ಯಲಹಂಕ: ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಶಿವರಾಂ ಕಾರಂತ ಬಡಾವಣೆಗಾಗಿ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ತಾಲೂಕಿನ 17 ಗ್ರಾಮಗಳ ರೈತರಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು,. ಬಿಳಿ ಪಂಚೆ ಶಾಲು,ಟೋಪಿ ಮತ್ತು ಕೋಲಿನೊಂದಿಗೆ- ಗಾಂಧೀಜಿಯ ವೇಷ ಧರಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ರಾಮಗೊಂಡನಹಳ್ಳಿಯಲ್ಲಿ ಧರಣಿನಿರತ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವರಾಂ ಕಾರಂತ ಬಡಾವಣೆಗೆ 3500 ಎಕರೆ ಜಮೀನು ಸ್ವಾಧೀನಕ್ಕೆ ಮುಂದಾಗಿರುವ ಬಿಡಿಎ ನಿರ್ಧಾರವನ್ನು ರೈತರು ವಿರೋಧಿಸಿದ್ದಾರೆ. ರೈತರ ಜಮೀನು ವಶಪಡಿಸಿಕೊಳ್ಳದಂತೆ ರೈತರಿಂದ ಹೋರಾಟ ನಡೆಸಲು ತೀರ್ಮಾನಿಸಲಾಗಿದ್ದು, ನೂರಾರು ರೈತರಿಂದ ಗಾಂಧಿವೇಶ ಧರಿಸಿ ಹೋರಾಟ ನಡೆಸಲಾಗುತ್ತಿದೆ. ಯಲಹಂಕದ ಕೆಂಪೇಗೌಡ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ರೈತರಿಂದ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿತ್ತು. ಪ್ರತಿಭಟನೆಯ ಮುಖಾಂತರ ರೈತರು ಭೂಸ್ವಾಧೀನವನ್ನು ಕೈಬಿಡುವಂತೆ ಸಿಎಂಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿತ್ತು.
ಪ್ರತಿಭಟನೆಯ ಕುರಿತ ವಿಡಿಯೊ ವರದಿ ಇಲ್ಲಿದೆ:
ಇದನ್ನೂ ಓದಿ:
ಮೈಸೂರು: ಅರ್ಧಕ್ಕೆ ಕೈಕೊಟ್ಟ ಇಲೆಕ್ಟ್ರಿಕ್ ಕಾರು; ರಸ್ತೆಯಲ್ಲೇ ಕಾರು ಬಿಟ್ಟು ತೆರಳಿದ ಮಾಲೀಕ
Tumkur soldier martyred: ಜಮ್ಮು-ಕಾಶ್ಮೀರ ಗಡಿಯಲ್ಲಿ ಗುಂಡಿನ ಚಕಮಕಿ, ತುಮಕೂರಿನ ಯೋಧ ರಂಗಯ್ಯ ಹುತಾತ್ಮ
Published On - 10:43 am, Sat, 2 October 21