Death Note: ಯಾರಿಂದಲೂ ಸಹಾಯ ದೊರೆಯಲಿಲ್ಲ; ಇಂತ ಕೆಟ್ಟ ಪ್ರಪಂಚದಲ್ಲಿ ಬದುಕೋದು ಹೇಗೆ ಎಂಬ ಪ್ರಶ್ನೆಗೆ ನಮ್ಮ ಸಾವೇ ಉತ್ತರ!

ಗಂಡನಿಲ್ಲದ ಬದುಕು ನಮಗೆ ಕಷ್ಟವಾಗುತ್ತಿದೆ ಎಂದು ಡೆತ್ ನೋಟ್​ನಲ್ಲಿ ಉಲ್ಲೇಖಿಸಿದ್ದು, ನಾವು ಇನ್ಯಾರಿಗೂ ತೊಂದರೆ ಕೊಡುವುದಿಲ್ಲ. ನಮ್ಮವರೂ ಅಂತ ನಮಗ್ಯಾರೂ ಇಲ್ಲ. ಎಂದು ಇನ್ನಿತರ ವಿಷಯಗಳ ಬಗ್ಗೆ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Death Note: ಯಾರಿಂದಲೂ ಸಹಾಯ ದೊರೆಯಲಿಲ್ಲ; ಇಂತ ಕೆಟ್ಟ ಪ್ರಪಂಚದಲ್ಲಿ ಬದುಕೋದು ಹೇಗೆ ಎಂಬ ಪ್ರಶ್ನೆಗೆ ನಮ್ಮ ಸಾವೇ ಉತ್ತರ!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on:Oct 02, 2021 | 2:09 PM

ಬೆಂಗಳೂರು: ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಮಹಿಳೆ ತನ್ನ ಇಬ್ಬರು ಮಕ್ಕಳ ಜತೆ  ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ. ಸಾವಿಗೂ ಮುನ್ನ ಮೂರು ಪುಟಗಳ ಡೆತ್ ನೋಟ್ ಬರೆದಿರುವ ಮೃತ ಮಹಿಳೆ ವಸಂತ, ನನ್ನ ಸಾವಿಗೆ ಯಾರು ಕಾರಣರಲ್ಲ. ನನ್ನ ಪತಿಯ ಅನಾರೋಗ್ಯದ ಸಂದರ್ಭದಲ್ಲಿ ಯಾರೂ ಸ್ಪಂದಿಸಲಿಲ್ಲ. ಕೊವಿಡ್​ನಿಂದ ಪತಿ ಮೃತಪಟ್ಟುರೂ ನಮಗೆ ಯಾರೂ ನೆರವಾಗಲಿಲ್ಲ. ಮನೆ ಖರೀದಿಗೆ ಸಾಲ ಮಾಡಿದ್ದೇವೆ. ಈ ಮನೆ ಮಾರಾಟ ಮಾಡಿ ಅವರ ಸಾಲ ತೀರಿಸಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ಗಂಡನಿಲ್ಲದ ಬದುಕು ನಮಗೆ ಕಷ್ಟವಾಗುತ್ತಿದೆ ಎಂದು ಡೆತ್ ನೋಟ್​ನಲ್ಲಿ ಉಲ್ಲೇಖಿಸಿದ್ದು, ನಾವು ಇನ್ಯಾರಿಗೂ ತೊಂದರೆ ಕೊಡುವುದಿಲ್ಲ. ನಮ್ಮವರೂ ಅಂತ ನಮಗ್ಯಾರೂ ಇಲ್ಲ. ಎಂದು ಇನ್ನಿತರ ವಿಷಯಗಳ ಬಗ್ಗೆ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಮಹಿಳೆ ಬರೆದ ಡೆತ್ ನೋಟ್​ನಲ್ಲಿ ಏನಿದೆ? ಯಾರಿಗೆ ಯಾರೂ ಇಲ್ಲ ಎಂದು ಸತ್ಯ ತಿಳಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಉಲ್ಲೇಖಿಸಿರುವ ವಸಂತ, ನಾವು ನಗುವಾಗ ಊರೆಲ್ಲಾ ನೆಂಟರು, ಅಳುವಾಗ ಯಾರೂ ಇಲ್ಲ. ಪತಿ ಪ್ರಸನ್ನನನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ನಾವು ಇದ್ದೂ ಸತ್ತ ಹಾಗೆ ಇದ್ದೇವೆ. ಸಾಲ ಕೊಟ್ಟವರಿಗೆ ಮೋಸ ಆಗಬಾರದು ಎಂದು ಗಟ್ಟಿ ಜೀವ ಮಾಡಿ ಬದುಕಿದ್ದೆ. ಇನ್ನೊಂದು ಜವಾಬ್ದಾರಿ ಇತ್ತು ಅದು ಮಕ್ಕಳು.

