ಹಾಸನದ ಆಲೂಗಡ್ಡೆ ಬೆಳೆಗಾರರಿಗೆ 129 ಕೋಟಿ ನಷ್ಟವಾಗಿದೆ: ಎಚ್.ಡಿ.ರೇವಣ್ಣ ಆಕ್ಷೇಪ

TV9 Digital Desk

| Edited By: guruganesh bhat

Updated on: Oct 01, 2021 | 5:57 PM

1 ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲು 52,000 ಖರ್ಚಾಗುತ್ತದೆ. ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯಲು 137 ಕೋಟಿ ಖರ್ಚಾಗಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಲೆಕ್ಕ ತಿಳಿಸಿದರು.

ಹಾಸನದ ಆಲೂಗಡ್ಡೆ ಬೆಳೆಗಾರರಿಗೆ 129 ಕೋಟಿ ನಷ್ಟವಾಗಿದೆ: ಎಚ್.ಡಿ.ರೇವಣ್ಣ ಆಕ್ಷೇಪ
ಹೆಚ್.ಡಿ. ರೇವಣ್ಣ

ಹಾಸನ: ಜಿಲ್ಲೆಯಲ್ಲಿ 1.25 ಲಕ್ಷ ಎಕರೆಯಲ್ಲಿ ಆಲೂಗಡ್ಡೆ ಬೆಳೆಯುತ್ತಿದ್ದೆವು. ಕರ್ನಾಟಕದಲ್ಲಿ ಅತಿಹೆಚ್ಚು ಆಲೂಗಡ್ಡೆಯನ್ನು ಹಾಸನದಲ್ಲೇ ಬೆಳೆಯುತ್ತಿದ್ದರು. ಆದರೆ ಇಂದು ಕೇವಲ 26,500 ಎಕರೆಯಲ್ಲಿ ಆಲೂಗೆಡ್ಡೆ ಬೆಳೆಯುತ್ತಿದ್ದಾರೆ. 1 ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲು 52,000 ಖರ್ಚಾಗುತ್ತದೆ. ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯಲು 137 ಕೋಟಿ ಖರ್ಚಾಗಿದೆ. ಈ ಲೆಕ್ಕದಲ್ಲಿ ಹಾಸನ ಜಿಲ್ಲೆಯ ರೈತರಿಗೆ 190 ಕೋಟಿ ಆದಾಯ ಬರಬೇಕಾಗಿತ್ತು. ಆದರೆ ಇದುವರೆಗೆ ಕೇವಲ 71 ಕೋಟಿ ಮಾತ್ರ ಸಂದಾಯವಾಗಿದೆ. ಹಾಸನ ಜಿಲ್ಲೆಯ ಆಲೂಗಡ್ಡೆ ಬೆಳೆಗಾರರಿಗೆ 129 ಕೋಟಿ ನಷ್ಟವಾಗಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಯ ರೈತರಿಗೆ ಆಗಿರುವ ನಷ್ಟದ ಬಗ್ಗೆ ಜಿಲ್ಲಾಧಿಕಾರಿ ಸರ್ಕಾರದ ಗಮನಕ್ಕೆ ತರಬೇಕು. ಮೆಕ್ಕೆಜೋಳಕ್ಕೆ ಕನಿಷ್ಠ 2,000 ರೂ. ಬೆಂಬಲ ಬೆಲೆ ನೀಡಬೇಕು. ಈಕೂಡಲೇ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಅವರು ಇಲ್ಲವಾದರೆ ನಮ್ಮ ರೈತರನ್ನು ನಾವೇ ಕಾಪಾಡಿಕೊಳ್ಳುತ್ತೇವೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಜೆಡಿಎಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಮುಳುಗುತ್ತಿರುವ ಹಡಗು ಎನ್ನುತ್ತಿದ್ದರು; 2023ರಲ್ಲಿ ಯಾರು ಮುಳುಗುತ್ತಾರೆ ನೋಡೋಣ ಜೆಡಿಎಸ್​ ಮುಳುಗುತ್ತಿರುವ ಹಡಗು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳುತ್ತಿದ್ದರು. 2023 ರ ಚುನಾವಣೆಯಲ್ಲಿ ಯಾರು ಮುಳುಗ್ತಾರೆ ನೋಡೋಣ. ಎಚ್.ಡಿ. ದೇವೇಗೌಡ 60 ವರ್ಷಗಳ ರಾಜಕೀಯದಲ್ಲಿ ಏಳುಬೀಳು ಕಂಡಿದ್ದಾರೆ. ಹಡಗುಗಳು ಮುಳುಗಿದಾಗ ಸಬ್​ಮರೀನ್​ ಕೆಲಸ ಮಾಡುತ್ತವೆ. ಜೆಡಿಎಸ್​ನಲ್ಲಿ ಸಬ್​ಮರೀನ್​ ರೀತಿ ಕೆಲಸ ಮಾಡುವವರಿದ್ದಾರೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿಕೆ ನೀಡಿದ್ದಾರೆ.

2023 ರ ಚುನಾವಣೆವರೆಗೂ ಅರುಣ್ ಸಿಂಗ್​ ಮುಂದುವರಿಸಿ. ಬಿಜೆಪಿ ಉಸ್ತುವಾರಿಯಾಗಿ ಅರುಣ್ ಸಿಂಗ್ ಮುಂದುವರಿಸಿ ಎಂದು ಕೇಂದ್ರದ ಬಿಜೆಪಿ ನಾಯಕರಿಗೆ ಎಚ್.ಡಿ. ರೇವಣ್ಣ ಮನವಿ ಮಾಡಿದ್ದಾರೆ. ಬಿಎಸ್​ವೈ ದ್ವೇಷದ ರಾಜಕಾರಣದ ಬಗ್ಗೆ ಸದನದಲ್ಲಿ ಹೇಳುವೆ ಎಂದು ತಿಳಿಸಿದ್ದಾರೆ. ಸೌಜನ್ಯದಿಂದ ಹೆಚ್.ಡಿ. ದೇವೇಗೌಡ ನೋಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದಿದ್ದರು. ದೇವೇಗೌಡರನ್ನು ನೋಡಲು ಬಂದಿದ್ದಾಗ ಗೌರವ ಕೊಟ್ಟಿದ್ದೇವೆ. ನಾವೇನಾದರೂ ಬಿಜೆಪಿ ಸೇರುತ್ತೇವೆಂದು ಅರ್ಜಿ ಹಾಕಿದ್ದೇವಾ? ಎಂದು ರೇವಣ್ಣ ಪ್ರಶ್ನೆ ಮಾಡಿದ್ದಾರೆ.

ಕಲ್ಬುರ್ಗಿ ಪಾಲಿಕೆ ಅಧಿಕಾರ ವಿಚಾರವಾಗಿ ರೇವಣ್ಣ ಮಾತನಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ದೇವೇಗೌಡರ ಸಮಕಾಲೀನರು. ದೇವೇಗೌಡರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾವು ಬದ್ಧ. ಜೆಡಿಎಸ್ ಪಕ್ಷ ಎಲ್ಲಿದೆ ಅಂತಾ 2023 ರಲ್ಲಿ ತೋರಿಸುತ್ತೇವೆ. ಈ ಬಗ್ಗೆ ಕಾಲವೇ ನಿರ್ಧರಿಸುತ್ತದೆ, ಸತ್ಯ ಜಾಸ್ತಿ ದಿನ ಮುಚ್ಚಿಡಲು ಆಗಲ್ಲ ಎಂದು ರೇವಣ್ಣ ಹೇಳಿದ್ದಾರೆ.

ಇದನ್ನೂ ಓದಿ: 

ಹಾಸನ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ಉಲ್ಬಣ: ಜಾತ್ರೆ, ಸಂತೆ ನಿಷೇಧ

ನಾನು ಮತ್ತು ನಿಖಿಲ್ ಕುಮಾರಸ್ವಾಮಿ ಒಂದೇ; ಪ್ರಜ್ವಲ್ ರೇವಣ್ಣ ಘೋಷಣೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada