ದೇಗುಲದ ಪಕ್ಕದಲ್ಲಿನ ಚಪ್ಪಲಿ ಅಂಗಡಿ ತೆರವಿಗೆ ಆಗ್ರಹ; ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ

ಎಂಟು ಚಪ್ಪಲಿ ಅಂಗಡಿಗಳಲ್ಲಿ ಮುಸ್ಲಿಂ ವ್ಯಕ್ತಿಗಳು ಬಾಡಿಗೆಗೆ ಇದ್ರು. ಶೇಷಾದ್ರಿ ಎಂಬ ವ್ಯಕ್ತಿ ಮುಜರಾಯಿ ಇಲಾಖೆಯಿಂದ ಟೆಂಡರ್ ಪಡೆದು, ಎಂಟು ಮುಸ್ಲಿಂ ವ್ಯಕ್ತಿಗಳಿಗೆ ಚಪ್ಪಲಿ ಅಂಗಡಿಗಳನ್ನು ಬಾಡಿಗೆ ನೀಡಿದ್ದಾರೆ. ಹೀಗಾಗಿ ಈ ಚಪ್ಪಲಿ ಅಂಗಡಿಗಳನ್ನು ಇಂದು ಬಂದ್​ ಮಾಡಲಾಗಿದೆ.

ದೇಗುಲದ ಪಕ್ಕದಲ್ಲಿನ ಚಪ್ಪಲಿ ಅಂಗಡಿ ತೆರವಿಗೆ ಆಗ್ರಹ; ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ
ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ
Follow us
TV9 Web
| Updated By: preethi shettigar

Updated on:Mar 23, 2022 | 5:30 PM

ಬೆಂಗಳೂರು: ದೇಗುಲದ ಪಕ್ಕದಲ್ಲಿನ ಚಪ್ಪಲಿ ಅಂಗಡಿ ತೆರವಿಗೆ ಆಗ್ರಹಿಸಿ ಬೆಂಗಳೂರಿನಲ್ಲಿರುವ ಹಿಂದೂ ಕಾರ್ಯಕರ್ತರು ಆಂಜನೇಯ ದೇವಸ್ಥಾನದ (Temple) ಮುಂಭಾಗದ ಫುಟ್ ಪಾತ್ ಮೇಲೆ ಕೂತು ಪ್ರತಿಭಟನೆ ನಡೆಸಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಬರೋ ತನಕ ಇಲ್ಲಿಂದ ಕದಲೊದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ. ಮುಸ್ಲಿಂ ಸಮುದಾಯದವ್ರಿಗೆ, ದೇವಸ್ಥಾನದ ಮುಂದೆ ಚಪ್ಪಲಿ ಅಂಗಡಿ ಇಡಲು ಅವಕಾಶ ಕೊಟ್ಟಿದೆ. ಇದನ್ನ ನಾವು ಸಹಿಸೋದಿಲ್ಲ ಎಂದು ಪ್ರತಿಭಟನೆ (Protest) ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಸಾರ್ವಜನಿಕರು ಭಾಗಿಯಾಗುತ್ತಿದ್ದು, ನಿಧಾನಕ್ಕೆ ಹಿಂದೂ ಕಾರ್ಯಕರ್ತರ ಪ್ರತಿಭಟನೆ ಕಾವೇರುತ್ತಿದೆ. ಸದ್ಯ ಸ್ಥಳಕ್ಕೆ ಮುಜರಾಯಿ ಇಲಾಖೆಯ ತಹಸಿಲ್ದಾರ್, ಅರವಿಂದ್ ಬಾಬು, ದೇವಸ್ಥಾನದ ಆಡಳಿತ ಮಂಡಳಿಯ ಮ್ಯಾನೇಜರ್ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಸ್ಥಳಕ್ಕೆ ಉಪ್ಪಾರಪೇಟೆಯ ಇನ್ಸ್ಪೆಕ್ಟರ್ ವಸಂತ್ ಕೂಡ ಆಗಮಿಸಿದ್ದಾರೆ. ಪ್ರತಿಭಟನೆ ಹಿನ್ನಲೆಯಲ್ಲಿ ಇಂದು (ಮಾರ್ಚ್​ 23) ಒಟ್ಟು ಎಂಟು ಚಪ್ಪಲಿ ಅಗಂಡಿಗಳನ್ನು(Shopes) ಬಂದ್​ ಮಾಡಲಾಗಿದೆ.

