AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಜಪ್ಪ ಸರ್ಕಲ್ ಫ್ಯಾಮಿಲಿ ಸೂಪರ್ ಮಾರ್ಟ್​​ನಲ್ಲಿ ಅಗ್ನಿ ಅವಘಡ: ಒಂದೇ ರಾತ್ರಿಯಲ್ಲಿ 4 ಕೋಟಿ ನಷ್ಟ

ಈ ಶಾಪಿಂಗ್ ಮಾರ್ಟ್ ಅನ್ವರ್ ಎಂಬುವವರ ಮಾಲಿಕತ್ವದಲ್ಲಿತ್ತು. ರಾತ್ರಿ‌ 1:30ರ ಸುಮಾರಿಗೆ ಕಾಂಪ್ಲೆಕ್ಸ್ ನ ಒಂದು ತುದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ.

ನಂಜಪ್ಪ ಸರ್ಕಲ್ ಫ್ಯಾಮಿಲಿ ಸೂಪರ್ ಮಾರ್ಟ್​​ನಲ್ಲಿ ಅಗ್ನಿ ಅವಘಡ: ಒಂದೇ ರಾತ್ರಿಯಲ್ಲಿ 4 ಕೋಟಿ ನಷ್ಟ
ಫ್ಯಾಮಿಲಿ ಸೂಪರ್ ಮಾರ್ಟ್​​ನಲ್ಲಿ ಅಗ್ನಿ ಅವಘಡ
TV9 Web
| Edited By: |

Updated on:Sep 07, 2022 | 7:45 AM

Share

ಬೆಂಗಳೂರು: ರಿಚ್ಮಂಡ್ ಟೌನ್​ ನಂಜಪ್ಪ ಸರ್ಕಲ್ ಬಳಿಯ ಶಾಂತಾರಾಮ್ ಕಾಂಪ್ಲೆಕ್ಸ್ ನಲ್ಲಿದ್ದ ಫ್ಯಾಮಿಲಿ ಸೂಪರ್ ಮಾರ್ಟ್​​ನಲ್ಲಿ(Family Supermarket) ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಅಗ್ನಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ರಾತ್ರಿ ಸಂಭವಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಅಂಗಡಿಯಲ್ಲಿದ್ದ ಕೆಲ ವಸ್ತುಗಳು ಅಗ್ನಿಗಾಹುತಿಯಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ವುಡ್ ವರ್ಕ್, ಬುಕ್ಸ್ ಸಂಗ್ರಹಣೆ ಜಾಸ್ತಿ ಇದ್ದಿದ್ರಿಂದ ಬೆಂಕಿ ವ್ಯಾಪಿಸಿ ಸಂಪೂರ್ಣ ಸೂಪರ್ ಮಾರ್ಕೆಟ್ ಅಗ್ನಿಗಾಹುತಿಯಾಗಿದೆ. ಒಂದೇ ರಾತ್ರಿಯಲ್ಲಿ‌ 4 ಕೋಟಿ ನಷ್ಟವಾಗಿದ್ದು ಹತ್ತಾರು ನೌಕರರ ಬದುಕು ಬೀದಿಗೆ ಬಿದ್ದಿದೆ. ಈ ಶಾಪಿಂಗ್ ಮಾರ್ಟ್ ಅನ್ವರ್ ಎಂಬುವವರ ಮಾಲಿಕತ್ವದಲ್ಲಿತ್ತು. ರಾತ್ರಿ‌ 1:30ರ ಸುಮಾರಿಗೆ ಕಾಂಪ್ಲೆಕ್ಸ್ ನ ಒಂದು ತುದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ. ಘಟನೆ ಆರಂಭದಲ್ಲೇ ಅಗ್ನಿಶಾಮಕ ದಳದ ವಾಹನವೊಂದು ಸ್ಥಳಕ್ಕೆ ಬಂದಿದೆ. ಬಳಿಕ ಬೆಂಕಿಯ ಕೆನ್ನಾಲಿಗೆ ಕಂಡು ಹೆಚ್ಚುವರಿ ಅಗ್ನಿಶಾಮಕ ವಾಹನ ಕರೆಸಿಕೊಳ್ಳಲಾಗಿದೆ. ಉಳಿದ ವಾಹನಗಳು ಸ್ಥಳಕ್ಕೆ ತಲುಪುವಷ್ಟರಲ್ಲಿ ಇಡೀ ಕಾಂಪ್ಲೆಕ್ಸ್ ಅಗ್ನಿಗಾಹುತಿಯಾಗಿದೆ.

ಶಾಪಿಂಗ್ ಮಾರ್ಟಿನಲ್ಲಿದ್ದ 4 ಲಕ್ಷ ನಗದು 3 ಕೋಟಿಯಷ್ಟು ವಸ್ತುಗಳು 1 ಕೋಟಿ ಮೌಲ್ಯದ ಪೀಠೋಪಕರಣ ಸಂಪೂರ್ಣ ಸುಟ್ಟು ಭಸ್ಮವಾಗಿದೆ. 9 ಅಗ್ನಿಶಾಮಕ ವಾಹನಗಳಿಂದ ಬೆಳಗ್ಗಿನ ಜಾವದವರೆಗೂ ಬೆಂಕಿ‌ ನಂದಿಸುವ ಕಾರ್ಯ ನಡೆದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:45 am, Wed, 7 September 22

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