‘ಕೆಜಿಎಫ್ 2’ ಬಳಿಕ ಮಹತ್ವದ ಬದಲಾವಣೆ ಮಾಡಿಕೊಂಡ ಪ್ರಶಾಂತ್ ನೀಲ್; ಏನದು?
‘ಕೆಜಿಎಫ್ 2’ ಚಿತ್ರ ತೆರೆಕಂಡ ನಂತರ ಸಹಜವಾಗಿಯೇ ಪ್ರಶಾಂತ್ ನೀಲ್ ಬಗ್ಗೆ ನಿರೀಕ್ಷೆ ಹೆಚ್ಚಿದೆ. ‘ಸಲಾರ್’ ಸಿನಿಮಾ ಹೇಗಿರಬಹುದು ಎಂದು ಫ್ಯಾನ್ಸ್ ಮನಸ್ಸಲ್ಲೇ ಲೆಕ್ಕಾಚಾರ ಹಾಕಿಕೊಳ್ಳುತ್ತಿದ್ದಾರೆ.
ಪ್ರಶಾಂತ್ ನೀಲ್ ಅವರ (Prashanth Neel) ಖ್ಯಾತಿ ‘ಕೆಜಿಎಫ್ 2’ ಚಿತ್ರದಿಂದ (KGF: Chapter 2) ವಿಶ್ವ ಮಟ್ಟದಲ್ಲಿ ಪಸರಿಸಿದೆ. ಬಾಲಿವುಡ್, ಟಾಲಿವುಡ್ ಸೇರಿ ಭಾರತದ ಎಲ್ಲ ಕಡೆಗಳಲ್ಲಿ ಪ್ರಶಾಂತ್ ನೀಲ್ ಬಗ್ಗೆ ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿದೆ. ಇನ್ನು, ಟಾಲಿವುಡ್ ನಟ ಪ್ರಭಾಸ್ ಅವರು ಬ್ಯಾಕ್ ಟು ಬ್ಯಾಕ್ ಸೋಲು ಕಂಡಿದ್ದಾರೆ. ‘ಸಾಹೋ’ (Saaho Movie)ಹಾಗೂ ‘ರಾಧೆ ಶ್ಯಾಮ್’ ಸೋಲಿನಿಂದ ಕಂಗೆಟ್ಟಿದ್ದಾರೆ. ಈಗ ಇವರ ಕಾಂಬಿನೇಷನ್ನ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಈ ಚಿತ್ರಕ್ಕಾಗಿ ಪ್ರಶಾಂತ್ ನೀಲ್ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
‘ಕೆಜಿಎಫ್ 2’ ಚಿತ್ರ ತೆರೆಕಂಡ ನಂತರ ಸಹಜವಾಗಿಯೇ ಪ್ರಶಾಂತ್ ನೀಲ್ ಬಗ್ಗೆ ನಿರೀಕ್ಷೆ ಹೆಚ್ಚಿದೆ. ‘ಸಲಾರ್’ ಸಿನಿಮಾ ಹೇಗಿರಬಹುದು ಎಂದು ಫ್ಯಾನ್ಸ್ ಮನಸ್ಸಲ್ಲೇ ಲೆಕ್ಕಾಚಾರ ಹಾಕಿಕೊಳ್ಳುತ್ತಿದ್ದಾರೆ. ಇದೇ ತಿಂಗಳು ಸಿನಿಮಾದ ಟೀಸರ್ ರಿಲೀಸ್ ಆಗುವ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಹೆಚ್ಚಿಸುವ ನಿರ್ಧಾರಕ್ಕೆ ಪ್ರಶಾಂತ್ ನೀಲ್ ಬಂದಿದ್ದಾರೆ ಎನ್ನಲಾಗುತ್ತಿದೆ.
‘ರಾಧೆ ಶ್ಯಾಮ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ತೀವ್ರ ಬೇಸರ ಇದೆ. ಈ ಸಿನಿಮಾದಲ್ಲಿ ಮಾಸ್ ಅಂಶಗಳು ಇಲ್ಲ ಎನ್ನುವ ಬಗ್ಗೆ ಬೇಸರ ತೊಡಿಕೊಂಡಿದ್ದರು ಫ್ಯಾನ್ಸ್. ಮಾಸ್ ವಿಚಾರ ಇಲ್ಲದ ಕಾರಣದಿಂದಲೇ ಸಿನಿಮಾ ಫ್ಲಾಪ್ ಆಯಿತು ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಹೀಗಾಗಿ, ಮುಂದಿನ ಸಿನಿಮಾಗಳಲ್ಲಿ ಅಭಿಮಾನಿಗಳು ಪ್ರಭಾಸ್ ಚಿತ್ರದಿಂದ ಮಾಸ್ ಮಸಾಲಾವನ್ನು ನಿರೀಕ್ಷಿಸುತ್ತಿದ್ದಾರೆ. ಈ ನಿರೀಕ್ಷೆಯನ್ನು ಹುಸಿ ಮಾಡಬಾರದು ಎಂಬುದು ಪ್ರಶಾಂತ್ ನೀಲ್ ಉದ್ದೇಶ.
ಪ್ರಶಾಂತ್ ನೀಲ್ ಅವರು ಪಕ್ಕಾ ಪರ್ಫೆಕ್ಷನಿಸ್ಟ್. ಅವರು ಯಾವುದೇ ಸಿನಿಮಾ ಕೈಗೆತ್ತಿಕೊಂಡರೂ ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಯಾವುದೇ ವಿಚಾರವನ್ನು ಹೆಚ್ಚುವರಿಯಾಗಿ ತುರುಕುವುದಿಲ್ಲ. ‘ಸಲಾರ್’ ಸಿನಿಮಾದ ಕಥೆಯಲ್ಲಿ ಅವರು ಕೊಂಚ ಬದಲಾವಣೆ ಮಾಡಿಕೊಂಡ ಹೊರತಾಗಿಯೂ ಅನಾವಶ್ಯಕವಾಗಿ ಯಾವುದನ್ನೂ ಹೆಚ್ಚುವರಿಯಾಗಿ ತುರುಕುತ್ತಿಲ್ಲ ಎನ್ನಲಾಗಿದೆ.
‘ಕೆಜಿಎಫ್ 2’ ತೆರೆಕಂಡ ಬಳಿಕ ಪ್ರಶಾಂತ್ ನೀಲ್ ಒಂದು ಬ್ರೇಕ್ ತೆಗೆದುಕೊಂಡು ಕುಟುಂಬದ ಜತೆ ವೆಕೇಶನ್ಗೆ ಹೋಗಿ ಬಂದರು. ಪತ್ನಿಯ ಜತೆ ಒಂದಷ್ಟು ಸುಂದರ ಕ್ಷಣಗಳನ್ನು ಕಳೆದರು. ಈಗ ಅವರು ಮತ್ತೆ ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಶ್ರುತಿ ಹಾಸನ್ ನಾಯಕಿ. ‘ಕೆಜಿಎಫ್’ ಸರಣಿ ನಿರ್ಮಾಣ ಮಾಡಿದ್ದ ವಿಜಯ್ ಕಿರಗಂದೂರು ಅವರ ‘ಹೊಂಬಾಳೆ ಫಿಲ್ಮ್ಸ್’ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಪ್ರಭಾಸ್ ಅವರ ಲುಕ್ ಈ ಮೊದಲು ಅನಾವರಣಗೊಂಡಿತ್ತು. ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬ ಬಗ್ಗೆ ಚಿತ್ರತಂಡದಿಂದ ಘೋಷಣೆ ಆಗಿಲ್ಲ.
ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