Arvind Kejriwal: ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಜಕೀಯ ತೊರೆಯುತ್ತೇವೆ; ಅರವಿಂದ್ ಕೇಜ್ರಿವಾಲ್ ಸವಾಲು
ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂದು ಹೇಳುತ್ತದೆ. ಆದರೆ ಸಣ್ಣ ಪಕ್ಷವಾದ ಆಪ್ ಮತ್ತು ಸಣ್ಣ ಚುನಾವಣೆಗೆ ಅದು ಹೆದರುತ್ತಿದೆ ಎಂದು ಕೇಜ್ರಿವಾಲ್ ಲೇವಡಿ ಮಾಡಿದ್ದಾರೆ.
ನವದೆಹಲಿ: ಮುನಿಸಿಪಲ್ ಚುನಾವಣೆ ಮುಂದೂಡಿಕೆ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal), ಈ ಚುನಾವಣೆಗಳನ್ನು ಸರಿಯಾಗಿ ನಡೆಸಿ, ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಆಮ್ ಆದ್ಮಿ ಪಾರ್ಟಿ (AAP) ರಾಜಕೀಯದಿಂದ ದೂರ ಸರಿಯಲಿದೆ ಎಂದು ಸವಾಲು ಹಾಕಿದ್ದಾರೆ. ದೆಹಲಿಯಲ್ಲಿ ಮೂರು ನಾಗರಿಕ ಸಂಸ್ಥೆಗಳಾದ ಉತ್ತರ, ಪೂರ್ವ ಮತ್ತು ದಕ್ಷಿಣವನ್ನು ಏಕೀಕರಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ಈ ಹೇಳಿಕೆಗಳನ್ನು ನೀಡಿದ್ದಾರೆ.
“ಬಿಜೆಪಿ ಎಂಸಿಡಿ ಚುನಾವಣೆಯನ್ನು ಸಕಾಲಿಕದಲ್ಲಿ ನಡೆಸಿ, ಗೆದ್ದರೆ ನಾವು (ಎಎಪಿ) ರಾಜಕೀಯವನ್ನು ತೊರೆಯುತ್ತೇವೆ” ಎಂದು ಕೇಜ್ರಿವಾಲ್ ಮಾಧ್ಯಮಗಳ ಮುಂದೆ ಸವಾಲು ಹಾಕಿದ್ದಾರೆ. ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂದು ಹೇಳುತ್ತದೆ. ಆದರೆ ಸಣ್ಣ ಪಕ್ಷವಾದ ಆಪ್ ಮತ್ತು ಸಣ್ಣ ಚುನಾವಣೆಗೆ ಅದು ಹೆದರುತ್ತಿದೆ ಎಂದು ಕೇಜ್ರಿವಾಲ್ ಲೇವಡಿ ಮಾಡಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯನ್ನು ಬಿಜೆಪಿ ಮುಂದೂಡಿರುವುದು ಬ್ರಿಟಿಷರನ್ನು ದೇಶದಿಂದ ಓಡಿಸಿ ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಲು ತ್ಯಾಗ ಬಲಿದಾನ ಮಾಡಿದ ಹುತಾತ್ಮರಿಗೆ ಮಾಡಿದ ಅವಮಾನ. ಇಂದು ಬಿಜೆಪಿಯವರು ಸೋಲಿನ ಭಯದಿಂದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯನ್ನು ಮುಂದೂಡುತ್ತಿದ್ದಾರೆ. ನಾಳೆ ಅವರು ರಾಜ್ಯಗಳು ಮತ್ತು ದೇಶದ ಚುನಾವಣೆಗಳನ್ನು ಕೂಡ ಮುಂದೂಡುತ್ತಾರೆ ”ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪಂಜಾಬ್ನ ಅಮೃತಸರದಲ್ಲಿ ಇಂದು ಆಪ್ ವಿಜಯಯಾತ್ರೆ: ಭಗವಂತ್ ಮಾನ್, ಅರವಿಂದ್ ಕೇಜ್ರಿವಾಲ್ ಭಾಗಿ
Published On - 4:11 pm, Wed, 23 March 22