ರಾಷ್ಟ್ರ ರಕ್ಷಣಾ ಪಡೆಯ ಪ್ರತಿಭಟನೆಯಿಂದ ಎಂಟು ಚಪ್ಪಲಿ ಅಂಗಡಿಗಳನ್ನು ಬಂದ್​ ಮಾಡಿಸಲಾಗಿದೆ. ಎಂಟು ಚಪ್ಪಲಿ ಅಂಗಡಿಗಳಲ್ಲಿ ಮುಸ್ಲಿಂ ವ್ಯಕ್ತಿಗಳು ಬಾಡಿಗೆಗೆ ಇದ್ರು. ಶೇಷಾದ್ರಿ ಎಂಬ ವ್ಯಕ್ತಿ ಮುಜರಾಯಿ ಇಲಾಖೆಯಿಂದ ಟೆಂಡರ್ ಪಡೆದು, ಎಂಟು ಮುಸ್ಲಿಂ ವ್ಯಕ್ತಿಗಳಿಗೆ ಚಪ್ಪಲಿ ಅಂಗಡಿಗಳನ್ನು ಬಾಡಿಗೆ ನೀಡಿದ್ದಾರೆ. ಹೀಗಾಗಿ ಈ ಚಪ್ಪಲಿ ಅಂಗಡಿಗಳನ್ನು ಇಂದು ಬಂದ್​ ಮಾಡಲಾಗಿದೆ.

ಉತ್ತರ ಕನ್ನಡ: ಪ್ರತಿಭಟನೆ ವೇಳೆ ವಿಷ ಕುಡಿಯಲು ಯತ್ನಿಸಿದ ವ್ಯಕ್ತಿ

ಪ್ರವರ್ಗ 1ರ ಬದಲಿಗೆ ಮೊದಲಿನಂತೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ವಿತರಿಸುವಂತೆ ಬೇಡಿಕೆ ಇಟ್ಟು, ಭಟ್ಕಳ ಪಟ್ಟಣದ ಶಂಶುದ್ದೀನ್ ವೃತ್ತದ ಬಳಿ ಮೊಗೇರ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ. ಬೃಹತ್ ಪ್ರತಿಭಟನಾ ಮೆರವಣಿಗೆ, ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಂಡಿರುವ ಮೊಗೇರ ಸಮುದಾಯ, ವೆಂಕಟಾಪುರದಿಂದ ಪಟ್ಟಣದ ಮಿನಿವಿಧಾನಸೌಧವರೆಗೆ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಉಮೇಶ ಮೊಗೇರ ಎಂಬ ವ್ಯಕ್ತಿ ವಿಷ ಕುಡಿಯಲು ಯತ್ನಿಸಿದ್ದಾರೆ. ಸಮುದಾಯದ ಮುಖಂಡರು, ಪೊಲೀಸರ ಮನವೊಲಿಕೆ ಬಳಿಕ ಆತ್ಮಹತ್ಯೆ ಯತ್ನವನ್ನು ಉಮೇಶ್ ಕೈಬಿಟ್ಟಿದ್ದಾರೆ.

ಕೊಲ್ಲೂರು ದೇವಸ್ಥಾನದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ ಹೇರುವಂತೆ ಮನವಿ

ಕೊಲ್ಲೂರು ದೇವಸ್ಥಾನದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ ಹೇರುವಂತೆ ಹಿಂದು ಸಂಘಟನೆಗಳು ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹಿಂದೂಯೇತರರಿಗೆ ಅಂಗಡಿ ಮುಂಗಟ್ಟು ಬಾಡಿಗೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಹಿಂದು ಸಂಘಟನೆಗಳಿಗೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸಂಧ್ಯಾ ರಮೇಶ್ ಸಾಥ್ ನೀಡಿದ್ದಾರೆ. ಕಾಪು ಮಾರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಷ್ಟವಾಗಿತ್ತು. ಈಗ ಕೊಲ್ಲೂರಿನಲ್ಲಿ ಈ ಅಭಿಯಾನ ಆರಂಭವಾಗಿದೆ.

ಚಿಕ್ಕಮಗಳೂರಿನಲ್ಲೂ ಮುಸ್ಲಿಂ ವ್ಯಾಪಾರಿಗಳ ನಿಷೇಧಕ್ಕೆ ಒತ್ತಾಯ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಜಾತ್ರೆಗೆ ನಿಷೇಧಿಸುವಂತೆ ಮನವಿ ಮಾಡಿದ್ದಾರೆ. ದೇಗುಲ, ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದಂತೆ ಆಗ್ರಹಿಸಿದ್ದಾರೆ. ಚಿತ್ರವಳ್ಳಿ, ಕಿಗ್ಗಾ ಜಾತ್ರೆಯಲ್ಲಿ ನಿರ್ಬಂಧ ವಿಧಿಸಲು ಮನವಿ ಮಾಡಿದ್ದಾರೆ. ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡದಂತೆ‌ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Hijab: ಹಿಜಾಬ್ ತೀರ್ಪು ವಿರೋಧಿಸಿ ಕರ್ನಾಟಕ ಬಂದ್​ ಕರೆಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ

ಬಿಜೆಪಿ, ಆದಿತ್ಯನಾಥರನ್ನು ಅಧಿಕಾರದಿಂದ ಕೆಳಗಿಳಿಸಲು ರೈತರ ಪ್ರತಿಭಟನೆ ನಡೆಸಿದ್ದು ಎಂದು ಒಪ್ಪಿಕೊಂಡ ಯೋಗೇಂದ್ರ ಯಾದವ್ ​​; ವಿಡಿಯೊ ವೈರಲ್

Published On - 5:02 pm, Wed, 23 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