ಮೈಸೂರು: ಅರ್ಧಕ್ಕೆ ಕೈಕೊಟ್ಟ ಇಲೆಕ್ಟ್ರಿಕ್ ಕಾರು; ರಸ್ತೆಯಲ್ಲೇ ಕಾರು ಬಿಟ್ಟು ತೆರಳಿದ ಮಾಲೀಕ
ಮೈಸೂರಿನಲ್ಲಿ ಇಲೆಕ್ಟ್ರಿಕ್ ಕಾರಿನ ಚಾರ್ಜಿಂಗ್ ಸಮಸ್ಯೆಯಿಂದ ಅದರ ಮಾಲೀಕ ರಸ್ತೆಯಲ್ಲೇ ಕಾರನ್ನು ಬಿಟ್ಟು ಹೋದ ಪ್ರಕರಣ ನಡೆದಿದೆ. ಇದೇ ವೇಳೆ ಟಿವಿ9ನೊಂದಿಗೆ ಮಾತನಾಡಿರುವ ಅವರು, ಇಲೆಕ್ಟ್ರಿಕ್ ಕಾರು ಸೇವೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರು: ಅರ್ಧಕ್ಕೆ ಇಲೆಕ್ಟ್ರಿಕ್ ಕಾರು ಕೈ ಕೊಟ್ಟ ಕಾರಣ ಮಾಲೀಕ ರಸ್ತೆಯಲ್ಲೇ ಅದನ್ನು ಬಿಟ್ಟು ತೆರಳಿದ ಘಟನೆ ಮೈಸೂರಿನಲ್ಲಿ ನಡೆದಿದೆ. ನಗರದ ಕಲಾಮಂದಿರದ ಬಳಿ ಘಟನೆ ನಡೆದಿದ್ದು, ಅರುಣೇಶ್ ಎಂಬುವವರು ಹೊಸ ಕಾರನ್ನು ಬಿಟ್ಟು ಹೋಗಿದ್ದಾರೆ. ಅವರು ರಾಮನಗರ ಜಿಲ್ಲೆ ಕನಕಪುರದ ನಿವಾಸಿಯಾಗಿದ್ದು, ಒಂದು ತಿಂಗಳ ಹಿಂದೆ ಎಂ.ಜಿ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದರು. ಚಾರ್ಜಿಂಗ್ ಪಾಯಿಂಟ್ ಸಮಸ್ಯೆಯಿಂದ ಬೇಸತ್ತ ಕಾರಣ, ಹೀಗೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ. ಇದೇ ವೇಳೆ ಅವರು ಟಿವಿ9ನೊಂದಿಗೆ ಮಾತನಾಡಿ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ.
ಘಟನೆಗೆ ಕಾರಣವೇನು? ಅರುಣೇಶ್ ಅವರು ಸುಮಾರು ₹ 26 ಲಕ್ಷ ಹಣ ಕೊಟ್ಟು ಇಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿದ್ದರು. ಕನಕಪುರದಿಂದ ಕೊಡಗಿಗೆ ಹೋಗುತ್ತಿದ್ದಾಗ, ಮೈಸೂರಿನ ಬಳಿ ಚಾರ್ಜ್ ಖಾಲಿಯಾಗಿತ್ತು. ಆಗ ಹುಣಸೂರು ರಸ್ತೆಯ ಎಂ ಜಿ ಶೋರೂಂಗೆ ಚಾರ್ಜಿಂಗ್ಗಾಗಿ ತೆರಳಿದ್ದರು. ಆದರೆ ಅಲ್ಲಿನ ಟಾಟಾ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಸಮಸ್ಯೆಯಾಗಿದ್ದು, ಒಂದುವರೆ ಗಂಟೆ ಹರಸಾಹಸದ ಬಳಿಕ ಕಾರು ಪುಲ್ ಚಾರ್ಜ್ ಆಗಿದೆ.
ಆದರೆ ಮತ್ತೆ ವಾಪಸ್ಸು ಬರುವಾಗ ಚಾರ್ಜ್ ಮಾಡಲು ಹೋದಾಗ, ಚಾರ್ಜಿಂಗ್ ಪಾಯಿಂಟ್ ಕೆಲಸ ಮಾಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಎಷ್ಟೇ ಪ್ರಯತ್ನಪಟ್ಟರು ಚಾರ್ಜ್ ಆಗದ ಕಾರಣ, ವಿಧಿಯಿಲ್ಲದೇ ರಸ್ತೆಯಲ್ಲೇ ಕಾರನ್ನು ಬಿಟ್ಟು ಅವರು ತೆರಳಿದ್ದಾರೆ. ನಂತರ ಮತ್ತೆ ಕರೆ ಮಾಡಿದ ಶೋರೂಂನವರು, ರಾತ್ರಿ ವೇಳೆಗೆ ಸಮಸ್ಯೆಗೆ ಪರಿಹಾರ ಸರಿಯಾದ ಚಾರ್ಜಿಂಗ್ ಪಾಯಿಂಟ್ ಸಮಸ್ಯೆ ಎಂದಿದ್ದಾರೆ. ಎಲೆಕ್ಟ್ರಿಕ್ ಕಾರು ಸೇವೆ ಬಗ್ಗೆ ಕಾರು ಮಾಲೀಕ ಅರುಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿಗೆ ಕಂಟಕ; ಕಾನೂನು ಹೋರಾಟಕ್ಕೆ ಟಿಎಪಿಸಿಎಂಎಸ್ ನಿರ್ಧಾರ
ಅಂಜನಾದ್ರಿ ಪರ್ವತದಲ್ಲಿ ಅನ್ಯ ಧರ್ಮಿಯರ ಅಂಗಡಿಗಳು ಇರಬಾರದು ಎಂದಿದ್ದ ಮಧುಗಿರಿ ಮೋದಿ ವಿರುದ್ಧ ಕೇಸ್ ದಾಖಲು
Published On - 9:59 am, Sat, 2 October 21