ಅವರು ಎಲ್ಲವನ್ನು ಮಾಡಿ ಹೋಗಿದ್ದಾರೆ. ಅವರಿಲ್ಲದೆ ಅನಾಥ ಪ್ರಜ್ಞೆ. ಅವರಿಲ್ಲದೆ ಜೀವನ ಹೇಗೆ. ನಮ್ಮವರೂ ಅಂತ ಯಾರಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ. ಅವರು ಕೊಡ್ತಿದ್ದ ಪ್ರೀತಿ ಕಾಳಜಿ ಇತರರಿಂದ ನನಗೂ ಮಕ್ಕಳಿಗೆ ಸಿಗಲಿಲ್ಲ. ಇಂತ ಕೆಟ್ಟ ಪ್ರಪಂಚದಲ್ಲಿ ಬದುಕೋದು ಹೇಗೆ ಎಂಬ ಪ್ರಶ್ನೆಗೆ ಸಾವು ಉತ್ತರ. ಸರಿಯಾದ ಸಹಾಯ ಯಾರಿಂದಲೂ ದೊರೆಯಲಿಲ್ಲ. ನಮ್ಮವರಿಗಿಂತ ಬೇರೆಯವರು ತೋರಿಸುವ ಕಾಳಜಿ ಹೆಚ್ಚು. ಎಲ್ಲರೂ ಒಳಗೊಳಗೆ ಮೋಸ ಮಾಡಿದರು ಎಂದು ಮೃತ ಮಹಿಳೆ ವಸಂತ ಡೆತ್ ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಎಲ್ಲವನ್ನು ಮಾಡ್ತೀನಿ ಎಂದು ಸರಿಯಾಗಿ ಮಾಡಲಿಲ್ಲ. ನನ್ನ ಗಂಡನಿಗೆ ಬರಬೇಕಾದ ಹಣಕ್ಕೆ ಸರಿಯಾದ ದಾಖೆಲೆ ಸಿಗಲಿಲ್ಲ. ಬರಬೇಕಾದ ಹಣ ಸರಿಯಾದ ಸಮಯಕ್ಕೆ ಬರಲಿಲ್ಲ. ನಮ್ಮವರಿದ್ದೂ ಬೇರೆವರಿಂದ ಸಹಾಯ ಪಡೆಯಲು ಆಗಲಿಲ್ಲ. ಉಪಕಾರವಾದ್ರೆ ಮಾತ್ರ ಕೆಲಸ, ಇಲ್ಲದಿದ್ರೆ ಚುಚ್ಚು ಮಾತು. ನನ್ನ ಗಂಡ ಇದ್ದಿದ್ರೆ ನನಗೆ ಹೀಗೆ ಆಗ್ತಿತ್ತಾ? ನಾನು ಸಾಯಬಾರದು ಮಕ್ಕಳನ್ನು ಬೆಳೆಸಬೇಕು ಎಂದುಕೊಂಡಾಗ ಬದುಕೇ ಬೇಡ ಅನ್ನಿಸುತ್ತಿತ್ತು. ನನ್ನ ಸಂಬಂಧಿಗಳು ಯಾರೂ ಕೂಡ ಧೈರ್ಯ ತುಂಬಲಿಲ್ಲ ಎಂದು ಮೃತ ಮಹಿಳೆ ವಸಂತ ಡೆತ್ ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಪ್ರತೀಕ್ಷಣ ಭಯದ ವಾತಾವರಣ, ಮುಂದೆ ದಾರಿ ಕಾಣುತ್ತಿರಲಿಲ್ಲ. ನನಗೆ ಜತೆ ನಮ್ಮಮ್ಮ ಇದ್ರು, ಅವರಿಗೆ ಧರ್ಮ ಸಂಕಟವಿತ್ತು. ನಾನು ಯಾರನ್ನೂ ಧೂಷಿಸಲ್ಲ, ಇದು ನನ್ನ ಹಣೆಯ ಬರಹ ನನ್ನ ಪಾಲಿಗೆ ಬಂತು. ಯಾರೂ ಕೂಡ ಹಣ ಆಸ್ತಿ ಇದ್ದರೆ ಸಾಕು, ಇನ್ನೇನು ಬೇಕು ಎಂದುಕೊಳ್ಳಬೇಡಿ. ಹಗುರವಾಗಿ ಮಾತನಾಡಬೇಡಿ. ಹಣಕ್ಕೆ ಬೆಲೆ ಕೊಡುವವರೂ ಮಾತ್ರ ಈ ಮಾತನ್ನ ಹೇಳ್ತಾರೆ. ಅವಳಿಗೆ ಎಲ್ಲಾ ಇದೆ ಎಂದು ನಮ್ಮವರೇ ಹೇಳ್ತಾರೆ ಅಂತವರಿಗೆ ಕ್ಷಮೆ ಇಲ್ಲ. ಅವರನ್ನು ಪ್ರೀತಿಸುವವರು ಇಲ್ಲದಿದ್ದಾಗ ಗೊತ್ತಾಗುತ್ತದೆ ಎಂದು ಮೃತ ಮಹಿಳೆ ವಸಂತ ಡೆತ್ ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಸ್ವಲ್ಪ ಪ್ರೀತಿ ಕಾಳಜಿ ಸಿಕ್ಕೆರೆ ಹೇಗೋ ಬದುಕಬಹುದು. 1 ವರ್ಷದಲ್ಲಿ ನನಗೆ ಇವ್ಯಾವು ಸಿಗಲಿಲ್ಲ. ನಾನು ಅನಾಥ ಮಕ್ಕಳು ನೋಡಿದರೆ ಅಳುತ್ತಿದೆ. ನನ್ನ ಮಕ್ಕಳೇ ತಬ್ಬಲಿಯಾದ್ರು. ಅದನ್ನು ನೋಡಿ ಸಹಿಸಲಾಗಲಿಲ್ಲ. ನಮ್ಮ ಮಗಳ ಮಾತಿಗೆ ಉತ್ತರಿಸಲು ಆಗುತ್ತಿರಲಿಲ್ಲ. ಕಣ್ಣೀರಲ್ಲಿ ಕೈತೊಳೆದು. ನನ್ನ ಮಗಳ ಆಸೆಯನ್ನು ಸಂಬಂಧಿಕರು ನೆರವೆರಿಸಲಿಲ್ಲ. ಮಗಳ ಸ್ನೇಹಿತರು ಊರಿಗೆ ಹೋದರೆ ನನ್ನನ್ನ ಯಾರು ಕರೆದುಕೊಂಡು ಹೋಗ್ತಾರೆ ಅಂತಿದ್ದಳು. ಆ ಮಗುವನ್ನು ಊರಿಗೆ ಯಾರೂ ಕರೆದುಕೊಂಡು ಹೋಗಲಿಲ್ಲ. ಅವರು ಯಾರು ಚೆನ್ನಾಗಿರಲ್ಲ. ಇಂತಿ ನತದೃಷ್ಟ ಹೆಣ್ಣು ವಸಂತ ಎಂದು ಡೆತ್​ ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಆತ್ಮಹತ್ಯೆ ವಿಚಾರವಾಗಿ ಮಕ್ಕಳ ಬ್ರೈನ್ ವಾಶ್ ಮಾಡಿದ್ದರು ವಸಂತ! ಅಪ್ಪ ಇಲ್ಲದೇ ಬದುಕು ತುಂಬಾ ಕಷ್ಟ ಆಗುತ್ತಿದೆ. ಯಾರಿಗೂ ನಾವು ತೊಂದರೆ ಕೊಡೋದು ಬೇಡ. ಅಪ್ಪ ಇರುವ ಜಾಗಕ್ಕೆ ನಾವೆಲ್ಲ ಹೋಗಿಬಿಡೋಣ ಎಂದು ಈ ಮೊದಲೇ ಮಕ್ಕಳ ಮುಂದೆ ಹೇಳಿದ್ದಾರೆ. ಇದಕ್ಕೆ ಮಕ್ಕಳು ಕೂಡ ಸಮ್ಮತಿ ಸೂಚಿಸಿದ್ದು, ಅಪ್ಪನ ಬಳಿಯೇ ಹೋಗಿಬಿಡೋಣ ಎಂದಿದ್ದಾರೆ. ಈ ವಿಷಯವನ್ನು ಮಕ್ಕಳು ಅಜ್ಜಿಗೂ (ವಸಂತ ಅಮ್ಮ ತಾಯಮ್ಮ) ಕೂಡ ಹೇಳಿದ್ದರು.

