ಬೆಂಗಳೂರು: ಪ್ರೀತಿಗೆ ಮನೆಯವರ ವಿರೋಧ; ಮನನೊಂದ ಯುವತಿ ನೇಣಿಗೆ ಶರಣು

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 07, 2023 | 5:01 PM

ನೆಲಮಂಗಲ ಬಸವೇಶ್ವರ ಪದವಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ವೇಳೆ, ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ಪ್ರೀಯಕರ ಸಂತೋಷ್ ಎಂಬಾತನನ್ನು​ ಪ್ರೀತಿಸುತ್ತಿದ್ದಳು. ಆದರೆ, ಇದಕ್ಕೆ ಮನೆಯವರು ವಿರೋಧ ಪಡಿಸಿದ ಹಿನ್ನಲೆ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬೆಂಗಳೂರು: ಪ್ರೀತಿಗೆ ಮನೆಯವರ ವಿರೋಧ; ಮನನೊಂದ ಯುವತಿ ನೇಣಿಗೆ ಶರಣು
ಆತ್ಮಹತ್ಯೆಗೆ ಶರಣಾದ ಯುವತಿ
Follow us on

ಬೆಂಗಳೂರು, ಅ.07: ಪ್ರೀತಿಗೆ ಮನೆಯವರೇ ಅಡ್ಡಿ ಎಂದು ತಿಳಿದು ಯುವತಿಯೋರ್ವಳು ನೇಣಿಗೆ ಶರಣಾದ ಘಟನೆ ಬೆಂಗಳೂರಿನ (Bengaluru) ಟಿ.ದಾಸರಹಳ್ಳಿಯಲ್ಲಿ ನಡೆದಿದೆ. ಸ್ನೇಹ(20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರು ನೆಲಮಂಗಲ ಬಸವೇಶ್ವರ ಪದವಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದು, ಈ ವೇಳೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ಪ್ರೀಯಕರ ಸಂತೋಷ್ ಎಂಬಾತನನ್ನು​ ಪ್ರೀತಿಸುತ್ತಿದ್ದಳು. ಆದರೆ, ಇದಕ್ಕೆ ಮನೆಯವರು ವಿರೋಧ ಪಡಿಸಿದ ಹಿನ್ನಲೆ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪ್ರೀತಿ ವಿಷಯ ತಿಳಿದು ಅಜ್ಜಿ ಮನೆಗೆ ಶಿಪ್ಟ್​ ಮಾಡಿದ್ದ ಪೋಷಕರು

ಹೌದು, ಆಗಸ್ಟ್​ 16 ರಂದು ಕಾಲೇಜಿನಿಂದಲೇ ಸ್ನೇಹ, ಯುವಕನೊಂದಿಗೆ ಪರಾರಿಯಾಗಿದ್ದರು. ಈ ಸಂಬಂಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಮೂರು ದಿನಗಳ ಬಳಿಕ ಜೋಡಿಯನ್ನು  ಪೊಲೀಸರು ಮಂಡ್ಯದಲ್ಲಿ ಪತ್ತೆ ಹಚ್ಚಿದರು. ಆ ಬಳಿಕ ಯುವತಿ ಪೋಷಕರು ಸ್ನೇಹಳನ್ನು ನೆಲಮಂಗಲದಿಂದ ಅಜ್ಜಿ ಮನೆಗೆ ಕಳುಹಿಸಿದ್ದರು. ಇದಾದ ಕೆಲ ತಿಂಗಳು ಬೇರೆ ಬೇರೆಯಾಗಿದ್ದ ಸಂತೋಷ್​ ಮತ್ತು ಯುವತಿ ಸ್ನೇಹ. ಇದೀಗ ಎರಡು ತಿಂಗಳ ಬಳಿಕ ಅಜ್ಜಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ತುಮಕೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಬೆಂಗಳೂರಿನಿಂದ ಹೋಗಿ ರೈಲಿಗೆ ತಲೆ ಕೊಟ್ರು

ಲಾರಿ, ಬೈಕ್ ಡಿಕ್ಕಿ; ಫುಡ್​ ಡೆಲಿವರಿಬಾಯ್ ದುರ್ಮರಣ

ಬೆಂಗಳೂರು: ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಫುಡ್​ ಡೆಲಿವರಿಬಾಯ್​  ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೈಸ್ ರಸ್ತೆಯಲ್ಲಿ ನಡೆದಿದೆ. ರಮೇಶ್ ನಾಯ್ಕ್(37) ಮೃತ ವ್ಯಕ್ತಿ.
ಇತ ಗ್ರಾಹಕರಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಲಾರಿ ಚಾಲಕನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