ಮಗು ಸಾಯಿಸಿ, ನಾಲ್ವರು ಆತ್ಮಹತ್ಯೆ ಪ್ರಕರಣ: ಪೊಲೀಸರಿಂದ ಮೂವರ ಬಂಧನ

ಮಗುವನ್ನು ಸಾಯಿಸಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ

ಮಗು ಸಾಯಿಸಿ, ನಾಲ್ವರು ಆತ್ಮಹತ್ಯೆ ಪ್ರಕರಣ: ಪೊಲೀಸರಿಂದ ಮೂವರ ಬಂಧನ
ಸಾಂಕೇತಿಕ ಚಿತ್ರ

ಬೆಂಗಳೂರು: ಮಗುವನ್ನು ಸಾಯಿಸಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಹಲ್ಲೆಗೆರೆ ಶಂಕರ್, ಅಳಿಯಂದಿರಾದ ಪ್ರವೀಣ್ ಹಾಗೂ ಶ್ರೀಕಾಂತ್ ಬಂಧಿತರು. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 306ರ (ಆತ್ಮಹತ್ಯೆ ಪ್ರಚೋದನೆ) ಅಡಿಯಲ್ಲಿ ಆರೋಪಪಟ್ಟಿ ದಾಖಲಿಸಲಾಗಿದೆ.

ಲ್ಯಾಪ್​ಟ್ಯಾಪ್​ನಲ್ಲಿ ಬರೆದಿಟ್ಟಿದ್ದ ಡೆತ್​ನೋಟ್​ನಲ್ಲಿ ತಂದೆ ಶಂಕರ್ ಹಾಗೂ ಅಳಿಯಂದಿರ ವಿರುದ್ಧ ಮೃತರು ಆರೋಪ ಮಾಡಿದ್ದರು. ಸಿಂಧೂರಾಣಿ, ಸಿಂಚನಾ ತಮ್ಮ ಪತಿಯಂದಿರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಹಲ್ಲೆಯ ಆರೋಪ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಲ್ಯಾಪ್​​ಟ್ಯಾಪ್, ನಾಲ್ಕು ಮೊಬೈಲ್ ಫೋನ್​ ಹಾಗೂ 3 ಡೆತ್​​ನೋಟ್ ಪೊಲೀಸರು ವಶಪಡಿಸಿಕೊಂಡಿದ್ದರು. ಮನೆ ಮಾಲೀಕ ಹಲ್ಲೆಗೆರೆ ಶಂಕರ್, ಪುತ್ರಿ ಸಿಂಚನಾರ ಪತಿ ಪ್ರವೀಣ್, ಸಿಂಧುರಾಣಿಯ ಪತಿ ಶ್ರೀಕಾಂತ್ ಬಂಧಿತರು.

ಮಹಿಳೆ ಸಾವು
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮಹಿಳೆಯ ಸಾವಿಗೆ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ದೂರಲಾಗಿದೆ. ಮೈ ಕೈ ನೋವಿನ ಚಿಕಿತ್ಸೆಗೆಂದು ಬಂದಿದ್ದ ಶಾಂತಮ್ಮ (46) ಆಸ್ಪತ್ರೆ ಸಿಬ್ಬಂದಿ ಇಂಜೆಕ್ಷನ್ ನೀಡಿದ ಬಳಿಕ ಸಾವನ್ನಪ್ಪಿದ್ದರು ಎಂದು ಆರೋಪಿಸಲಾಗಿದೆ.

11ನೇ ಮಹಡಿಯಿಂದ ಬಿದ್ದು ಬಾಲಕ ಸಾವು
ಬೆಂಗಳೂರಿನ ಬನಶಂಕರಿಯಲ್ಲಿರುವ ಶೋಭಾ ವ್ಯಾಲಿ ಅಪಾರ್ಟ್​ಮೆಂಟ್​ನಲ್ಲಿ 11ನೇ ಮಹಡಿಯಿಂದ ಕೆಳಗೆ ಬಿದ್ದು 10 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು ಗಗನ್ ಎಂದು ಗುರುತಿಸಲಾಗಿದೆ. ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ಸಂದರ್ಭ ಬಾಲಕ ಆಯತಪ್ಪಿ ಕೆಳಗೆಬಿದ್ದಿದ್ದ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Police Arrest three accused in Four suicide after killing Child case)

ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೇ ಹಳಿ ಮೇಲೆ ನಿಂತಿದ್ದ ಯುವತಿಯ ಪ್ರಾಣ ಕಾಪಾಡಿದ ಆಟೋ ಚಾಲಕ; ವಿಡಿಯೋ ವೈರಲ್

ಅತ್ತೆ ಮಗಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ
ಇದನ್ನೂ ಓದಿ: ರಾಯಚೂರಿನಲ್ಲಿ ಒಂದೇ ಕುಟುಂಬದ ಮೂವರ ಕೊಲೆ! ಅಳಿಯನೇ ಹತ್ಯೆ ಮಾಡಿರುವ ಶಂಕೆ

Read Full Article

Click on your DTH Provider to Add TV9 Kannada