ಬಳ್ಳಾರಿಯಲ್ಲೊಬ್ಬ ನಕಲಿ ವೈದ್ಯನ ಬಂಧನ: ಔಷಧಿ, ಉಪಕರಣಗಳು ವಶಕ್ಕೆ
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಎನ್ನುವ ಪುಟ್ಟ ಗ್ರಾಮದಲ್ಲಿ ಡಾಕ್ಟರ್ ಎಂದು ಹೇಳಿಕೊಂಡು ಆಂಧ್ರ ಮೂಲದ ವ್ಯಕ್ತಿ ಮನೆಯೊಂದರಲ್ಲಿ ಕ್ಲಿನಿಕ್ ನಡೆಸುತ್ತಿದ್ದವನನ್ನು ಪೊಲೀಸರ ಜೊತೆ ಆರೋಗ್ಯಾಧಿಕಾರಿಗಳು ದಾಳಿ ಮಾಡುವ ಮೂಲಕ ಬಂಧಿಸಿದ್ದಾರೆ. ಜೊತೆಗೆ ಮನೆಯಲ್ಲಿರುವ ಎಲ್ಲ ರೀತಿಯ ಔಷಧಿಗಳನ್ನು ಜಪ್ತಿ ಮಾಡಿದ್ದಾರೆ.
ಬಳ್ಳಾರಿ, ಡಿಸೆಂಬರ್ 01: ವೈದ್ಯನೆಂದು ನಂಬಿಸಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯ (Fake doctor) ನ ಆಸ್ಪತ್ರೆಗೆ ಪೊಲೀಸರ ಜೊತೆ ಆರೋಗ್ಯಾಧಿಕಾರಿಗಳು ದಾಳಿ ಮಾಡುವ ಮೂಲಕ ಬಂಧಿಸಿರುವಂತಹ ಘಟನೆ ಕೂಡ್ಲಿಗಿ ತಾಲೂಕಿನ ಶಿವಪುರ ಎನ್ನುವ ಪುಟ್ಟ ಗ್ರಾಮದಲ್ಲಿ ನಡೆದಿದೆ. ಆಂಧ್ರ ಮೂಲದ ಮಹಮ್ಮದ್ ರಫಿ ಬಂಧಿತ ನಕಲಿ ವೈದ್ಯ. ಆರಂಭದಲ್ಲಿ ಸಣ್ಣಪುಟ್ಟ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದ ಮಹಮ್ಮದ್ ರಫಿ, ನಂತರದ ದಿನಗಳಲ್ಲಿ ಸ್ಟಿರೈಡ್ ಮತ್ತು ಆ್ಯಂಟಿಬಾಟಿಕ್ಗಳನ್ನು ಹೆಚ್ಚು ಹೆಚ್ಚು ಬಳಸೋ ಮೂಲಕ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಚಿಕಿತ್ಸೆಯನ್ನು ನೀಡುತ್ತಿದ್ದನು.
ಆಂಧ್ರ ಮೂಲದ ಯೂನಿರ್ವಸಿಟಿಯೊಂದರ ನಕಲಿ ಸರ್ಟಿಫಿಕೇಟ್
ಈ ಬಗ್ಗೆ ದೂರು ಬಂದ ಹಿನ್ನೆಲೆ ಒರ್ಜಿನಲ್ ಸರ್ಟಿಫಿಕೇಟ್ ನೀಡುವಂತೆ ರಫಿ ಅವರಿಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿತ್ತು. ಆದರೆ ಆಂಧ್ರ ಮೂಲದ ಯೂನಿರ್ವಸಿಟಿಯೊಂದರ ನಕಲಿ ಸರ್ಟಿಫಿಕೇಟ್ ನೀಡಿದ ಹಿನ್ನೆಲೆ ಇದೀಗ ಪೊಲೀಸರೊಂದಿಗೆ ವೈದ್ಯಾಧಿಕಾರಿಗಳು ದಾಳಿ ನಡೆಸಿ ರಫಿ ಅವರನ್ನು ಬಂಧಿಸಿ ಮನೆಯಲ್ಲಿರುವ ಎಲ್ಲ ರೀತಿಯ ಔಷಧಿಗಳನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ: ವಿಮ್ಸ್ ನಿರ್ದೇಶಕರ ವಿರುದ್ಧ ಎಫ್ಐಆರ್ ದಾಖಲು
ನಕಲಿ ವೈದ್ಯರ ಮೇಲೆ ದಾಳಿ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ದಾಳಿ ಮಾಡಲಾಗಿದೆ. ದಾಳಿ ಮಾಡಿದಾಗ ತೆರೆಮರೆಗೆ ಸರಿಯುವ ಈ ರೀತಿಯ ವೈದ್ಯರು ಮತ್ತದೇ ಕೆಲಸ ಮಾಡುತ್ತಾರೆ. ಹಳ್ಳಿ ಹಳ್ಳಿಯಲ್ಲಿ ಸೇರಿಕೊಂಡಿರುವ ನಕಲಿ ವೈದ್ಯರು. ಹೆಚ್ಚು ಹೆಚ್ಚು ಆ್ಯಂಟಿಬಯಾಟಿಕ್ ಸ್ಟಿರೈಡ್ ನೀಡುವ ಮೂಲಕ ಬೇಗನೆ ರೋಗ ಗುಣಮುಖವಾಗುವ ರೀತಿಯಲ್ಲಿ ಚಿಕಿತ್ಸೆ ನೀಡುತ್ತಾರೆ.
ಇದನ್ನೂ ಓದಿ: ಡಿಜಿಟಲೀಕರಣಕ್ಕೆ ಮುಂದಾದ ಕಂದಾಯ ಇಲಾಖೆ: ಬಳ್ಳಾರಿ ಜಿಲ್ಲೆಗೆ ಮೊದಲ ಸ್ಥಾನ
ಇದು ಹಳ್ಳಿ ಜನರಿಗೆ ಇಷ್ಟವಾಗುತ್ತಿದೆ. ಹೀಗಾಗಿ ಇವರ ಬಗ್ಗೆ ಜನರು ಕೂಡ ದೂರು ನೀಡಲು ಮುಂದಾಗುತ್ತಿಲ್ಲ. ಹೆರಿಗೆ, ಮೂಲವ್ಯಾಧಿ, ಕಿಡ್ನಿ ಸ್ಟೋನ್, ಅಪೆಂಡಿಕ್ಸ್ ಸೇರಿದಂತೆ ಇತರೆ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಕೆಲವು ರೋಗಗಳು ಮೇಲ್ನೋಟಕ್ಕೆ ಸಣ್ಣದಾಗಿ ಕಂಡರು ಇದರ ಚಿಕಿತ್ಸೆ ನೀಡುವುದು ಮಾತ್ರ ಅಪಾಯಕಾರಿಯಾಗಿರುತ್ತದೆ. ಇದೆಲ್ಲದಕ್ಕೂ ಕಡಿವಾಣ ಹಾಕಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ನಕಲಿ ವೈದ್ಯರ ಕಡಿವಾಣಕ್ಕೆ ಕೇವಲ ಆರೋಗ್ಯ ಇಲಾಖೆ ಮತ್ತು ಪೊಲೀಸರಷ್ಟೇ ಅಲ್ಲದೇ ಸಾರ್ವಜನಿಕರ ಸಹಾಯ, ಸಹಕಾರವು ಅಗತ್ಯವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.