AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ತಮ್ಮ ತಾಯಿಯನ್ನೂ ಮಾರಿಕೊಂಡಿದ್ದಾರೆ; ಕಾಂಗ್ರೆಸ್ ವಕ್ತಾರನ ವಿವಾದಾತ್ಮಕ ಹೇಳಿಕೆ

PM Narendra Modi : ಪ್ರಧಾನಿ ಮೋದಿಯವರದ್ದು ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ. ಅವರು ಎಂದೂ ಚಹಾ ಮಾರಿರಲಿಲ್ಲ. ಅದೆಲ್ಲ ಸುಳ್ಳು ಕತೆ. ಅವರು ಯಾವ ರೀತಿಯ ವ್ಯಕ್ತಿಯೆಂದರೆ ಟಿವಿಗಾಗಿ ತಮ್ಮ ತಾಯಿಯನ್ನು ಕೂಡ ಮಾರಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಹೇಳಿದ್ದಾರೆ.

ಪ್ರಧಾನಿ ಮೋದಿ ತಮ್ಮ ತಾಯಿಯನ್ನೂ ಮಾರಿಕೊಂಡಿದ್ದಾರೆ; ಕಾಂಗ್ರೆಸ್ ವಕ್ತಾರನ ವಿವಾದಾತ್ಮಕ ಹೇಳಿಕೆ
ಪ್ರಧಾನಮಂತ್ರಿ ನೇಂದ್ರ ಮೋದಿ- ಅವರ ತಾಯಿ
TV9 Web
| Updated By: ಸುಷ್ಮಾ ಚಕ್ರೆ|

Updated on: Oct 01, 2021 | 2:26 PM

Share

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ದೂರುವ ಭರದಲ್ಲಿ ಕಾಂಗ್ರೆಸ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಕಾಂಗ್ರೆಸ್ ವಕ್ತಾರ ಖಾಸಗಿ ವಾಹಿನಿಯ ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ತಾಯಿಯನ್ನು ಕೂಡ ಮಾರಿದ್ದಾರೆ ಎಂದಿರುವ ವಿಡಿಯೋ ಭಾರೀ ವೈರಲ್ ಆಗಿದೆ.

ಇಟಲಿ ದೇಶದ ಸೋನಿಯಾಗಾಂಧಿ ಅವರ ಮೂಲ ಹೆಸರು ಆಂಟೋನಿಯಾ ಮೈನೋ ಎಂದು ಬಿಜೆಪಿ ಲೇವಡಿ ಮಾಡಿದ್ದಾಗ ಕಾಂಗ್ರೆಸ್​ ಬಹಳ ಬೇಸರ ಹೊರಹಾಕಿತ್ತು. ಆದರೆ, ಇದೀಗ ಪ್ರಧಾನಿ ನರೇಂದ್ರ ಮೋದಿಯವರ ತಾಯಿಯನ್ನು ರಾಜಕೀಯದಲ್ಲಿ ಎಳೆದು ತಂದಿರುವ ಕಾಂಗ್ರೆಸ್ ವಕ್ತಾರ ಮುದಿತ್ ಅಗರ್ವಾಲ್, ಪ್ರಧಾನಿ ನರೇಂದ್ರ ಮೋದಿ ಟೀ ಮಾರಿದ್ದಾರೆ ಎಂಬುದೆಲ್ಲ ಸುಳ್ಳು. ಅವರು ತಾಯಿಯನ್ನೂ ಮಾರಾಟ ಮಾಡಿದ್ದಾರೆ ಅಂಥವರು ಎಂದು ಹೇಳಿದ್ದಾರೆ.

ಈ ವಿಡಿಯೋವನ್ನು ಖಾಸಗಿ ವಾಹಿನಿಯ ನಿರೂಪಕ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಟಿವಿಗಾಗಿ ಮೋದಿ ತಾಯಿಯನ್ನೂ ಮಾರಾಟ ಮಾಡಿದ್ದಾರೆ ಎಂದು ಹೇಳಿದ್ದನ್ನು ಕೇಳಿ ನನಗೆ ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ. ಓರ್ವ ತಾಯಿಯನ್ನು ಕೂಡ ಬಿಡದೆ ಕಾಂಗ್ರೆಸ್​ನಲ್ಲಿ ರಾಜಕಾರಣ ಮಾಡಲಾಗುತ್ತಿದೆ ಎಂದಿದ್ದಾರೆ.

