ಬಾಗಲಕೋಟೆ: ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ; ಸಂತಸದಲ್ಲಿ ಕುಟುಂಬ

ಇಳಕಲ್(Ilkal) ನಗರದ ಖ್ಯಾತ ವೈದ್ಯೆ ಶುಭಾರಾಣಿ ಕಡಪಟ್ಟಿಯವರು ತ್ರಿವಳಿ ಮಕ್ಕಳಿಗೆ ಹೆರಿಗೆ‌ ಮಾಡಿಸಿದ್ದಾರೆ. ಇದೀಗ ತಾಯಿ ಆರೋಗ್ಯದಿಂದ ಇದ್ದು, ಮೂರು ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿಇಡಲಾಗಿದೆ. ಇದರಲ್ಲಿ ಎರಡು ಮಕ್ಕಳು ಆರೋಗ್ಯವಾಗಿದ್ದು, ಒಂದು ಮಗುವಿಗೆ ಉಸಿರಾಟ ತೊಂದರೆಯಿದೆ ಎಂದು ವೈದ್ಯರು ಹೇಳಿದ್ದಾರೆ.

ಬಾಗಲಕೋಟೆ: ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ; ಸಂತಸದಲ್ಲಿ ಕುಟುಂಬ
ಹೆರಿಗೆ ಮಾಡಿಸಿದ ವೈದ್ಯರು
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Dec 01, 2023 | 7:27 PM

ಬಾಗಲಕೋಟೆ , ಡಿ.01: ಮಹಿಳೆಯೊಬ್ಬರು ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಎಸ್.ಎಸ್.‌ ಕಡಪಟ್ಟಿ ಆಸ್ಪತ್ರೆಯಲ್ಲಿ ನಡೆದಿದೆ. ರಾಯಚೂರು (Raichur) ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ನವಲಿ ಗ್ರಾಮದ ನಿವಾಸಿಯಾದ ನಿಂಗಮ್ಮ ಹಾಗೂ ಚನ್ನಬಸವ ಬೊಮ್ಮನಾಳ ಎಂಬ ದಂಪತಿಗೆ ತ್ರಿವಳಿ ಮಕ್ಕಳು ಜನಿಸಿವೆ. ಇಳಕಲ್(Ilkal) ನಗರದ ಖ್ಯಾತ ವೈದ್ಯೆ ಶುಭಾರಾಣಿ ಕಡಪಟ್ಟಿಯವರು ತ್ರಿವಳಿ ಮಕ್ಕಳಿಗೆ ಹೆರಿಗೆ‌ ಮಾಡಿಸಿದ್ದಾರೆ. ಇದೀಗ ತಾಯಿ ಆರೋಗ್ಯದಿಂದ ಇದ್ದು, ಮೂರು ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿಇಡಲಾಗಿದೆ. ಇದರಲ್ಲಿ ಎರಡು ಮಕ್ಕಳು ಆರೋಗ್ಯವಾಗಿದ್ದು, ಒಂದು ಮಗುವಿಗೆ ಉಸಿರಾಟ ತೊಂದರೆಯಿದೆ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಮೂರು ಮಕ್ಕಳ ಹಿನ್ನೆಲೆ ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.

ಅವಳಿ ಜವಳಿ ಸಹೋದರ-ಸಹೋದರಿಯರು ಮದುವೆ ಆದ್ಮೇಲೆ ಒಟ್ಟಿಗೇ ತಾಯಾಂದಿರೂ

ಈಗಿನ ಕಾಲದಲ್ಲಿ ಅನೇಕ ಅಚ್ಚರಿ ಸಂಗತಿಗಳು ಅಗಾಗ ನಡೆಯುತ್ತಿರುತ್ತದೆ, ಅದರಂತೆ ಅಮೆರಿಕದಲ್ಲಿ ಇಬ್ಬರು ಅವಳಿ ಸಹೋದರಿಯರು, ಇಬ್ಬರು ಅವಳಿ ಯುವಕರನ್ನು ಮದುವೆಯಾಗಬೇಕೆಂದು ಆಶಿಸುತ್ತಿದ್ದರು. ಆ ಆಸೆ ಈಡೇರಿತ್ತು. ಇದಾದ ನಂತರ, ಇಬ್ಬರು ಅವಳಿ ಸಹೋದರಿಯರು ಒಂದೇ ಸಮಯದಲ್ಲಿ ಗರ್ಭಿಣಿಯರಾಗಿದ್ದೇವೆ ಎಂದು ಘೋಷಿಸಿಕೊಂಡಿದ್ದರು. ಬ್ರಿಟಾನಿ ಮತ್ತು ಬ್ರಿಯಾನಾ ಡೀನ್ ಇಬ್ಬರೂ ಅವಳಿಗಳಾಗಿದ್ದು, ಜೋಶ್ ಮತ್ತು ಜೆರೆಮಿ ಸ್ಯಾಲಿಯರ್ಸ್ ಎಂಬ ಅವಳಿ ಸಹೋದರರನ್ನು ಮದುವೆಯಾಗಿದ್ದರು.

ಇದನ್ನೂ ಓದಿ:Trending: ಒಂದೇ ದಿನ, ಒಂದೇ ಆಸ್ಪತ್ರೆಯಲ್ಲಿ ಗಂಡುಮಕ್ಕಳಿಗೆ ಜನ್ಮನೀಡಿದ ಅವಳಿ ಸಹೋದರಿಯರು!

ಇನ್ನು ಈ ಅವಳಿ ದಂಪತಿ ಜೋಡಿಗಳು ಒಂದೇ ಇನ್​ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದು, ಆ ಖಾತೆಯಲ್ಲಿ ತಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ಜೊತೆಯಾಗಿ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಈ ಜೋಡಿಗಳು ಒಂದೇ ಬಾರಿಗೆ ತಾವಿಬ್ಬರೂ ಗರ್ಭಿಣಿಯಾರಾಗಿರುವ ಸಂಗತಿಯನ್ನೂ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು. ಇಂತಹ ಹತ್ತು ಹಲವು ಅಚ್ಚರಿಯ ಸಂಗತಿಗಳು ನಡೆಯುತ್ತಿರುತ್ತದೆ, ಅದಕ್ಕೆ ಹೇಳಿ ಮಾಡಿಸಿದಂತೆ ಇದೀಗ ಇಳಕಲ್​ನಲ್ಲಿ ಮಹಿಳೆಯೊಬ್ಬರು ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:17 pm, Fri, 1 December 23