‘ಸಲಾರ್’ ಚಿತ್ರದ ಬಗ್ಗೆ ಹೊಸ ಅಪ್​ಡೇಟ್​; ಯಾವ ಹಂತದಲ್ಲಿದೆ ಪ್ರಶಾಂತ್ ನೀಲ್-ಪ್ರಭಾಸ್ ಸಿನಿಮಾ?

‘ಕೆಜಿಎಫ್ 2’ ತೆರೆಕಂಡು ಇನ್ನೇನು ‘ಸಲಾರ್’ ಸಿನಿಮಾದ ಶೂಟಿಂಗ್ ಆರಂಭವಾಯಿತು ಎನ್ನುವಾಗ ಪ್ರಭಾಸ್ ಶಸ್ತ್ರಚಿಕಿತ್ಸೆಗೆ ಒಳಗಾದರು. ಈಗ ಅವರು ಒಂದು ತಿಂಗಳು ವಿಶ್ರಾಂತಿ ಪಡೆದು ಶೂಟಿಂಗ್ ಸೆಟ್​ಗೆ ಆಗಮಿಸಿದ್ದಾರೆ.

‘ಸಲಾರ್’ ಚಿತ್ರದ ಬಗ್ಗೆ ಹೊಸ ಅಪ್​ಡೇಟ್​; ಯಾವ ಹಂತದಲ್ಲಿದೆ ಪ್ರಶಾಂತ್ ನೀಲ್-ಪ್ರಭಾಸ್ ಸಿನಿಮಾ?
ಶ್ರುತಿ-ಪ್ರಭಾಸ್
TV9kannada Web Team

| Edited By: Rajesh Duggumane

Jun 29, 2022 | 6:35 AM

ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಬಗ್ಗೆ ಜನರಲ್ಲಿ ಸಾಕಷ್ಟು ನಿರೀಕ್ಷೆಗಳು ಸೃಷ್ಟಿ ಆಗಿವೆ. ಅವರ ನಿರ್ದೇಶನದ ‘ಸಲಾರ್’ ಸಿನಿಮಾದ ಅಪ್​ಡೇಟ್​ಗಾಗಿ ಫ್ಯಾನ್ಸ್ ಕಾದು ಕೂತಿದ್ದಾರೆ. ‘ಕೆಜಿಎಫ್ 2’ (KGF:Chapter 2) ತೆರೆಕಂಡ ನಂತರದಲ್ಲಿ ಪ್ರಶಾಂತ್ ನೀಲ್ ಅವರು ಈ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರಭಾಸ್ (Prabhas) ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಶ್ರುತಿ ಹಾಸನ್ ಜತೆಯಾಗಿದ್ದಾರೆ.  ಸದ್ಯ, ಸಿನಿಮಾ ಬಗ್ಗೆ ಹೊಸ ಅಪ್​ಡೇಟ್ ಒಂದು ಸಿಕ್ಕಿದೆ. ಸಿನಿಮಾ ಯಾವ ಹಂತದಲ್ಲಿದೆ ಎನ್ನುವ ಬಗ್ಗೆ ಸಿನಿಮಾ ತಂಡದ ಮೂಲಗಳಿಂದ ಮಾಹಿತಿ ಸಿಕ್ಕಿದೆ.

‘ಸಲಾರ್’ ಸಿನಿಮಾ ಕೆಲಸಗಳು ಆರಂಭವಾಗಿ ಹಲವು ಸಮಯ ಕಳೆದಿದೆ. ಕೊವಿಡ್ ಕಾರಣದಿಂದ ಚಿತ್ರದ ಶೂಟಿಂಗ್ ವಿಳಂಬವಾಯಿತು. ಪ್ರಶಾಂತ್ ನೀಲ್ ‘ಕೆಜಿಎಫ್ 2’ ಚಿತ್ರದ ಬಿಡುಗಡೆ ಕೆಲಸದಲ್ಲಿ ಬ್ಯುಸಿ ಆಗಿದ್ದರಿಂದ ‘ಸಲಾರ್’ ಬಗ್ಗೆ ಗಮನ ಹರಿಸಲು ಅವರಿಗೆ ಸಾಧ್ಯವಾಗಿಲ್ಲ. ‘ಕೆಜಿಎಫ್ 2’ ತೆರೆಕಂಡು ಇನ್ನೇನು ‘ಸಲಾರ್’ ಸಿನಿಮಾದ ಶೂಟಿಂಗ್ ಆರಂಭವಾಯಿತು ಎನ್ನುವಾಗ ಪ್ರಭಾಸ್ ಶಸ್ತ್ರಚಿಕಿತ್ಸೆಗೆ ಒಳಗಾದರು. ಈಗ ಅವರು ಒಂದು ತಿಂಗಳು ವಿಶ್ರಾಂತಿ ಪಡೆದು ಶೂಟಿಂಗ್ ಸೆಟ್​ಗೆ ಆಗಮಿಸಿದ್ದಾರೆ.

ಹೈದರಾಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ‘ಸಲಾರ್’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಪ್ರಭಾಸ್ ಹಾಗೂ ಶ್ರುತಿ ಹಾಸನ್ ಇಬ್ಬರೂ ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಮುಖ ಆ್ಯಕ್ಷನ್ ದೃಶ್ಯವೊಂದರ ಶೂಟಿಂಗ್ ನಡೆಯುತ್ತಿದೆ ಎಂದು ವರದಿ ಆಗಿದೆ. ಇಷ್ಟಾದರೂ ಅಪ್​ಡೇಟ್ ಸಿಕ್ಕಿತಲ್ಲ ಎಂದು ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಈ ಮೊದಲು ಚಿತ್ರದ ಶೇ.35 ಶೂಟಿಂಗ್ ಪೂರ್ಣಗೊಂಡಿತ್ತು.

ಮೇ ಅಂತ್ಯಕ್ಕೆ ‘ಸಲಾರ್’ ಚಿತ್ರದ ಟೀಸರ್ ರಿಲೀಸ್ ಆಗಲಿದೆ ಎನ್ನುವ ಸುದ್ದಿ ಹೊರಬಿದ್ದಿತ್ತು. ಆದರೆ, ಚಿತ್ರತಂಡದಿಂದ ಆ ರೀತಿಯ ಯಾವುದೇ ಅಪ್​ಡೇಟ್ ಬರಲಿಲ್ಲ. ‘ಸಲಾರ್’ ಸಿನಿಮಾದ ಕೆಲ ಪೋಸ್ಟರ್​ಗಳು ಮಾತ್ರ ರಿಲೀಸ್ ಆಗಿವೆ. ಅದನ್ನು ಹೊರತುಪಡಿಸಿ ಸೆಟ್​ನ ಕೆಲ ಫೋಟೋ ಹಾಗೂ ಶೂಟಿಂಗ್ ಸಂದರ್ಭದ ಕೆಲ ದೃಶ್ಯಗಳು ಈ ಮೊದಲು ಲೀಕ್ ಆಗಿದ್ದವು. ಈ ಬಗ್ಗೆ ಚಿತ್ರತಂಡ ಅಸಮಾಧಾನ ಹೊರಹಾಕಿತ್ತು.

‘ಕೆಜಿಎಫ್ 2’ ಬಳಿಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ‘ಸಲಾರ್’ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಈ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ಬಿಗ್ ಬಜೆಟ್​ನಲ್ಲಿ ಚಿತ್ರ ಮೂಡಿ ಬರುತ್ತಿದೆ.

ಇದನ್ನೂ ಓದಿ: ದುನಿಯಾ ವಿಜಯ್​ ನಟನೆಯ ತೆಲುಗು ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಂಡ ‘ಸಲಾರ್’ ಬೆಡಗಿ ಶ್ರುತಿ ಹಾಸನ್​

ಇದನ್ನೂ ಓದಿ

‘ಸಲಾರ್ ಚಿತ್ರದಲ್ಲಿ ನಾನೂ ನಟಿಸುತ್ತಿದ್ದೇನೆ’; ಬ್ರೇಕಿಂಗ್ ನ್ಯೂಸ್ ನೀಡಿದ ನಟ ಪೃಥ್ವಿರಾಜ್​ ಸುಕುಮಾರನ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada