ಬೆಂಗಳೂರು ಸಂಚಾರ ದಟ್ಟಣೆ ಕುರಿತ ಅಧಿಕಾರಿಗಳ ಸಿಟಿ ರೌಂಡ್ಸ್ ಅಂತ್ಯ: ಶೀಘ್ರ ಟ್ರಾಫಿಕ್ ಸಮಸ್ಯೆ ಬಗೆಹರಿಸುವಿಕೆಗೆ ಕ್ರಮ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 29, 2022 | 7:06 AM

ಟ್ರಾಫಿಕ್ ನಿಯಂತ್ರಣಕ್ಕೆ ಕೆಲ ಕಾರ್ಯಕ್ರಮ ಹಮ್ಮಿಕೊಳುತ್ತೇವೆ. ಹೆಬ್ಬಾಳದಲ್ಲಿ ಮೂರ್ನಾಲ್ಕು ಕಡೆಗಳಲ್ಲಿ ಟ್ರಾಫಿಕ್ ಆಗುತ್ತಿದೆ. ಅದನ್ನ ಸರಿಪಡಿಸುವ ಬಗ್ಗೆ ಈಗಾಗಲೇ ಚರ್ಚೆ ಮಾಡಿದ್ದೇವೆ ಎಂದು ಬಿಬಿಎಂಪಿ ಕಮಿಷನರ್ ತುಷಾರ್​ ಗಿರಿನಾಥ್​​ ಹೇಳಿದರು.

ಬೆಂಗಳೂರು ಸಂಚಾರ ದಟ್ಟಣೆ ಕುರಿತ ಅಧಿಕಾರಿಗಳ ಸಿಟಿ ರೌಂಡ್ಸ್ ಅಂತ್ಯ: ಶೀಘ್ರ ಟ್ರಾಫಿಕ್ ಸಮಸ್ಯೆ ಬಗೆಹರಿಸುವಿಕೆಗೆ ಕ್ರಮ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ನರದಲ್ಲಿ ಸಂಚಾರ ದಟ್ಟಣೆ ಕುರಿತ ಅಧಿಕಾರಿಗಳ ಸಿಟಿ ರೌಂಡ್ಸ್ (City Rounds) ಅಂತ್ಯವಾಗಿದೆ. ರಾತ್ರಿ 10:30 ರಿಂದ ಮಧ್ಯರಾತ್ರಿ 2ಗಂಟೆಯವರೆಗು ಪ್ರಮುಖ ಟ್ರಾಫಿಕ್ ಸ್ಪಾಟ್​ಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಗೊರಗುಂಟೆ ಪಾಳ್ಯ, ಹೆಬ್ಬಾಳ, KR ಪುರಂ ಭಾಗದ ಟ್ರಾಫಿಕ್ ದಟ್ಟನೆ ಬಗ್ಗೆ ಚರ್ಚೆ ಮಾಡಿದ್ದು, ಶೀಘ್ರ ಸಮಸ್ಯೆ ಬಗೆಹರಿಸುವ ಬಗ್ಗೆ ಅಧಿಕಾರಿಗಳು ಆಲೋಚಿಸಲಿದ್ದಾರೆ. ರಸ್ತೆ ಗುಂಡಿ ಮುಚ್ಚುವಿಕೆ, ರಸ್ತೆ ನಿರ್ಮಾಣ, ಬೀದಿ ದೀಪ ಅಳವಡಿಕೆ, ಪಾದಚಾರಿ ಮಾರ್ಗ, ನೀರು ನಿಲ್ಲುವ ಸ್ಥಳಗಳ ಸಮಸ್ಯೆಗೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ. BMTC ಬಸ್ ನಿಲುಗಡೆ ಬಗ್ಗೆ ಗಮನ ಹರಿಸಲಾಗುವುದು, ಸಂಚಾರಿ ನಿಯಮ ಪಾಲನೆ ಹೀಗೆ ಎಲ್ಲಾ ಸಮಸ್ಯೆ ಬಗೆಹರಿಸುವ ಬಗ್ಗೆ ಕ್ರಮವಹಿಸಲು ನಿರ್ಧರಿಸಲಾಗಿದೆ. ಆಡಳಿತಧಿಕಾರಿ ರಾಕೇಶ್ ಸಿಂಗ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸಂಚಾರಿ ಜಂಟಿ ಆಯುಕ್ತ ರವಿಕಾಂತೆ ಗೌಡ, ಡಿಸಿಪಿ ಕುಲದೀಪ್ ಜೈನ್, ಬಿಎಂಟಿಸಿ ಎಂಡಿ ಸತ್ಯವತಿ ಸೇರಿದಂತೆ ಹಲವು ಅಧಿಕಾರಿಗಳು ರೌಂಡ್ಸ್​​​ನಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ‘ಸಲಾರ್’ ಚಿತ್ರದ ಬಗ್ಗೆ ಹೊಸ ಅಪ್​ಡೇಟ್​; ಯಾವ ಹಂತದಲ್ಲಿದೆ ಪ್ರಶಾಂತ್ ನೀಲ್-ಪ್ರಭಾಸ್ ಸಿನಿಮಾ?

ಸಿಟಿ ರೌಂಡ್ಸ್​ ಬಳಿಕ ಬಿಬಿಎಂಪಿ ಕಮಿಷನರ್ ತುಷಾರ್​ ಗಿರಿನಾಥ್​​ ಪ್ರತಿಕ್ರಿಯೆ ನೀಡಿದ್ದು, ಟ್ರಾಫಿಕ್ ನಿಯಂತ್ರಣಕ್ಕೆ ಕೆಲ ಕಾರ್ಯಕ್ರಮ ಹಮ್ಮಿಕೊಳುತ್ತೇವೆ. ಹೆಬ್ಬಾಳದಲ್ಲಿ ಮೂರ್ನಾಲ್ಕು ಕಡೆಗಳಲ್ಲಿ ಟ್ರಾಫಿಕ್ ಆಗುತ್ತಿದೆ. ಅದನ್ನ ಸರಿಪಡಿಸುವ ಬಗ್ಗೆ ಈಗಾಗಲೇ ಚರ್ಚೆ ಮಾಡಿದ್ದೇವೆ. ಹೇಗಾದರು ಮಾಡಿ ಶೇ.30ರಷ್ಟು ಟ್ರಾಫಿಕ್​ ಕಡಿಮೆ ಮಾಡುತ್ತೇವೆ. ಕೆ.ಆರ್​.ಪುರಂನಲ್ಲಿ ರಸ್ತೆಯಲ್ಲೇ ಬಸ್​ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಟ್ರಾಫಿಕ್ ಆಗುತ್ತಿದೆ. ಕಾಮಗಾರಿ ನಡೆಯುತ್ತಿರುವುದರಿಂದ ಬಸ್​ಗಳಿಗೆ ಜಾಗ ಇಲ್ಲ. ಶೀಘ್ರವಾಗಿ ಕಾಮಗಾರಿ ಮುಗಿಸಲು ಸೂಚನೆ ನೀಡಲಾಗಿದೆ. BMRCLನವರು ಜು.17ರೊಳಗೆ ಮುಗಿಸುವುದಾಗಿ ಹೇಳಿದ್ದಾರೆ. ವಾಹನ ಸಂಚಾರ ಹೆಚ್ಚಳ ಹಿನ್ನೆಲೆ ರಸ್ತೆಯಲ್ಲಿ ಗುಂಡಿ ಬೀಳುತ್ತಿವೆ. ಸಮರೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಆಗುತ್ತಿದೆ ಎಂದು ನಗರದಲ್ಲಿ BBMP ಕಮಿಷನರ್ ತುಷಾರ್​ ಗಿರಿನಾಥ್ ಹೇಳಿದರು.

ಅಧಿಕಾರಿಗಳಿಗೆ ಸಿಎಂ ಸೂಚನೆ:

ನಗರದಲ್ಲಿ ಟ್ರಾಫಿಕ್ ನಿಯಂತ್ರಣ ಬಗ್ಗೆ ಈಗಾಗಲೇ ಸಭೆ ನಡೆಸಿರುವ ಸಿಎಂ ಬೊಮ್ಮಾಯಿ, ಟ್ರಾಫಿಕ್ ಜಾಮ್​ ಸ್ಥಳಗಳೆನಿಸಿದ ಹೆಬ್ಬಾಳ ಫ್ಲೈಓವರ್ ಮತ್ತು ಸಿಲ್ಕ್​ ರೋಡ್ ಜಂಕ್ಷನ್ ಸೇರಿ 10 ಸ್ಥಳಗಳಲ್ಲಿ ವಾಹನಸಂದಣಿ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: House Construction: ಚಾಣಕ್ಯ ನೀತಿಯ ಪ್ರಕಾರ ಈ ಜಾಗದಲ್ಲಿ ಮನೆಗಳನ್ನು ನಿರ್ಮಿಸಲೇ ಬಾರದು, ಅದು ಎಲ್ಲೆಲ್ಲಿ ಗೊತ್ತಾ?