ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ನಮ್ಮ ಮೆಟ್ರೋದಲ್ಲಿದೆ ನಾನಾ ಸೌಲಭ್ಯ, 24 ಎಮರ್ಜೆನ್ಸಿ ಬಟನ್

ಸಿಲಿಕಾನ್ ಸಿಟಿಯ ಜನರ ನಾಡಿ ಮಿಡಿತವಾಗಿರೋ ನಮ್ಮ‌ ಮೆಟ್ರೋ ಹೆಣ್ಮಕ್ಕಳಿಗೆ ಸೇಫ್ ಅಲ್ವಾ ಅನ್ನೋ ಪ್ರಶ್ನೆ ಮೂಡಿದೆ. ಅದರಲ್ಲೂ ಪೀಕ್ ಟೈಮ್ ನಲ್ಲಿ ರಷ್ ಇರೋ ಮೆಟ್ರೋದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗ್ತಿದ್ದು ಇದಕ್ಕೆ ಕಡಿವಾಣ ಹಾಕೋದು ಹೇಗೆ? ಮೆಟ್ರೋದಲ್ಲಿ ಆಗೋ ಕಿರುಕುಳವನ್ನ ತಡೆಯೋದಕ್ಕೆ ಇರೋ ಚಾನ್ಸ್ ಯಾವುದು? ಇಲ್ಲಿದೆ ಮಾಹಿತಿ.

ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ನಮ್ಮ ಮೆಟ್ರೋದಲ್ಲಿದೆ ನಾನಾ ಸೌಲಭ್ಯ, 24 ಎಮರ್ಜೆನ್ಸಿ ಬಟನ್
ನಮ್ಮ ಮೆಟ್ರೋ
Follow us
Kiran Surya
| Updated By: ಆಯೇಷಾ ಬಾನು

Updated on: Dec 11, 2023 | 7:09 AM

ಬೆಂಗಳೂರು, ಡಿ.11: ಮೆಟ್ರೋದಲ್ಲಿ (Namma Metro) ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ಕಿರುಕುಳಗಳ ಸಂಖ್ಯೆ ಹೆಚ್ಚಾಗ್ತಿರುವುದರಿಂದ ಮೆಟ್ರೋದಲ್ಲಿ ಪ್ರಯಾಣ ಮಾಡೋ ಮಹಿಳೆಯರಿಗೆ (Women) ಸೇಫ್ಟಿ ಬಗ್ಗೆ ಪ್ರಶ್ನೆ ಸಹಜವಾಗಿಯೇ ಮೂಡಿದೆ. ನಮಗೆ ಮೆಟ್ರೋ ಸೇಫ್ ಅಲ್ವಾ, ಕಾಮುಕರ ಕೀಡಿಗೇಡಿತನವನ್ನ ಹೇಗೆ ಎದುರಿಸೋದು ಅನ್ನೋ ಭಯವೂ ಸಹ ಬಂದಿದೆ.‌ ಇದಕ್ಕೆ ಕಡಿವಾಣ ಹಾಕೋದು ಹೇಗೆ ಅನ್ನೋ ಪ್ರಶ್ನೆಗೆ ನಮ್ಮ ಮೆಟ್ರೋದ ಅಧಿಕಾರಿಗಳು ಉತ್ತರ ನೀಡಿದ್ದಾರೆ. ಮಹಿಳಾ ಪ್ರಯಾಣಿಕರ ಸುರಕ್ಷಿತ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಸಹ ಮುಂದಾಗಿದ್ದಾರೆ.

