ನಕಲಿ ವೈದ್ಯರ ಬೇಟೆಗೆ ಇಳಿದ ಆರೋಗ್ಯ ಇಲಾಖೆ, ಇಲ್ಲಿವರೆಗೆ 1,434ಕ್ಕೂ ಹೆಚ್ಚು ವೈದ್ಯರ ವಿರುದ್ಧ ದೂರು ದಾಖಲು

| Updated By: ಆಯೇಷಾ ಬಾನು

Updated on: Dec 11, 2023 | 11:56 AM

ಮಾಹಾಮಾರಿ ಕೊರೊನಾ ಬಳಿಕ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸಾವಿರಾರು ನಕಲಿ ವೈದ್ಯರು ಹಾಗೂ ಕ್ಲಿನಿಕ್​ಗಳು ತಲೆ ಎತ್ತಿವೆ. ಅದರಲ್ಲೂ ಬೆಂಗಳೂರಿನಲ್ಲಿ ಅತಿ ಹೆಚ್ಚು ನಕಲಿ ಕ್ಲಿನಿಕ್​ಗಳು ಓಪನ್ ಆಗಿದ್ದು ರಾಜಧಾನಿ ಜನರು ಎಚ್ಚರಿಕೆಯಿಂದಿರಬೇಕಿದೆ. ಸಿಕ್ಕ ಸಿಕ್ಕ ಕ್ಲಿನಿಕ್​ಗಳಿಗೆ ಹೋಗಿ ಆರೋಗ್ಯವನ್ನು ಮತ್ತಷ್ಟು ಹಾಳು ಮಾಡಿಕೊಳ್ಳಬೇಡಿ.

ನಕಲಿ ವೈದ್ಯರ ಬೇಟೆಗೆ ಇಳಿದ ಆರೋಗ್ಯ ಇಲಾಖೆ, ಇಲ್ಲಿವರೆಗೆ 1,434ಕ್ಕೂ ಹೆಚ್ಚು ವೈದ್ಯರ ವಿರುದ್ಧ ದೂರು ದಾಖಲು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿ.11: ಕೊರೊನಾ (Coronavirus) ಬಳಿಕ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟವಾಗಿ ಅನೇಕರು ನಾನಾ ಮಾರ್ಗಗಳನ್ನು ಹಿಡಿದಿದ್ದಾರೆ. ಇದೇ ನಿಟ್ಟಿನಲ್ಲಿ ಎಂಬಿಬಿಎಸ್ ಪಾಸ್ ಆಗದಿದ್ದರೂ ಅದೆಷ್ಟೋ ಮಂದಿ ಕೊರೊನಾ ಬಳಿಕ ಕ್ಲಿನಿಕ್ ಓಪನ್ ಮಾಡಿ ಚಿಕಿತ್ಸೆ ಕೊಟ್ಟು ಅಪಾಯ ತಂದುಕೊಂಡಿರುವ ಬಗ್ಗೆ ಈ ಹಿಂದಿನಿಂದಲೂ ಅನೇಕ ವರದಿಗಳು, ಸುದ್ದಿಗಳು ಹರಿದಾಡುತ್ತಿವೆ (Fake Doctors). ಇದೀಗ ನಕಲಿ ವೈದ್ಯರು ಹಾಗೂ ನಕಲಿ ಕ್ಲಿನಿಕ್​ಗಳ ಬಗ್ಗೆ ದೂರುಗಳು ಬರುತ್ತಿದ್ದು ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಸದ್ಯ 1434ಕ್ಕೂ ಹೆಚ್ಚು ನಕಲಿ ವೈದ್ಯರ ಮೇಲೆ ಕೇಸ್ ದಾಖಲಾಗಿದೆ.

ಕೊರೊನಾ ಬಳಿಕ ನಕಲಿ ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ರಾಜ್ಯದಲ್ಲಿ 1500ಕ್ಕೂ ಹೆಚ್ಚು ನಕಲಿ ವೈದ್ಯರಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಆರೋಗ್ಯ ಇಲಾಖೆಗೆ ದೂರುಗಳ ಸುರಿಮಳೆಯಾಗಿದ್ದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಸಮರ ಸಾರಿದೆ. ಸದ್ಯ 1434ಕ್ಕೂ ಹೆಚ್ಚು ನಕಲಿ ವೈದ್ಯರ ಮೇಲೆ ಆರೋಗ್ಯ ಇಲಾಖೆ ಕೇಸ್ ದಾಖಲಿಸಿದೆ. ಈ ನಕಲಿ ವೈದ್ಯರು ಗಡಿ ಭಾಗದಲ್ಲಿ ಹೆಚ್ಚು ಕ್ಲಿನಿಕ್​ಗಳನ್ನು ಓಪನ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬಳ್ಳಾರಿಯಲ್ಲೊಬ್ಬ ನಕಲಿ ವೈದ್ಯನ ಬಂಧನ: ಔಷಧಿ, ಉಪಕರಣಗಳು ವಶಕ್ಕೆ

