ತಾರಕಕ್ಕೇರಿದ ಮೈಸೂರು ಅಭಿವೃದ್ಧಿ ಕ್ರೆಡಿಟ್ ಪಾಲಿಟಿಕ್ಸ್: ಇಂದು (ಜೂನ್ 29) ಚರ್ಚೆಗೆ ಮುಂದಾದ ಕಾಂಗ್ರೆಸ್-ಬಿಜೆಪಿ
ಇಂದು (ಜೂನ್ 29)ರ ಬೆಳಿಗ್ಗೆ 11 ಗಂಟೆಗೆ ಸಂಸದರ ಕಚೇರಿಯಲ್ಲಿ ಚರ್ಚೆ ನಡಯಲಿದ್ದು, ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರನಾಗಿ ಪ್ರತಾಪ್ ಸಿಂಹ ಎದುರು ಚರ್ಚೆಗೆ ಬರುತ್ತಿದ್ದೇನೆ. ಎರಡನೇ ಬಾರಿಗೆ ಆಹ್ವಾನ ನೀಡುತ್ತಿದ್ದು, ಈ ಬಾರಿ ಪಲಾಯನ ಮಾಡಬೇಡಿ ಎಂದು ಎಂ. ಲಕ್ಷ್ಮಣ್ ಹೇಳಿದರು.
ಮೈಸೂರು: ಮೈಸೂರು ಅಭಿವೃದ್ಧಿ ಚರ್ಚೆ (Mysore Development Credit Politics) ಗೆ ಕಾಂಗ್ರೆಸ್ ಮತ್ತು ಬಿಜೆಪಿ ಮುಂದಾಗಿದ್ದು, ಮೈಸೂರು ಅಭಿವೃದ್ಧಿ ಕ್ರೆಡಿಟ್ ಪಾಲಿಟಿಕ್ಸ್ ತಾರಕಕ್ಕೇರಿದೆ. ಬಿಜೆಪಿ ಏನು ಅಭಿವೃದ್ಧಿ ಮಾಡಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯರವರ ಪ್ರಶ್ನೆ ಹಿನ್ನೆಲೆ, ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್.ಸಿ ಮಹದೇವಪ್ಪಗೆ ಚರ್ಚೆಗೆ ಆಹ್ವಾನ ನೀಡಿದ್ದರು. ಆದರೆ ಸಿದ್ದರಾಮಯ್ಯ, ಮಹದೆವಪ್ಪ ಪರವಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಚರ್ಚೆಗಿಳಿಯಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಕಚೇರಿಯಿಂದ ಸಂಸದ ಪ್ರತಾಪ್ ಸಿಂಹ ಕಚೇರಿವರೆಗೂ ಲಕ್ಣ್ಮಣ್ ಪಾದಯಾತ್ರೆ ಮಾಡಲಿದ್ದಾರೆ. ಸಂಸದರ ಕಚೇರಿ ಮುಂಭಾಗದಲ್ಲಿ ಚರ್ಚೆಗೆ ತೆರಳಲಿರುವ ಎಂ. ಲಕ್ಣ್ಮಣ, ಚೇರು ಮತ್ತು ಟೇಬಲ್ ತೆಗೆದುಕೊಂಡು ಹೋಗಲಿದ್ದಾರೆ. ಬಿಜೆಪಿ ಯುವ ಮೋರ್ಚಾದಿಂದಲೂ ಚರ್ಚೆಗೆ ಸಿದ್ದತೆ ನಡೆದಿದ್ದು, ಬೆಳಗ್ಗೆ 9.30ಕ್ಕೆ ಮೆಟ್ರೊಪೋಲ್ ಸರ್ಕಲ್ನಿಂದ ಪಾದಯಾತ್ರೆ ಮೂಲಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ತಲುಪಲಿದ್ದಾರೆ. ಸಿದ್ದರಾಮಯ್ಯ ಅಥವಾ ಮಹದೇವಪ್ಪ ಜೊತೆ ಮಾತ್ರ ಚರ್ಚೆ ಅಂತಾ ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದರು. ಸದ್ಯ ಕುತೂಹಲಕ್ಕೆ ಚರ್ಚೆ ಪಾಲಿಟಿಕ್ಸ್ ಕಾರಣವಾಗಿದೆ.
ಇಂದು (ಜೂನ್ 29)ರ ಬೆಳಿಗ್ಗೆ 11 ಗಂಟೆಗೆ ಸಂಸದರ ಕಚೇರಿಯಲ್ಲಿ ಚರ್ಚೆ ನಡಯಲಿದ್ದು, ಜಲದರ್ಶಿನಿಯ ಕಚೇರಿ ಬಳಿ ದಾಖಲೆ ಸಮೇತ ಹಾಜರಾಗುತ್ತೇನೆ. ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರನಾಗಿ ಪ್ರತಾಪ್ ಸಿಂಹ ಎದುರು ಚರ್ಚೆಗೆ ಬರುತ್ತಿದ್ದೇನೆ. ಎರಡನೇ ಬಾರಿಗೆ ಆಹ್ವಾನ ನೀಡುತ್ತಿದ್ದು, ಈ ಬಾರಿ ಪಲಾಯನ ಮಾಡಬೇಡಿ. ಜನರಿಗೆ ಸತ್ಯ ಹೇಳಲು ಯಾರಾದರೇನು? ಚರ್ಚೆಗೆ ಬನ್ನಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಮಣ್ ಸವಾಲು ಹಾಕಿದ್ದಾರೆ.
ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸೋಣ ಬನ್ನಿ: ಎಂ. ಲಕ್ಷ್ಮಣ್
ಗ್ರಾಮ ಪಂಚಾಯತ್ನಲ್ಲೂ ಗೆಲ್ಲದ ವ್ಯಕ್ತಿ ಮುಂದೆ ಚರ್ಚೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಎಂ. ಲಕ್ಷ್ಮಣ್, ಪ್ರತಿಕ್ರಿಯಿಸಿದ್ದು, ಗ್ರಾಮ ಪಂಚಾಯತ್ನಲ್ಲಿ ಯಾವುದೇ ಪಕ್ಷದ ಚಿಹ್ನೆ ಇಲ್ಲದೆ ಇಬ್ಬರು ಸ್ಪರ್ಧಿಸೋಣ. ವೈಯಕ್ತಿಕ ವರ್ಚಸ್ಸಿನಿಂದ ಗ್ರಾ. ಪಂಚಾಯತ್ನಿಂದ ಆಯ್ಕೆಯಾಗಿ ಸಾಬೀತು ಪಡಿಸುತ್ತೇನೆ. ಮೋದಿ ಹೆಸರಿಲ್ಲದೆ ನೀವು ಗ್ರಾ.ಪಂಚಾಯತ್ ಸದಸ್ಯನೂ ಆಗಲೂ ಸಾಧ್ಯವಿಲ್ಲ. ಮುಂದಿನ ಲೋಕಸಭಾ ಚುನಾವಣೆಗೆ ನೀವು ಎಲ್ಲಿರುವಿರಿ ಗೊತ್ತಾಗುತ್ತೆ ಎಂದು ವಾಗ್ದಾಳಿ ಮಾಡಿದರು.
Published On - 8:03 am, Wed, 29 June 22