AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಮತ್ತು ನಿಖಿಲ್ ಕುಮಾರಸ್ವಾಮಿ ಒಂದೇ; ಪ್ರಜ್ವಲ್ ರೇವಣ್ಣ ಘೋಷಣೆ

ಅಣ್ಣ ತಮ್ಮಂದಿರಾಗಿ ನಾವು ಯಾವತ್ತಿಗೂ ಒಂದೇ. ಧರ್ಮಸ್ಥಳ ಹಾಗೂ ಚಾಮುಂಡಿ ಬೆಟ್ಟಕ್ಕೆ ಹೋಗ್ತೀವಿ. ಮೈಸೂರಿಗೆ ಮೊದಲು ಹೋಗಿ ಕಾರ್ಯಕ್ರಮ ಮಾಡ್ತೀವಿ ಅಲ್ಲಿಂದಲೇ ಯುವಕರನ್ನು ಕಟ್ಟುವ ಕೆಲಸ ಮಾಡ್ತೀವಿ ಎಂದು ಅವರು ಸ್ಪಷ್ಟಪಡಿಸಿದರು.

ನಾನು ಮತ್ತು ನಿಖಿಲ್ ಕುಮಾರಸ್ವಾಮಿ ಒಂದೇ; ಪ್ರಜ್ವಲ್ ರೇವಣ್ಣ ಘೋಷಣೆ
ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ
TV9 Web
| Updated By: guruganesh bhat|

Updated on:Sep 30, 2021 | 6:32 PM

Share

ಬೆಂಗಳೂರು: ಜೆಡಿಎಸ್ ಪಕ್ಷ ಕಟ್ಟಲು ಮತ್ತು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಾನು ಮತ್ತು ನಿಖಿಲ್ ಕುಮಾರಸ್ವಾಮಿ ಒಂದಾಗಿದ್ದೇವೆ ಎಂದು ರಾಮನಗರ ಜಿಲ್ಲೆಯ ಬಿಡದಿ ಬಳಿಯ ಕೇತಗಾನಹಳ್ಳಿಯ ಜೆಡಿಎಸ್ ಕಾರ್ಯಾಗಾರದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸ್ಪಷ್ಟಪಡಿಸಿದರು.

ಅಣ್ಣ ತಮ್ಮಂದಿರಾಗಿ ನಾವು ಯಾವತ್ತಿಗೂ ಒಂದೇ. ಧರ್ಮಸ್ಥಳ ಹಾಗೂ ಚಾಮುಂಡಿ ಬೆಟ್ಟಕ್ಕೆ ಹೋಗ್ತೀವಿ. ಮೈಸೂರಿಗೆ ಮೊದಲು ಹೋಗಿ ಕಾರ್ಯಕ್ರಮ ಮಾಡ್ತೀವಿ ಅಲ್ಲಿಂದಲೇ ಯುವಕರನ್ನು ಕಟ್ಟುವ ಕೆಲಸ ಮಾಡ್ತೀವಿ. ಕುಮಾರಣ್ಣಗೆ ಇವತ್ತು ಸಾಕಷ್ಟು ಸಂತೋಷವಾಗಿದೆ. ಕೇವಲ ನಾನು, ನಿಖಿಲ್ ಮಾತ್ರ ಅಲ್ಲ ರಾಜ್ಯದ ಯುವ ಜನತೆ ಕುಮಾರಸ್ವಾಮಿ ಅವರ ಜೊತೆಗಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ದೇವೇಗೌಡರು ಬಹಳ ಕಷ್ಟಪಟ್ಟು ಪಕ್ಷ ಕಟ್ಟಿದ್ದಾರೆ. ಅವರಿಗೆ ಆಕಾಲಕ್ಕೆ ಪಕ್ಷ ಕಟ್ಟುವಾಗ ಇದ್ದ ಕಷ್ಟಗಳು ಈಗ ನಮಗಿಲ್ಲ. ಜೆಡಿಎಸ್ ಒಂದು ಜಾತಿ, ಜನಾಂಗದ ಪಕ್ಷ ಅಂತಾರೆ. ಆದರೆ ಯಾಕೆ ಆ ರೀತಿ ಮಾತಾಡ್ತೀರಾ? ಪ್ರತಿಯೊಂದು ಜನಾಂಗಕ್ಕೂ ಅವಕಾಶ ಕುಮಾರಣ್ಣ ಕೊಟ್ಟಿದ್ದಾರೆ. ಈ ವೇದಿಕೆ ಮೇಲೆ ಎಲ್ಲಾ ಜನಾಂಗದ ನಾಯಕರು ಕೂತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಅಭ್ಯರ್ಥಿ ಸ್ಥಾನ ಸಿಗಬೇಕು ಅಂದರೆ ನಾವೆಲ್ಲರೂ ಫೀಲ್ಡ್​ಗೆ ಇಳಿಯಲೇಬೇಕು. ಚಿತ್ರರಂಗದಲ್ಲಿ ನನ್ನ ವ್ಯಕ್ತಿತ್ವ ಬೆಳೆಸಲು ಬಂದೆ. ಜಾಗ್ವಾರ್ ಸಿನಿಮಾ ನಮ್ಮ ತಂದೆ ನನಗೆ ಕೊಟ್ಟ ಉಡುಗೊರೆ. ಚಿತ್ರರಂಗ ಬದಿಗಿಟ್ಟು ಮಾತನಾಡುತ್ತೇನೆ. ಆದರೆ ಅದಕ್ಕಿಂತ ದೊಡ್ಡ ಜವಾಬ್ದಾರಿಯನ್ನು ದೊಡ್ಡಗೌಡರು ಕೊಟ್ಟಿದ್ದಾರೆ. ಕುಮಾರಣ್ಣ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ಅವರು ಜೆಡಿಎಸ್​ಗೆ ಬೆಂಬಲ ನೀಡುವಂತೆ ಕರೆ ಕೊಟ್ಟರು.

ಇದನ್ನೂ ಓದಿ: 

ಜೆಡಿಎಸ್​ನಿಂದ ಪಂಚರತ್ನ ಯೋಜನೆ ಘೋಷಣೆ; ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿಗೆ ನೆರವು

ಜೆಡಿಎಸ್​ನದ್ದು ಮಿಷನ್ 123, ಬಿಜೆಪಿಯವರದ್ದು ಮಿಷನ್ 150; ನಮ್ಮದು ಮಿಷನ್ 224: ಡಿಕೆ ಶಿವಕುಮಾರ್

Published On - 2:42 pm, Thu, 30 September 21