Umesh Katti: ಹವಾಮಾನ ವೈಪರೀತ್ಯ ಹಿನ್ನೆಲೆ ಉಮೇಶ್ ಕತ್ತಿ ಪಾರ್ಥಿವ ಶರೀರ ಏರ್ಲಿಫ್ಟ್ ವಿಳಂಬ
ಚೆನ್ನೈನಲ್ಲೂ ಹವಾಮಾನ ವೈಪರೀತ್ಯ ಹಿನ್ನೆಲೆ ಚೆನ್ನೈನಿಂದ ಬೆಂಗಳೂರಿಗೆ ಬರಬೇಕಿದ್ದ ವಿಶೇಷ ವಿಮಾನ ಕ್ಯಾನ್ಸಲ್ ಆಗಿ ಹೈದರಾಬಾದ್ನಿಂದ ವಿಶೇಷ ವಿಮಾನ ಆಗಮಿಸುತ್ತಿದೆ.
ಬೆಂಗಳೂರು: ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ(Umesh Katti) ನಿನ್ನೆ ತಡರಾತ್ರಿ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಒಂದು ದಿನ ಶೋಕಾಚರಣೆ ಘೋಷಿಸಿದೆ. ಮತ್ತೊಂದು ಕಡೆ ಈಗಾಗಲೇ ಉಮೇಶ್ ಕತ್ತಿ ಪಾರ್ಥಿವ ಶರೀರ ಹೆಚ್ಎಎಲ್ ಏರ್ಪೋರ್ಟ್(HAL Airport) ತಲುಪಿದ್ದು ಏರ್ಲಿಫ್ಟ್ ಕಾರ್ಯ ವಿಳಂಬವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.
ಹವಾಮಾನ ವೈಪರೀತ್ಯ ಹಿನ್ನೆಲೆ ಏರ್ಲಿಫ್ಟ್ ವಿಳಂಬವಾಗಿದೆ. ಚೆನ್ನೈನಲ್ಲೂ ಹವಾಮಾನ ವೈಪರೀತ್ಯ ಹಿನ್ನೆಲೆ ಚೆನ್ನೈನಿಂದ ಬೆಂಗಳೂರಿಗೆ ಬರಬೇಕಿದ್ದ ವಿಶೇಷ ವಿಮಾನ ಕ್ಯಾನ್ಸಲ್ ಆಗಿ ಹೈದರಾಬಾದ್ನಿಂದ ವಿಶೇಷ ವಿಮಾನ ಆಗಮಿಸುತ್ತಿದೆ. ಈ ವಿಶೇಷ ವಿಮಾನ 10.30ಕ್ಕೆ ಹೆಚ್ಎಎಲ್ ತಲುಪಲಿದೆ. ಹೀಗಾಗಿ ಏರ್ಲಿಫ್ಟ್ ವಿಳಂಬವಾಗಲಿದೆ.
ಇನ್ನು ರಾಜಕೀಯ ಗಣ್ಯರು ಹೆಚ್ಎಎಲ್ ಏರ್ಪೋರ್ಟ್ ನಲ್ಲಿ ಉಮೇಶ್ ಕತ್ತಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೃಷಿ ಸಚಿವ ಬಿಸಿ. ಪಾಟೀಲ್, ಸಚಿವ ಭೈರತಿ ಬಸವರಾಜ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕೆಜೆ ಜಾರ್ಜ್, ಎಮ್.ಟಿ.ಬಿ. ನಾಗರಾಜ್ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದ್ರು.
ಈ ವೇಳೆ HALನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಉಮೇಶ್ ಕತ್ತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಉಮೇಶ್ ಕತ್ತಿ ನನಗೆ ಒಳ್ಳೆಯ ಸ್ನೇಹಿತ. ನೇರ ನುಡಿಯ ವ್ಯಕ್ತಿಯಾಗಿದ್ದವ. ಕತ್ತಿ ಆರೋಗ್ಯದ ಬಗ್ಗೆ ಮೊದಲಿಂದ ನಿರ್ಲಕ್ಷ್ಯ ವಹಿಸಿದ್ರು. ಸರ್ಕಾರ ಮೂರು ದಿನ ಶೋಕಾಚರಣೆ ಮಾಡಬೇಕಾಗಿತ್ತು. ಯಾಕೆಂದರೆ ಉಮೇಶ್ ಕತ್ತಿ ಹಾಲಿ ಸಚಿವರಾಗಿದ್ದವರು. ಹಾಗಾಗಿ ಮೂರು ದಿನ ಶೋಕಾಚರಣೆ ಮಾಡಬೇಕಾಗಿತ್ತು. ಉಮೇಶ್ ಕತ್ತಿ ನನ್ನ ಜೊತೆ ಬಹಳ ಆತ್ಮೀಯವಾಗಿದ್ದರು. ನಾನು ಕೂಡ ಬೆಳಗಾವಿಗೆ ಹೋಗುತ್ತೇನೆ ಎಂದರು.
ಉಮೇಶ್ ಕತ್ತಿ ಅವರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:18 am, Wed, 7 September 22