ಬೆಂಗಳೂರು: ಕರಕುಶಲಕರ್ಮಿಗಳು ಉತ್ಪಾದಿಸಿದ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವಂತೆ ಮಾಡುವ ನಿಟ್ಟಿನಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಇದು ಮಾರಾಟಗಾರರಿಗೆ ಮತ್ತು ಗ್ರಾಹಕರ ನಡುವೆ ಉತ್ತಮ ಸಂಪರ್ಕ ಬೆಳೆಸಲು ಸಹಕಾರಿಯಾಗಿದೆ. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮವು ಭಾರತ ಸರ್ಕಾರದ ಪ್ರಾಯೋಜನೆಯಲ್ಲಿ ಫೆಬ್ರವರಿ 27 ರಿಂದ ಮಾರ್ಚ್ 8 ಬೆಳಿಗ್ಗೆ 10.00 ರಿಂದ ರಾತ್ರಿ 8.30 ರವರೆಗೆ ಜೆಪಿ ನಗರದ ಸಿಂಧೂರ್ ಕನ್ವೆನ್ಷನ್ ಹಾಲ್‌ನಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ(Gandhi Shilp Bazaar Exhibition Cum Sale of Handicrafts)ವನ್ನು ಆಯೋಜಿಸಿದೆ. ಇದನ್ನು ಮಾನ್ಯ ಸಣ್ಣ ಕೈಗಾರಿಕೆಗಳ ಸಚಿವರಾದ ಶ್ರೀ ಎಂಟಿಬಿ ನಾಗರಾಜ್ ಅವರು ಉದ್ಘಾಟಿಸಿದರು. ವಿವಿಧ ಭಾಗಗಳಿಂದ ಕುಶಲಕರ್ಮಿಗಳು ತಯಾರಿಸಿದ ಸೀರೆಗಳು, ಮರದ ಅಲಂಕಾರಿಕಾ ಉತ್ಪನ್ನಗಳು, ಮಣ್ಣಿನ ವಿವಿಧ ಆಕರ್ಷಕ ಸಾಮಾಗ್ರಿಗಳು, ಬ್ಯಾಗ್‌ಗಳು, ವಿವಿಧ ರೀತಿಯ ಉಡುಪುಗಳು, ಸ್ತ್ರೀಯರ ಅಲಂಕಾರಿಕಾ ವಸ್ತುಗಳು, ಬೂಟ್, ಚಪ್ಪಲಿಗಳು ಹಾಗೂ ಇತರ ಕರಕುಶಲ ವಸ್ತುಗಳನ್ನು ಮೇಳದಲ್ಲಿ ಖರೀದಿಸಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ಶಾಸಕಿ ಸೌಮ್ಯಾರೆಡ್ಡಿ, ಪಾಲಿಕೆಯ ಎಂಡಿ ರೂಪಾ ಮೌದ್ಗಿಲ್ ಐಪಿಎಸ್, ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:
ಕೆರೆ ದಂಡೆಯ ಉಯ್ಯಾಲೆ ಮೇಲೆ ಅಮೂಲ್ಯ ಬೇಬಿಬಂಪ್ ಫೋಟೋಶೂಟ್; ಇಲ್ಲಿವೆ ಫೋಟೋಗಳು
Published On - 8:12 pm, Sun, 27 February 22