‘ಸಲಾರ್ ಚಿತ್ರದಲ್ಲಿ ನಾನೂ ನಟಿಸುತ್ತಿದ್ದೇನೆ’; ಬ್ರೇಕಿಂಗ್ ನ್ಯೂಸ್ ನೀಡಿದ ನಟ ಪೃಥ್ವಿರಾಜ್​ ಸುಕುಮಾರನ್

‘ನೀವು ತೆಲುಗು ಸಿನಿಮಾ ಮಾಡೋದು ಯಾವಾಗ’ ಎಂಬ ಪ್ರಶ್ನೆ ಪೃಥ್ವಿರಾಜ್​ ಸುಕುಮಾರನ್​​ಗೆ ಎದುರಾಯಿತು. ಇದಕ್ಕೆ ಅವರು ಮುಚ್ಚುಮರೆ ಮಾಡದೆ ಉತ್ತರಿಸಿದ್ದಾರೆ.

‘ಸಲಾರ್ ಚಿತ್ರದಲ್ಲಿ ನಾನೂ ನಟಿಸುತ್ತಿದ್ದೇನೆ’; ಬ್ರೇಕಿಂಗ್ ನ್ಯೂಸ್ ನೀಡಿದ ನಟ ಪೃಥ್ವಿರಾಜ್​ ಸುಕುಮಾರನ್
ಪೃಥ್ವಿರಾಜ್​-ಪ್ರಭಾಸ್
TV9kannada Web Team

| Edited By: Rajesh Duggumane

Jun 26, 2022 | 7:20 AM

ಪೃಥ್ವಿರಾಜ್​ ಸುಕುಮಾರನ್​ಗೂ (Prithviraj Sukumaran) ಹಾಗೂ ವಿಜಯ್​ ಕಿರಗಂದೂರು ಒಡೆತನದ ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​ಗೂ ಒಂದು ನಂಟು ಬೆಳೆದಿದೆ. ಈ ಮೊದಲು ‘ಕೆಜಿಎಫ್ 2’ ಚಿತ್ರವನ್ನು ಪೃಥ್ವಿರಾಜ್​ ಅವರು ಮಲಯಾಳಂನಲ್ಲಿ ರಿಲೀಸ್ ಮಾಡಿದ್ದರು. ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು ಇಡೀ ತಂಡದ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಈಗ ಪೃಥ್ವಿರಾಜ್​ ಅವರು ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್​ ಕಿರಗಂದೂರು ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ‘ಸಲಾರ್’ ಚಿತ್ರದಲ್ಲಿ (Salaar Movie) ನಟಿಸುತ್ತಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಪೃಥ್ವಿರಾಜ್​ ಅವರು ಸದ್ಯ ‘ಕಡುವ’ ಸಿನಿಮಾ ಪ್ರಚಾರ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರ ಜೂನ್​ 30ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದ ಪ್ರಚಾರಕ್ಕಾಗಿ ತೆಲುಗು ನಾಡಿಗೆ ತೆರಳಿದ್ದರು. ಈ ವೇಳೆ ಅವರಿಗೆ ‘ನೀವು ತೆಲುಗು ಸಿನಿಮಾ ಮಾಡೋದು ಯಾವಾಗ’ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಅವರು ಮುಚ್ಚುಮರೆ ಮಾಡದೆ ಉತ್ತರಿಸಿದ್ದಾರೆ.

‘ನಾನು ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಡೇಟ್ಸ್​ ಹೊಂದಾಣಿಕೆ ಆಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ನೋಡುತ್ತಿದ್ದೇನೆ. ಸಲಾರ್​ ಚಿತ್ರದಲ್ಲಿ ನಾನು ಪ್ರಮುಖ ಪಾತ್ರ ಮಾಡುತ್ತಿದ್ದೇನೆ. ನನಗೆ ಎರಡು ವರ್ಷಗಳ ಹಿಂದೆಯೇ ಈ ಆಫರ್ ಬಂದಿತ್ತು. ಕಥೆ ಕೇಳಿ ಥ್ರಿಲ್​ ಆಗಿದ್ದೆ. ಹೀಗಾಗಿ, ಸಿನಿಮಾ ಒಪ್ಪಿಕೊಂಡೆ. ಪ್ರಶಾಂತ್ ನೀಲ್​ ನನ್ನ ಗೆಳೆಯ. ಹೊಂಬಾಳೆ ಫಿಲ್ಮ್ಸ್ ಜತೆಯೂ ಒಳ್ಳೆಯ ಒಡನಾಟ ಇದೆ. ಪ್ರಭಾಸ್​ ಜತೆ ಯಾರು ನಟಿಸೋಕೆ ಇಷ್ಟಪಡುವುದಿಲ್ಲ ಹೇಳಿ. ಆದರೆ, ಕೊವಿಡ್​ನಿಂದ ಸಿನಿಮಾ ಕೆಲಸಗಳು ವಿಳಂಬ ಆದವು. ಡೇಟ್ಸ್​ ಚೇಂಜ್​ ಆದವು. ಹೀಗಾಗಿ, ನನ್ನ ಬಳಿ ಡೇಟ್ಸ್ ಹೊಂದಿಸೋಕೆ ಸಾಧ್ಯವಿಲ್ಲ, ನಾನು ಈ ಸಿನಿಮಾ ಮಾಡುವುದಿಲ್ಲ ಎಂದೇ ಭಾವಿಸಿದ್ದೆ. ಆದರೆ, ಅದೇ ಸಮಯದಲ್ಲಿ ಪ್ರಭಾಸ್​ ಅವರ ಡೇಟ್ಸ್​ ಕೂಡ ಆಚೀಚೆ ಆಯಿತು.  ಈಗ ಈ ಸಿನಿಮಾಗೆ ಡೇಟ್ಸ್ ಹೊಂದಿಸಬಹುದು ಎನಿಸುತ್ತಿದೆ’ ಎಂದಿದ್ದಾರೆ ಪೃಥ್ವಿರಾಜ್​ ಸುಕುಮಾರನ್​.

ಪೃಥ್ವಿರಾಜ್ ಸುಕುಮಾರನ್ ಕೊಟ್ಟ ಹೊಸ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಮೂಡಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಮಲಯಾಳಂನ ‘ಟೈಸನ್​’ ಚಿತ್ರದಲ್ಲಿ ಪೃಥ್ವಿರಾಜ್​ ನಟಿಸಿ, ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಐಎಎಸ್​ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Tyson: ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್​ ಜತೆ ಹೊಸ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್​

ಇದನ್ನೂ ಓದಿ

‘ಕಡುವ’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿಳಿದ ಪೃಥ್ವಿರಾಜ್​ ಸುಕುಮಾರನ್​; ವೈರಲ್ ಆಯ್ತು ಫೋಟೋ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada