ಬೆಂಗಳೂರಿನಲ್ಲಿ 24 ಗಂಟೆ ಹೋಟೆಲ್, ರೆಸ್ಟೋರೆಂಟ್ ತೆರೆಯಲು ಪೊಲೀಸರಿಂದ ಅನುಮತಿ; ಈ ಜಾಗಗಳಲ್ಲಿ ಮಾತ್ರ

ರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ರಾತ್ರಿ ಹೋಟೆಲ್ ತೆರೆಯಲು ಅನುಮತಿ ನೀಡಿದ್ದು, ಈ ಕುರಿತು ಸರ್ಕಾರಕ್ಕೆ ಪೊಲೀಸ್ ಇಲಾಖೆ ವರದಿ ಸಲ್ಲಿಸಲಿದೆ.

ಬೆಂಗಳೂರಿನಲ್ಲಿ 24 ಗಂಟೆ ಹೋಟೆಲ್, ರೆಸ್ಟೋರೆಂಟ್ ತೆರೆಯಲು ಪೊಲೀಸರಿಂದ ಅನುಮತಿ; ಈ ಜಾಗಗಳಲ್ಲಿ ಮಾತ್ರ
ಸಾಂದರ್ಭಿಕ ಚಿತ್ರ
TV9kannada Web Team

| Edited By: sandhya thejappa

Jun 29, 2022 | 12:24 PM

ಬೆಂಗಳೂರು: ನಗರದಲ್ಲಿ 24 ಗಂಟೆ ಹೋಟೆಲ್ (Hotel), ರೆಸ್ಟೋರೆಂಟ್ (Restaurant) ತೆರೆಯಲು ಪೊಲೀಸರು (Police) ಕೊನೆಗೂ ಅನುಮತಿ ನೀಡಿದ್ದಾರೆ. ಆದರೆ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ರಾತ್ರಿ ಹೋಟೆಲ್ ತೆರೆಯಲು ಅನುಮತಿ ನೀಡಿದ್ದು, ಈ ಕುರಿತು ಸರ್ಕಾರಕ್ಕೆ ಪೊಲೀಸ್ ಇಲಾಖೆ ವರದಿ ಸಲ್ಲಿಸಿದೆ. ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಪ್ರಮುಖ ಬಸ್ ನಿಲ್ದಾಣಗಳಲ್ಲಿ 24 ಗಂಟೆಗಳ ಕಾಲ ಹೋಟೆಲ್ ತೆರೆಯಬಹುದು. ಈ ಜಾಗಗಳನ್ನ ಹೊರತುಪಡಿಸಿ ಬೇರೆಡೆ ತೆರೆಯಲು ಪೊಲೀಸ್ ಇಲಾಖೆ ಅವಕಾಶ ನೀಡಿಲ್ಲ.

ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್​ಗಳಲ್ಲಿ ಪ್ರಯಾಣಿಕರ ಓಡಾಟವಿರುತ್ತದೆ. ಹೀಗಾಗಿ ಈ ಜಾಗಗಳಲ್ಲಿ ಮಾತ್ರ ಹೋಟೆಲ್ ತೆರೆಯಲು ಅವಕಾಶವಿರುತ್ತದೆ. ಇದನ್ನು ಹೊರತುಪಡಿಸಿ ಬೇರೆ ಕೆಡೆ ತೆರೆಯಲು ಅವಕಾಶವಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಇನ್ನು ಬೇರೆ ಕಡೆ  ಅನುಮತಿ ಕೊಟ್ಟರೆ ಉದ್ಭವಿಸುವ ಸಮಸ್ಯೆಗಳ ಬಗ್ಗೆ ಪೊಲೀಸರು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ: Petrol Price Today: ತಿಂಗಳಿನಿಂದ ಬದಲಾಗಿಲ್ಲ ಪೆಟ್ರೋಲ್, ಡೀಸೆಲ್ ಬೆಲೆ; ದೇಶದ ವಿವಿಧ ನಗರಗಳಲ್ಲಿ ಇಷ್ಟಿದೆ ನೋಡಿ ದರ

ಇಡೀ ರಾತ್ರಿ ಹೋಟೆಲ್, ರೆಸ್ಟೋರೆಂಟ್ ತೆರೆಯಲು ಮಾಲೀಕರು ಸರ್ಕಾರ, ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು. ಮನವಿ ಹಿನ್ನೆಲೆ ಪೊಲೀಸ್ ಇಲಾಖೆ ಅನುಮತಿ ಕೊಟ್ಟಿದೆ. ಅದರೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗುತ್ತದೆ ಎಂದು ಇಲಾಖೆ ತಿಳಿಸಿದೆ.

2021ರಲ್ಲೇ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ಅನುಮತಿ ನೀಡಿತ್ತು. ಆದರೆ ಕೊರೊನಾ ಕಾರಣದಿಂದ ಇದಕ್ಕೆ ಪೊಲೀಸ್ ಇಲಾಖೆ ಸಹಮತ ನೀಡಿರಲಿಲ್ಲ. ಕೊರೊನಾ ಕಡಿಮೆಯಾಗುತ್ತಿದ್ದಂತೆ ಸರ್ಕಾರ ಮತ್ತೆ ಹೋಟೆಲ್​ ತೆರೆಯಲು ಅನುಮತಿ ನೀಡಿ ಆದೇಶ ಹೊಡಿಸಿತ್ತು. ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆ ಹೋಟೆಲ್ ಮಾಲೀಕರು ಅನುಮತಿ ನೀಡುವಂತೆ ಪೊಲೀಸರಿಗೆ ಆಗ್ರಹಿಸುತ್ತಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಟ್ರಾಫಿಕ್‌ ಜಾಮ್ ಸಮಸ್ಯೆ: ಸಿಟಿ ಟ್ರಾಫಿಕ್ ಕಂಟ್ರೋಲ್​​ಗೆ ಹೈದರಾಬಾದ್ ಮಾದರಿಯ ಹೈಟೆಕ್​ ಟೆಕ್ನಾಲಜಿ ಅಳವಡಿಕೆ

ಇದನ್ನೂ ಓದಿ

ಹೆಣ್ಮಕ್ಕಳಿಗೆ ರಕ್ಷಣೆ ನೀಡುವುದು ಕಷ್ಟ- ಆರಗ ಜ್ಞಾನೇಂದ್ರ: ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ರಾತ್ರಿ ಹೊಟೇಲ್ ತೆರೆಯಲು ಸೀಮಿತ ಪ್ರದೇಶದಲ್ಲಿ ಅವಕಾಶ ನೀಡಲಾಗಿದೆ. ಕೈಗಾರಿಕಾ, ಕಾರ್ಮಿಕ ಇಲಾಖೆ ಜೊತೆಗೆ ಸಭೆ ನಡೆಸಲಾಗಿದೆ. ಇಡೀ ಸಿಟಿಯಲ್ಲಿ ಓಪನ್ ಮಾಡಲು ಅವಕಾಶ ಕೊಟ್ಟರೆ ಕಷ್ಟ. ಹೆಣ್ಮಕ್ಕಳು ಓಡಾಡ್ತಾರೆ ರಕ್ಷಣೆ ನೀಡುವುದು ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada