AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1976 ಜಲನೀತಿ ನಿಮಯ ಉಲ್ಲಂಘನೆ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಭಾರಿ ಸದಸ್ಯ ಕಾರ್ಯದರ್ಶಿ ವಜಾ

ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದೇ ವಿಚಾರವಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಭಾರ ಸದಸ್ಯ ಕಾರ್ಯದರ್ಶಿ ಸೂರಿ ಪಾಯಲ್ ಅವರನ್ನು ವಜಾಗೊಳಿಸಿ ಮಂಡಳಿ ಅಧ್ಯಕ್ಷ ಡಾ.ಶಾಂತ್ ತಮಯ್ಯ ಆದೇಶ ಹೊರಡಿಸಿದ್ದಾರೆ.

1976 ಜಲನೀತಿ ನಿಮಯ ಉಲ್ಲಂಘನೆ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಭಾರಿ ಸದಸ್ಯ ಕಾರ್ಯದರ್ಶಿ ವಜಾ
ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ
Follow us
TV9 Web
| Updated By: ವಿವೇಕ ಬಿರಾದಾರ

Updated on: Jul 16, 2023 | 12:18 PM

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳ (Government Officers) ವರ್ಗಾವಣೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದೇ ವಿಚಾರವಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಪ್ರಭಾರ ಸದಸ್ಯ ಕಾರ್ಯದರ್ಶಿ ಸೂರಿ ಪಾಯಲ್ ಅವರನ್ನು ವಜಾಗೊಳಿಸಿ ಮಂಡಳಿ ಅಧ್ಯಕ್ಷ ಡಾ.ಶಾಂತ್ ತಮಯ್ಯ ಆದೇಶ ಹೊರಡಿಸಿದ್ದಾರೆ. ಸೂರಿ ಪಾಯಲ್ ಅವರು ಏಕಾಏಕಿ ನಾಲ್ಕು ತಿಂಗಳ ಹಿಂದೆ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಗಿರೀಶ್‌ರನ್ನು ವರ್ಗಾವಣೆ ಮಾಡಿದ್ದರು. ವರ್ಗಾವಣೆ ಬಳಿಕ ಸೂರಿ ಪಾಯಲ್ ಅವರಿಗೆ ಸದಸ್ಯ ಕಾರ್ಯದರ್ಶಿ ಪ್ರಭಾರದ ಹೊಣೆ ನೀಡಲಾಗಿತ್ತು.

ಆದರೆ ಈ ವರ್ಗಾವಣೆ ಸುತ್ತೋಲೆ ಅಧ್ಯಕ್ಷರ ಗಮನಕ್ಕೆ ಬಾರದೆ ಸೂರಿ ಪಾಯಲ್​ ಹೊರಡಿಸಿದ್ದಾರೆ. ಇದು 1976 ಜಲನೀತಿ ಅನ್ವಯ ನಿಮಯ ಉಲ್ಲಂಘನೆಯಾದ ಹಿನ್ನೆಲೆ ಪ್ರಭಾರ ಜವಾಬ್ದಾರಿಯಿಂದ ಸೂರಿ ಪಾಯಲ್ ವಜಾಗೊಳಿಸಲಾಗಿದೆ.

ಅಲ್ಲದೇ ಈ ವರ್ಗಾವಣೆಯಲ್ಲೂ ಅನುಮಾನ ವ್ಯಕ್ತವಾಗಿದೆ. ಹೌದು ಸದಸ್ಯ ಕಾರ್ಯದರ್ಶಿ ಒಮ್ಮೆ ನೇಮಕವಾದರೆ ಕನಿಷ್ಠ ಎರಡು ವರ್ಷ ಮುಂದುವರೆಯಬೇಕು. ಆದರೆ ಈ ಮೂರು ತಿಂಗಳಲ್ಲೇ ಹಿಂದೆ ನೇಮಕವಾಗಿದ್ದ ಐಎಎಸ್ ಅಧಿಕಾರಿ ಗಿರೀಶ್ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಮೈತ್ರಿ ಸರ್ಕಾರದಲ್ಲಿ ವರ್ಗಾವಣೆ ಅಧಿಕಾರವೇ ತಮಗಿರಲಿಲ್ಲ ಎಂದ ಕುಮಾರಸ್ವಾಮಿ; ಚಲುವರಾಯಸ್ವಾಮಿ ಆರೋಪಕ್ಕೆ ತಿರುಗೇಟು

ಇನ್ನು ಸೂರಿ ಪಾಯಲ್ ನೇಮಕಾತಿಯಲ್ಲೂ ಲೋಪವಾಗಿರುವ ಆರೋಪ ಕೇಳಿ ಬಂದಿದೆ. ಸದಸ್ಯ ಕಾರ್ಯದರ್ಶಿ ಹೊಂದಲು ಪರಿಸರ ವಿಜ್ಞಾನಕ್ಕೆ ಸಂಬಂಧ ಪಟ್ಟ ಮಾಸ್ಟರ್ ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿ ಹೊಂದಿರಬೇಕು. ಆದರೆ ಪ್ರಭಾರ ಜವಾಬ್ದಾರಿ ನೀಡಿದ ಸೂರಿ ಪಾಯಲ್ ಕೇವಲ ಬಿಟೆಕ್ ಡಿಗ್ರಿ ಪದವೀಧರ.

ಸೂರಿ ಪಾಯಲ್‌ ಸದಸ್ಯ ಕಾರ್ಯದರ್ಶಿ ಪ್ರಭಾರದ ಹೊಣೆ ಹೊತ್ತ ನಂತರ ಮಂಡಳಿಯಲ್ಲಿ ಅಧ್ಯಕ್ಷ ಡಾ.ತಮ್ಮಯ್ಯ ಮತ್ತು ಸೂರಿ ಪಾಯಲ್‌ ನಡುವೆ ಶೀತಲ ಸಮರ ಶುರುವಾಗಿದೆ. ಇದರಿಂದ ಒಂದೂವರೆ ತಿಂಗಳು ಯಾವುದೇ ಫೈಲ್‌ಗಳು ವಿಲೇವಾರಿಯಾಗದ ಆರೋಪ ಕೇಳಿಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