ನಮ್ಮ ಮೆಟ್ರೋ ಟ್ರೈನ್ ನಲ್ಲಿ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ ಬಸ್ ನಲ್ಲಿರುವಂತೆ ಪ್ಯಾನಿಕ್ ಬಟನ್ ಒಂದಿದೆ.‌ ಇದನ್ನ ಎಮರ್ಜೆನ್ಸಿ ಬಟನ್ ಅಂತಾ ಮೆಟ್ರೋದಲ್ಲಿ ಕರೆಯುತ್ತಾರೆ. ಮೆಟ್ರೋ ಪ್ರಯಾಣದ ವೇಳೆ ಯಾವುದೇ ಸಮಸ್ಯೆ ಅದ್ರೂ ಈ ಬಟನ್ ಪ್ರೆಸ್ ಮಾಡಿದ್ರೇ ನೇರವಾಗಿ ಮೆಟ್ರೋ ಲೋಕೋಪೈಲಟ್ಗೆ ಕರೆ ಹೋಗುತ್ತೆ.‌ ಅಲ್ಲಿಂದ ಮೆಟ್ರೋ ಸಿಬ್ಬಂದಿಗಳು ನಿಮ್ಮ ಜೊತಗೆ ಮಾತಾನಾಡಿ ಸಮಸ್ಯೆ ಏನೂ ಅನ್ನೋದನ್ನ ಕೇಳುತ್ತಾರೆ.‌ ಜೊತೆಗೆ ಆ ಭೋಗಿಯಲ್ಲಿರೋ ಕ್ಯಾಮರಾ ಕೂಡ ನಿಮ್ಮ ಕಡೆಗೆ ಪ್ಯಾನ್ ಆಗಿ ಅಲ್ಲಿ ಆಗ್ತಿರೋದನ್ನ ಸಂಪೂರ್ಣವಾಗಿ ರೆಕಾರ್ಡ್ ಮಾಡಿಕೊಳ್ಳಲಿದೆ.‌ ಪ್ರತಿಬೋಗಿಯಲ್ಲೂ 4 ಬಟನ್ ಇರಲಿದ್ದು ಸಮಸ್ಯೆ ಆದಾಗ ಇದನ್ನ ಪ್ರೆಸ್ ಮಾಡೋದ್ರಿಂದ ಮೆಟ್ರೋ ಸಿಬ್ಬಂದಿಗಳು ನಿಮ್ಮ ನರೆವಿಗೆ ಬರಲಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ: ವಿಕೃತ ಕಾಮಿಯ ಕೈ ಆಟ ಬಯಲು

ಇನ್ನೂ ಇದರ ಜೊತೆಗೆ ಮೆಟ್ರೋದಲ್ಲಿ ಹೆಲ್ಪ್ ಲೈನ್ ನಂಬರ್​ಗಳು ಡಿಸ್ ಪ್ಲೇ ಆಗ್ತಿದ್ದು, ಅದಕ್ಕೂ ಕರೆ ಮಾಡಿ ಆಗ್ತಿರೋ ಸಮಸ್ಯೆಯನ್ನ ತಿಳಿಸಬಹುದಾಗಿದ್ದು ಟಾಲ್ ಫ್ರೀ ನಂಬರ್ ಜೊತೆಗೆ ಇನ್ನೂ ಮೂರು ನಂಬರ್ ಕೊಟ್ಟಿದ್ದು ಇದರಲ್ಲಿ ಯಾವುದೇ ನಂಬರ್ ಗೆ ಕರೆ ಮಾಡಿ ಆಗ್ತಿರೋ ಕಿರುಕುಳವನ್ನ ತಿಳಿಸಿದ್ರೇ ಮುಂದಿನ ನಿಲ್ದಾಣದಲ್ಲಿ ಕಿಡಿಗೇಡಿಗಳನ್ನ ಬಂಧಿಸಿ ಪೊಲೀಸ್ರಿಗೆ ಒಪ್ಪಿಸೋ ಕೆಲಸ ಮಾಡಲಾಗುತ್ತೆ. ಜೊತೆಗೆ ರಾತ್ರಿ ವೇಳೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹೋಮ್‌ಗಾರ್ಡ್ ಗಳು ಮೆಟ್ರೋದಲ್ಲಿ ಸಂಚಾರ ಮಾಡ್ತಿದ್ದು ಅವ್ರ ಸಹಾಯವನ್ನು ಸಹ ಪಡೆಯಬಹುದಾಗಿದೆ. ಇದಕ್ಕೆ ನಮ್ಮ ಮಹಿಳಾ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಯಾಣದ ವೇಳೆ ಮಹಿಳೆಯರಿಗೆ ಆಗುವ ಇತಂಹ ದೌರ್ಜನ್ಯದ ವಿರುದ್ದ ಮೆಟ್ರೋ ಸಿಬ್ಬಂದಿಗಳು ನೆರವು ನೀಡಲು ಸಜ್ಜಾಗಿದ್ದಾರೆ. ಮಹಿಳಾ ಪ್ರಯಾಣಿಕರು ಸಹ ಧೈರ್ಯದಿಂದಲೇ ಇತಂಹ ಘಟನೆಗಳು ಆದಾಗ ಅದನ್ನ ಖಂಡಿಸಿ, ದೂರು ನೀಡುವ ಧೈರ್ಯ ಮಾಡಬೇಕು. ಆಗಲೇ ಲೈಂಗಿಕ ಕಿರುಕುಳ ನೀಡುವ ಕಾಮುಕರಿಗೆ ಬುದ್ದಿ ಕಲಿಸೋದಕ್ಕೆ ಆಗೋದು. ನಮ್ಮ ಮೆಟ್ರೋ ಭಯ ಬಿಡಿ ನಮ್ಮ ಮೆಟ್ರೋದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಅನೇಕ ಕ್ರಮಗಳು, ಮತ್ತು ಮಾರ್ಗಗಳಿವೆ ಅದನ್ನ ಬಳಸಿಕೊಳ್ಳಿ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