ಈ ಎಲ್ಲಾ ವಿಚಾರವನ್ನು ತಾಯಮ್ಮ ತನ್ನ ಮಗನಿಗೆ ಹೇಳಿದ್ದು, ಅಕ್ಕನ ಈ ನಿರ್ಧಾರ ಕಂಡು ತಮ್ಮ ಹೆದರಿದ್ದರು, ಹೀಗಾಗಿ ತಾಯಿಯನ್ನು ವಸಂತನ ಮನೆಯಲ್ಲಿ ಜೊತೆಗೆ ಇರಲು ಬಿಟ್ಟಿದ್ದರು. ಈ ಮಧ್ಯೆ ಅನಾರೋಗ್ಯ ಸಮಸ್ಯೆ ತಾಯಮ್ಮಗೆ ಎದುರಾಗಿದೆ. ಆಸ್ಪತ್ರೆಗೆ ತೋರಿಸಲು ಮಗ ಮನೆಗೆ ಕರೆದುಕೊಂಡು ಹೋಗಿದ್ದರು. ನಿನ್ನೆ (ಅಕ್ಟೋಬರ್ 1) ಬೆಳಗ್ಗೆ ಆಸ್ಪತ್ರೆಗೆ ಹೋಗಿ ಸಂಜೆ ವಸಂತ ಮನೆಗೆ ತಾಯಮ್ಮ ಹೋಗಿದ್ದಾರೆ. ಆದರೆ ಈ ಮಧ್ಯೆ ನೇಣು ಬಿಗಿದುಕೊಂಡು ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ. ತಾಯಿ ಮತ್ತೆ ಸಂಜೆ ಮನೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ.

ಕೊವಿಡ್​ನಿಂದ ಮೃತ ಪೀಣ್ಯದಲ್ಲಿರುವ 22 ನೇ ಡಿಪೋನಲ್ಲಿ‌ ಕಂಡಕ್ಟರ್ ಕಂ ಚಾಲಕನಾಗಿ ಪ್ರಸನ್ನ ಕುಮಾರ್ ಕೆಲಸ ಮಾಡುತ್ತಿದ್ದರು. ಕೊರೊನಾ ಹಿನ್ನೆಲೆ ಆರ್.ಆರ್.ನಗರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಗಸ್ಟ್​ 7, 2020 ರಂದು ಕೊರೊನಾಗೆ ಪ್ರಸನ್ನ ಕುಮಾರ್ ಮೃತಪಟ್ಟಿದ್ದಾರೆ. ಅಂದಿನಿಂದ ವಸಂತ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ; ತಾಯಿ, ಇಬ್ಬರು ಮಕ್ಕಳು ಮೃತ

ಮಗು ಸಾಯಿಸಿ, ನಾಲ್ವರು ಆತ್ಮಹತ್ಯೆ ಪ್ರಕರಣ: ಪೊಲೀಸರಿಂದ ಮೂವರ ಬಂಧನ

Published On - 9:48 am, Sat, 2 October 21