ಹೊರ ರಾಜ್ಯಗಳಿಂದ ಬಂದು ಗಡಿ ಜಿಲ್ಲೆಗಳಲ್ಲಿ ಮೊಬೈಲ್ ಕ್ಲಿನಿಕ್ ಮೂಲಕ ರಾಜ್ಯದ ಜನರಿಗೆ ಈ ನಕಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಹೊಸೂರು ಹಾಗೂ ಆನೇಕಲ್ ಭಾಗದಲ್ಲಿ ಮೊಬೈಲ್ ಕ್ಲಿನಿಕ್ ಇಟ್ಟುಕೊಂಡು ಚಿಕಿತ್ಸೆ ನೀಡಿ ಜನರ ಪ್ರಾಣಕ್ಕೆ ಅಪಾಯ ತರುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ. ಹಿಂದೆ ಮುಂದೆ ತಿಳಿಯದೆ. ವೈದ್ಯರ ಪ್ರಮಾಣ ಪತ್ರ ಹಾಗೂ ಆಸ್ಪತ್ರೆಗಳ ಪ್ರಮಾಣಿಕೃತ ಪತ್ರ ನೋಡದೆ ಚಿಕಿತ್ಸೆ ಪಡೆದು ಸಮಸ್ಯೆಗೆ ತುತ್ತಾಗದ್ದಂತೆ ಸೂಚನೆ ನೀಡಿದೆ.

ಈ ನಕಲಿ ಕ್ಲಿನಿಕ್ ಹಾಗೂ ವೈದ್ಯರ ಹೆಡಮೂರಿ ಕಟ್ಟಲು ಆರೋಗ್ಯ ಇಲಾಖೆ ಮುಂದಾಗಿದ್ದು ಸದ್ಯ 1434 ನಕಲಿ ವೈದ್ಯರ ಕ್ಲಿನಿಕ್​ಗಳನ್ನು ಲಾಕ್ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ 300ಕ್ಕೂ ಹೆಚ್ಚು ನಕಲಿ ವೈದ್ಯರು ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಡಿಸೆಂಬರ್ ಕೊನೆಯ ವೇಳೆಗೆ ನಕಲಿ ವೈದ್ಯರು ಹಾಗೂ ಕ್ಲಿನಿಕ್ ಗೆ ಬೀಗ ಹಾಕಲು ಮುಂದಾಗಿದೆ.

ಇನ್ನು ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಉಪ ನಿರ್ದೇಶಕ ಡಾ ವೀವೆಕ್ ದೊರೆ ಟಿವಿ9 ಜೊತೆ ಮಾತನಾಡಿದ್ದು, ನಮಗೆ ಇರುವ ಮಾಹಿತಿ ಪ್ರಕಾರ 1,434ಕ್ಕೂ ಹೆಚ್ಚು ಕ್ಲಿನಿಕ್ ಇದ್ದಾವೆ. ಕ್ಲೀನಿಕ್ ವೈದ್ಯರು ಹೆಚ್ಚಾಗುತ್ತಿದ್ದಾರೆ ಅದಕ್ಕೆ ರೇಡ್​ ಹೆಚ್ಚಿಸಲಾಗುತ್ತಿದೆ. ಈ ತಿಂಗಳು ತಾಲೂಕು ಅಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ನಿರ್ದೇಶಕ ನೀಡಲಾಗಿದೆ. ಎಲ್ಲಾ ಕ್ಲೀನಿಕ್​ಗಳನ್ನ ಕುಲಂಕುಶವಾಗಿ ಪರಿಶೀಲನೆ ನಡೆಸುತ್ತೇವೆ. ಕ್ಲೀನಿಕ್​ಗಳ ಸಂಖ್ಯೆ 200 ರಿಂದ 300 ಆಗಬಹುದು ಹೆಚ್ಚಾಗುವ ಸಾಧ್ಯತೆಗಳು ಇದ್ದಾವೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:06 am, Mon, 11 December 23