ನಕಲಿ ಮೈಸೂರು ಸ್ಯಾಂಡಲ್ ಸೋಪು ತಯಾರಿಕೆ ದಂಧೆ: ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 20, 2024 | 6:36 PM

ವಿಧಾನಸೌಧದದಲ್ಲಿ ಕೆಎಸ್​​ಡಿಎಲ್​ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಕಲಿ ಮೈಸೂರು ಸ್ಯಾಂಡಲ್ ಸೋಪು ತಯಾರಿಕೆ ದಂಧೆ ಹೈದರಾಬಾದ್‌ನ ತಯಾರಿಸುವವರು ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನು ಬಂಧಿಸಿದ್ದೇವೆ, ಗುಣಮಟ್ಟ ಇಲ್ಲದಿದ್ದರೆ ಕೆಟ್ಟ ಹೆಸರು ಬರುತ್ತೆ. ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಅಧಿಕಾರಿಗಳು, ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ನಕಲಿ ಮೈಸೂರು ಸ್ಯಾಂಡಲ್ ಸೋಪು ತಯಾರಿಕೆ ದಂಧೆ: ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಮುಖ್ಯಮಂತ್ರಿ ಸಿದ್ದರಾಮಯ್ಯ
Follow us on

ಬೆಂಗಳೂರು, ಜನವರಿ 20: ನಕಲಿ ಮೈಸೂರು ಸ್ಯಾಂಡಲ್ ಸೋಪು ತಯಾರಿಕೆ ದಂಧೆ ಹೈದರಾಬಾದ್‌ನ ತಯಾರಿಸುವವರು ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನು ಬಂಧಿಸಿದ್ದೇವೆ, ಗುಣಮಟ್ಟ ಇಲ್ಲದಿದ್ದರೆ ಕೆಟ್ಟ ಹೆಸರು ಬರುತ್ತೆ. ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಅಧಿಕಾರಿಗಳು, ಸಚಿವರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಸಲಹೆ ನೀಡಿದ್ದಾರೆ. ವಿಧಾನಸೌಧದದಲ್ಲಿ ಕೆಎಸ್​​ಡಿಎಲ್​ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಕ್ರಮ ಆಗಿದೆ ಅಲ್ವಾ ಎಂದಿದ್ದಾರೆ. ಹೌದು ಆಗಿದೆ ಎಂದು ಕೈಗಾರಿಕೆ ಇಲಾಖೆ ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದಾರೆ. ಇನ್ಮುಂದೆ ಕ್ಯೂ ಆರ್‌ ಕೋಡ್‌ ಬಳಸಿ ಪ್ಯಾಕ್‌ ಮಾಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ಮೈಸೂರು ಸೋಪ್ಸ್ ಆ್ಯಂಡ್​ ಡಿಟರ್ಜೆಂಟ್​ನಿಂದ ಕೆಲ ವಸ್ತುಗಳ ಬಿಡುಗಡೆಗೆ ಎಂಬಿಪಿ ಒತ್ತಾಯ ಮಾಡಿದ್ದರು. ಹೆಚ್ಚು ಮಾತನಾಡುವುದಿಲ್ಲ ಬಜೆಟ್ ಪೂರ್ವಭಾವಿ ಸಭೆ ನಡೆಯುತ್ತಿದೆ. ಜ.16ಕ್ಕೆ ಬಜೆಟ್ ಮಂಡಿಸಬೇಕು. ಇದಕ್ಕೆ ತಯಾರಿ ನಡೆಸುತ್ತಿದ್ದೇವೆ. 19 ವೈವಿಧ್ಯಮಯ ಉತ್ಪನ್ನಗಳನ್ನ ಬಿಡುಗಡೆ ಮಾಡಲಾಗಿದೆ. ಅತ್ಯಂತ ಸಂತೋಷದಿಂದ ಎಲ್ಲ ವಸ್ತುಗಳನ್ನು ಬಿಡುಗಡೆ ಮಾಡಿದ್ದೇನೆ. ಯಾವುದೇ ವಸ್ತು ಜನಪ್ರಿಯ ಆಗಬೇಕಂದರೆ ಮಾರುಕಟ್ಟೆ ಸಿಗಬೇಕು. ಒಳ್ಳೆಯ ಗುಣಮಟ್ಟ, ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಹೊಸ ಉತ್ಪನ್ನ ತಯಾರಿ ಮಾಡಬೇಕು ಆಗ ಬಿಕರಿ ಆಗುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರು ಸ್ಯಾಂಡಲ್ ನಕಲಿ​ ಸೋಪ್ ತಯಾರಿಕೆ: ಪ್ರಕರಣದ ಇಬ್ಬರು ಆರೋಪಿಗಳು ಬಿಜೆಪಿ ನಾಯಕರು-ಪ್ರಿಯಾಂಕ್​ ಖರ್ಗೆ

ನಮ್ಮ ಸರ್ಕಾರ ಬಂದು 8 ತಿಂಗಳ ಅವಧಿಯಲ್ಲಿ ಸೋಪ್ಸ್ ಆ್ಯಂಡ್ ಡಿಟರ್ಜಂಟ್ ಕಂಪನಿಯ ಮಾರಾಟ ಹೆಚ್ಚಳ ಮಾಡಲಾಗಿದೆ. ಆಗ ಗಂಧದ ಫ್ಯಾಕ್ಟರಿ ಅಂತ ಕರೆಯಲಾಗುತ್ತಿತ್ತು. ನಂತರ ಸೋಪ್ಸ್ ಆ್ಯಂಡ್ ಡಿಟರ್ಜಂಟ್ ಅಂತ ಆಯಿತು. ತದನಂತರ ಮೈಸೂರು ಆ್ಯಂಡ್ ಡಿಟರ್ಜಂಟ್ ಅಂತ ಆಗುತ್ತೆ. ಈ ಹಿಂದೆ ಕೇವಲ ಗಂಧದ ಎಣ್ಣೆ ತಯಾರಿಕೆ ಮಾಡಲಾಗುತ್ತಿತ್ತು. ಈಗ ಜೆಲ್ ಹೆಚ್ಚು ಬೇಡಿಕೆಯಲ್ಲಿದೆ. ಯುವಕರು ಹೆಚ್ಚು ಬಳಕೆ ಮಾಡುತ್ತಾರೆ. ಜನರ ಅಭಿರುಚಿಗೆ ತಕ್ಕಂತೆ ಮಾಡುವುದು ಅವಶ್ಯ.

50 ಕೋಟಿ ರೂ. ಹೆಚ್ಚಳ

ಸರ್ಕಾರ ಮ್ಯಾನಿಫ್ಯಾಕ್ಚರಿಂಗ್ ಫ್ಯಾಕ್ಟರಿ ಅಲ್ಲ. ಸೋಪ್​ನಿಂದ ಈಗ ಜೆಲ್ ತಯಾರು ಮಾಡುವ ಹಂತಕ್ಕೆ ಬದಲಾವಣೆ ಆಗಿದೆ. ಗಂಧದ ಮರ ಉಳಿಸಿಕೊಳ್ಳಲು ಹಾಗೂ ಉದ್ಯೋಗ ಕೊಡುವುದಕ್ಕೆ ಮೈಸೂರು ಸೋಪ್ಸ್ ಫ್ಯಾಕ್ಟರಿ ಪ್ರಾರಂಭ ಮಾಡಲಾಯಿತು. ಈಗ ಸ್ಪರ್ಧಾತ್ಮಕ ಯುಗ, ನಾವು ಖಾಸಗಿ ಕಂಪನಿ ಜೊತೆ ಸ್ಪರ್ಧೆ ಮಾಡಬೇಕಾಗಿದೆ. 182 ಕೋಟಿ ರೂ. ಲಾಭ ಮಾಡಿದ್ದಾರೆ, ಕಳೆದ ವರ್ಷ 132 ಕೋಟಿ ರೂ. ಇತ್ತಂತೆ. ಕಳೆದ ಭಾರಿಗಿಂತ ಈ ಸರಿ 50 ಕೋಟಿಯಷ್ಟು ಹೆಚ್ಚಳವಾಗಿದೆ ಎಂದು ಎಂಬಿಪಿಗೆ ಬೆನ್ನು ತಟ್ಟಿದ್ದಾರೆ.

ಇದನ್ನೂ ಓದಿ: ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ಪತ್ತೆ: ಸಚಿವ ಎಂಬಿ ಪಾಟೀಲ್ ಸುಳಿವು

ಜನರ ಅಭಿರುಚಿಗೆ ತಕ್ಕಂತೆ ತಯಾರಿ ಮಾಡಿ ಅಂತ ಸಲಹೆ ನೀಡಿದ್ದು, ಹೊಸ ಉತ್ಪನ್ನದ ಪ್ರಯೋಗ ಜನ ಪಡೆದುಕೊಳ್ಳಬೇಕು. ಮೈಸೂರು ಸೋಪ್ಸ್ ಆ್ಯಂಡ್​ ಡಿಟರ್ಜಂಟ್ ಸಿಬ್ಬಂದಿಗಳಿಗೆ ಸಿಎಂ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದು, ಹೆಚ್ಚು ಜನಪ್ರಿಯ ಆಗಲಿ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.