ಪಂಜಾಬ್, ಛತ್ತೀಸ್​ಗಢ, ಉತ್ತರಾಖಂಡದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಯುವ ವೇಳೆ ಬಿಜೆಪಿ ವಕ್ತಾರ ‘ನಮ್ಮ ಪ್ರಧಾನಿ ನರೇಂದ್ರ ಮೋದಿ ಟೀ ಮಾರಿ, ಸ್ವಂತ ಪರಿಶ್ರಮದಿಂದ ಪ್ರಧಾನಿ ಪಟ್ಟಕ್ಕೆ ಏರಿದ್ದಾರೆ. ಆದರೆ, ಸೋನಿಯಾ ಗಾಂಧಿ ಆಕೆಯ ಜೀವನದಲ್ಲಿ ಏನು ಸಾಧನೆ ಮಾಡಿದ್ದಾರೆ? ಕಾಂಗ್ರೆಸ್ ಪಕ್ಷಕ್ಕಾಗಿ ಆಕೆ ಏನು ಮಾಡಿದ್ದಾರೆ?’ ಎಂದು ಪ್ರಶ್ನೆ ಮಾಡಿದ್ದಾರೆ.

ಅದಕ್ಕೆ ಕೋಪಗೊಂಡ ಕಾಂಗ್ರೆಸ್ ವಕ್ತಾರ, ‘ಪ್ರಧಾನಿ ಮೋದಿಯವರದ್ದು ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ. ಅವರು ಎಂದೂ ಚಹಾ ಮಾರಿರಲಿಲ್ಲ. ಅದೆಲ್ಲ ಸುಳ್ಳು ಕತೆ. ಅವರು ಯಾವ ರೀತಿಯ ವ್ಯಕ್ತಿಯೆಂದರೆ ಟಿವಿಗಾಗಿ ತಮ್ಮ ತಾಯಿಯನ್ನು ಕೂಡ ಮಾರಿದ್ದಾರೆ’ ಎಂದು ಹೇಳಿದ್ದಾರೆ.

ಅದಕ್ಕೆ ನಿರೂಪಕ ಆಕ್ಷೇಪ ವ್ಯಕ್ತಪಡಿಸಿದರೂ ಸುಮ್ಮನಾಗದ ಕಾಂಗ್ರೆಸ್ ವಕ್ತಾರ, ಪ್ರತಿ ಬಾರಿ ಪ್ರಧಾನಿ ಮೋದಿ ತಮ್ಮ ತಾಯಿಯನ್ನು ನೋಡಲು ಹೋಗುವಾಗ ಅವರ ಜೊತೆ ಕ್ಯಾಮೆರಾಗಳು ಕೂಡ ಇರುತ್ತವೆ. ತಾಯಿಯನ್ನು ಭೇಟಿಯಾಗುವ ವಿಚಾರವನ್ನು ಕೂಡ ಟಿವಿಗಳಿಗೆ ಮೋದಿ ಮಾರಿಕೊಂಡಿದ್ದಾರೆ ಎಂದಿದ್ದಾರೆ.

ಅದಕ್ಕೆ ಮರುಪ್ರಶ್ನೆ ಹಾಕಿದ ನಿರೂಪಕ, ರಾಹುಲ್ ಗಾಂಧಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಹೋದಾಗಲೂ ಕ್ಯಾಮೆರಾಗಳು ಇರುತ್ತವಲ್ಲ ಎಂದಿದ್ದಾರೆ. ಆದರೂ ಸುಮ್ಮನಾಗದ ಕಾಂಗ್ರೆಸ್ ವಕ್ತಾರ ಮತ್ತೊಮ್ಮೆ ಮೋದಿ ತಮ್ಮ ತಾಯಿಯನ್ನು ಮಾರಿಕೊಂಡಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ವಕ್ತಾರನ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ರಾಜಕೀಯದ ಗುದ್ದಾಟದಲ್ಲಿ ಪ್ರಧಾನಿ ಮೋದಿಯವರ 90 ವರ್ಷದ ಅಮ್ಮನನ್ನು ಕೂಡ ಎಳೆದು ತರುವ ಮೂಲಕ ಕೆಳಮಟ್ಟಕ್ಕೆ ಇಳಿದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ನಾನು ಡ್ರಗ್ ಟೆಸ್ಟ್​ಗೆ ಸಿದ್ಧನಿದ್ದೇನೆ, ರಾಹುಲ್ ಗಾಂಧಿ ತಯಾರಿದ್ದಾರಾ?; ವೈಟ್ ಚಾಲೆಂಜ್​ಗೆ ಸಚಿವ ಕೆಟಿ ರಾಮರಾವ್ ಮರು ಸವಾಲು

Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?