಸಮಸ್ಯೆ ಇದ್ದ ಬಗ್ಗೆ ಬೆಳಗ್ಗೆ ಬೆಸ್ಕಾಂಗೆ ಕರೆ ಮಾಡಿ ಹೇಳಿದ್ದಿವಿ. ಮೆಸೇಜ್​ ಕೂಡ ಬಂತು. ಆದರೆ, ಯಾರೂ ಕೂಡ ಬರಲಿಲ್ಲ. ಬೆಸ್ಕಾಂ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ನಡೆದಿದೆ ಎಂದು ಮೃತ ಶಿವರಾಜ್​​ ಪರಿಚಯಸ್ಥ ಅನಿಲ್ ಕುಮಾರ್ ಹೇಳಿದ್ದಾರೆ.

ಬೆಸ್ಕಾಂ ಇಇ ವಿರುದ್ಧ ಎಫ್‌ಐಆರ್ ದಾಖಲಿಸಲು ಸಚಿವ ಸೋಮಶೇಖರ್ ಸೂಚನೆ:
ಟ್ರಾನ್ಸ್​ಫಾರ್ಮರ್​ ಸ್ಫೋಟದಿಂದ ತಂದೆ ಸಾವು, ಪುತ್ರಿಗೆ ಗಾಯದ ಪ್ರಕರಣದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಸಚಿವ S.T. ಸೋಮಶೇಖರ್ ಅವರು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಂತ ನಡೆದಿದೆ. ಟ್ರಾನ್ಸ್​ಫಾರ್ಮರ್ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ. ಬೆಸ್ಕಾಂ ಇಇ ವಿರುದ್ಧ ಎಫ್‌ಐಆರ್ ದಾಖಲಿಸಲು ಜ್ಞಾನಭಾರತಿ ಠಾಣೆಯ ಇನ್ಸ್‌ಪೆಕ್ಟರ್‌ಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ಗಾಯಾಳು ಚೈತನ್ಯಾಗೆ ಎಂಗೇಜ್ಮೆಂಟ್ ಫಿಕ್ಸ್ ಆಗಿತ್ತು. ಮುಂದಿನ ವಾರ ಸಂಬಂಧಿಕರ ಮದುವೆಯೊಂದು ನಿಗದಿಯಾಗಿದೆ. ಈ ಸಂಭ್ರಮದಲ್ಲಿ ಬಟ್ಟೆ ಖರೀದಿಗಾಗಿ ಹೋಗಿ ವಾಪಸ್ ಬರ್ತಿದ್ದಾಗ ಅವಘಡ ಸಂಭವಿಸಿದೆ.

ಟ್ರಾನ್ಸ್​ಫಾರ್ಮರ್ ಬಳಿ ಹಂಪ್ ಇದ್ದು ಬೈಕ್ ನಿಧಾನ ಮಾಡಿದ್ದಾಗ ದಿಢೀರನೆ ಟ್ರಾನ್ಸ್​ಫಾರ್ಮರ್ ಬ್ಲಾಸ್ಟ್ ಆಗಿದೆ. ಟ್ರಾನ್ಸ್​ಫಾರ್ಮರ್ ಆಯಿಲ್ ಇಬ್ಬರ ಮೇಲೂ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಇಬ್ಬರೂ ಸಂಪೂರ್ಣವಾಗಿ ಸುಟ್ಟಿದ್ದು, ಇಬ್ಬರಿಗೂ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಬೆಸ್ಕಾಂ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ದಡಿ ಕೇಸ್ ದಾಖಲಿಸುತ್ತೇವೆ ಎಂದು ಗಾಯಾಳು ಯುವತಿಯ ಚಿಕ್ಕಪ್ಪ ಶ್ರೀಧರ್ ಟಿವಿ9 ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಉಪಲೋಕಾಯುಕ್ತ ಬಿ.ಎಸ್. ಪಾಟೀಲ್ ದೊಡ್ಡಮಟ್ಟದ ಅಧಿಕಾರಿಗಳೊಂದಿಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಳಿ
ಬೆಂಗಳೂರು: ಉಪಲೋಕಾಯುಕ್ತ ಬಿ.ಎಸ್. ಪಾಟೀಲ್ ಅವರು ದೊಡ್ಡಮಟ್ಟದ ಅಧಿಕಾರಿಗಳ ತಂಡದೊಂದಿಗೆ ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದಾರೆ. ಆಸ್ಪತ್ರೆಯ ಹೊರರೋಗಿಗಳ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಹೊರ ರೋಗಿಗಳ ದಾಖಲಾತಿ ಪರಿಶೀಲನೆ ನಡೆಸಿದ್ದಾರೆ. ಉಪಲೋಕಾಯುಕ್ತರು ಆಸ್ಪತ್ರೆಯ ಆಡಳಿತ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಮಾಡ್ತಿದ್ದಾರೆ. ವಿಕ್ಟೋರಿಯಾ ಮೆಡಿಕಲ್ ಸೂಪರ್ ಡೆಂಟ್ ರಮೇಶ್ ಕೃಷ್ಣರಿಂದ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ. 40 ಜನ ಉಪಲೋಕಾಯುಕ್ತ ನೇತೃತ್ವದ ಪೊಲೀಸರ ತಂಡ ದಿಢೀರ್ ಭೇಟಿ ನೀಡಿದೆ. ಓರ್ವ ರಿಜಿಸ್ಟ್ರಾರ್, 3 ಜಡ್ಜ್, 2 ಎಸ್ಪಿ, 8 ಡಿಎಸ್ ಪಿ, 15 ಇನ್ಸ್ ಪೆಕ್ಟರ್ ಗಳ ನೇತೃತ್ವದಲ್ಲಿ ಪರಿಶೀಲನೆ ನಡೆದಿದೆ.

ಮೆಡಿಸಿನ್ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನ ಉಪಲೋಕಾಯುಕ್ತರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸರಿಯಾದ ನಿರ್ವಹಣೆ ಇಲ್ಲದಿರುವುದು‌ ಕಂಡು ಬಂದಲ್ಲಿ ಸೂಕ್ರ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರಿಂದ ಸಮಸ್ಯೆಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆ ಲೋಕಾಯುಕ್ತ ದಾಳಿ ನಡೆದಿದೆ.

ಇದನ್ನೂ ಓದಿ:
Arvind Kejriwal: ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಜಕೀಯ ತೊರೆಯುತ್ತೇವೆ; ಅರವಿಂದ್ ಕೇಜ್ರಿವಾಲ್ ಸವಾಲು

ಇದನ್ನೂ ಓದಿ:
ಕಲ್ಲಿದ್ದಲು ಕೊರತೆ; ಆರ್​ಟಿಪಿಎಸ್​ನ 3 ವಿದ್ಯುತ್ ಉತ್ಪಾದನಾ ಘಟಕಗಳು ತಾತ್ಕಾಲಿಕ ಸ್ಥಗಿತ

Published On - 5:11 pm, Wed, 23 March 22