
ಬೆಂಗಳೂರು: ವಾರಸುದಾರರಿಲ್ಲದ ಅಪರಿಚಿತ ಶವಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ. ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ವಿಚಾರವಾಗಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವ್ಯಕ್ತಿ ಮೃತಪಟ್ಟಿದ್ದರ ಸೂಚನೆ ಕೊಟ್ರು ಯಾರು ವಾರಸುದಾರರು, ಸಂಬಂಧಿಕರು ಬಂದಿರಲಿಲ್ಲ ಹೀಗಾಗಿ ಶವವನ್ನು ಪೊಲೀಸರೆ ಖುದ್ದಾಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಸಂಬಂಧಿಕರು ಮಾಡಬೇಕಾದ ಅಂತಿಮ ವಿಧಿ ವಿಧಾನವನ್ನು ಮಾನವೀಯತೆ ದೃಷ್ಟಿಯಿಂದ ಪೊಲೀಸರೇ ಮಾಡಿ ಮುಗಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಕೆಲಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
Published On - 4:06 pm, Mon, 17 February 20