Cyclone Shaheen: ಶಾಹೀನ್ ಚಂಡಮಾರುತದ ಅಬ್ಬರ ಶುರು; ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಭಾರೀ ಮಳೆ

TV9 Digital Desk

| Edited By: Sushma Chakre

Updated on: Oct 01, 2021 | 3:50 PM

Shaheen Cyclone Effect : ಸದ್ಯಕ್ಕೆ ಶಾಹೀನ್ ಚಂಡಮಾರುತ ಗುಜರಾತ್​ನಿಂದ ಪಾಕಿಸ್ತಾನದ ಕಡೆ ತೆರಳಿದೆ. ಪಾಕಿಸ್ತಾನ, ಇರಾನ್ ದೇಶಗಳಲ್ಲಿ ಈ ಚಂಡಮಾರುತ ತೀವ್ರ ಪರಿಣಾಮ ಉಂಟುಮಾಡಲಿದೆ.

Cyclone Shaheen: ಶಾಹೀನ್ ಚಂಡಮಾರುತದ ಅಬ್ಬರ ಶುರು; ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಭಾರೀ ಮಳೆ
ಶಾಹೀನ್ ಚಂಡಮಾರುತದ ಪರಿಣಾಮ

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಶಾಹೀನ್ ಚಂಡಮಾರುತ (Shaheen Cyclone) ಎದ್ದಿದೆ. ಇದರಿಂದ ಗುಜರಾತ್, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯಗಳಲ್ಲಿ ಇಂದಿನಿಂದ 3 ದಿನ ಹೆಚ್ಚಿನ ಮಳೆಯಾಗಲಿದೆ. ಈ ಶಾಹೀನ್ ಚಂಡಮಾರುತ ಇಂದು ಬೆಳಗ್ಗೆ ಗುಜರಾತ್​ನ ಕರಾವಳಿ ತೀರಕ್ಕೆ ಅಪ್ಪಳಿಸಿದ್ದು, ಇದರ ಪರಿಣಾಮ ಭಾರತದ ಕರಾವಳಿ ತೀರದ ಮೇಲೆ ಹೆಚ್ಚಾಗಿರುವುದಿಲ್ಲ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ. ಆದರೂ ಈ ಚಂಡಮಾರುತದ ಪ್ರಭಾವದಿಂದ ಅ. 3ರವರೆಗೂ ಮಳೆ ಹೆಚ್ಚಾಗಲಿದೆ.

ಶಾಹೀನ್ ಚಂಡಮಾರುತ ಪಾಕಿಸ್ತಾನದ ಕಡೆಗೆ ಹೋಗುವ ನಿರೀಕ್ಷೆಯಿದ್ದು, ಭಾರತದ ಮೇಲೆ ಈ ಚಂಡಮಾರುತದ ಪರಿಣಾಮ ಹೆಚ್ಚಾಗಿರುವುದಿಲ್ಲ. ಈ ವರ್ಷ ತೌಕ್ತೆ ಚಂಡಮಾರುತದ ನಂತರ ಅರಬ್ಬಿ ಸಮುದ್ರದಲ್ಲಿ ಹುಟ್ಟಿದ 2ನೇ ಚಂಡಮಾರುತ ಶಾಹೀನ್ ಆಗಿದೆ. ಗುಲಾಬ್ ಚಂಡಮಾರುತ ಬಂಗಾಳಕೊಲ್ಲಿಯಲ್ಲಿ ರೂಪ ತಳೆದಿತ್ತು. ಗುಲಾಬ್ ಚಂಡಮಾರುತವೇ ಅರಬ್ಬಿಯಲ್ಲಿ ಶಾಹೀನ್ ಚಂಡಮಾರುತವಾಗಿ ಮರುಹುಟ್ಟು ಪಡೆದಿದೆ.

ಸದ್ಯಕ್ಕೆ ಶಾಹೀನ್ ಚಂಡಮಾರುತ ಗುಜರಾತ್​ನಿಂದ ಪಾಕಿಸ್ತಾನದ ಕಡೆ ತೆರಳಿದೆ. ಪಾಕಿಸ್ತಾನ, ಇರಾನ್ ದೇಶಗಳಲ್ಲಿ ಈ ಚಂಡಮಾರುತ ತೀವ್ರ ಪರಿಣಾಮ ಉಂಟುಮಾಡಲಿದೆ. ಗುಜರಾತ್​ನಿಂದ ಪಾಕಿಸ್ತಾನ- ಮಕ್ರನ್ ಕರಾವಳಿ ತೀರದ ಕಡೆಗೆ ಶಾಹೀನ್ ಚಂಡಮಾರುತ ಚಲಿಸುತ್ತಿದೆ. ಇನ್ನು ಗುಜರಾತ್, ಮಹಾರಾಷ್ಟ್ರ, ಒರಿಸ್ಸಾ, ಕೇರಳ, ತಮಿಳುನಾಡು, ಕರ್ನಾಟಕದ ಕರಾವಳಿ ತೀರದಲ್ಲಿ ಶಾಹೀನ್ ಚಂಡಮಾರುತದ ಪರಿಣಾಮ ಕೊಂಚ ಮಟ್ಟಿಗೆ ಇರಲಿದೆ. ಈ ಹಿನ್ನೆಲೆಯಲ್ಲಿ ಈ ರಾಜ್ಯಗಳಲ್ಲಿ ಇಂದಿನಿಂದ 3 ದಿನ ಮಳೆ ಹೆಚ್ಚಾಗಲಿದೆ.

ಶಾಹೀನ್ ಚಂಡಮಾರುತದ ಪರಿಣಾಮದಿಂದ ಗುಜರಾತ್, ಮಹಾರಾಷ್ಟ್ರ, ಕೊಂಕಣ, ಮರಾಠವಾಡ ಮತ್ತು ಗೋವಾ ಭಾಗದಲ್ಲಿ ವಿಪರೀತ ಮಳೆಯಾಗಲಿದೆ. ಹಾಗೇ, ಪಶ್ಚಿಮ ಬಂಗಾಳ. ಮರಾಠವಾಡ, ಸೌರಾಷ್ಟ್ರ, ಕಚ್, ಮಧ್ಯಪ್ರದೇಶ, ವಿದರ್ಭ, ಛತ್ತೀಸ್​ಗಢ, ಜಾರ್ಖಂಡ್, ಆಂಧ್ರಪ್ರದೇಶ, ಕರ್ನಾಟಕದ ಕರಾವಳಿ ಪ್ರದೇಶ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ. ಜೊತೆಗೆ ತೆಲಂಗಾಣ, ತಮಿಳುನಾಡು, ಕೇರಳ, ಪುದುಚೆರಿ, ಮಾಹೆಯಲ್ಲಿ ಕೂಡ ಶಾಹೀನ್ ಚಂಡಮಾರುತದ ಪರಿಣಾಮದಿಂದ ಅಲ್ಲಲ್ಲಿ ಮಳೆಯಾಗಲಿದೆ.

ಗುಜರಾತ್ ಕರಾವಳಿಗೆ ಶಾಹೀನ್ ಚಂಡಮಾರುತ ಅಪ್ಪಳಿಸಿರುವುದರಿಂದ ಗುಜರಾತ್‌ನ ಎಲ್ಲಾ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಎನ್​ಡಿಆರ್​ಎಫ್ ಮತ್ತು ಎಸ್​ಡಿಆರ್​ಎಫ್ ತಂಡಗಳು ಗುಜರಾತ್​ನ 17 ಜಿಲ್ಲೆಗಳಲ್ಲಿ ಬೀಡುಬಿಟ್ಟಿವೆ. ಹಾಗೇ, ಅಕ್ಟೋಬರ್ 2ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಇದನ್ನೂ ಓದಿ: Cyclone Shaheen: ಇಂದು ಗುಜರಾತ್​ ಪ್ರವೇಶಿಸಲಿದೆ ಶಾಹೀನ್ ಚಂಡಮಾರುತ; ಪಾಕಿಸ್ತಾನದಲ್ಲಿ ಹೆಚ್ಚಲಿದೆ ಸೈಕ್ಲೋನ್ ಅಬ್ಬರ

Cyclone Shaheen: ಅ. 1ಕ್ಕೆ ಅಪ್ಪಳಿಸಲಿದೆ ಶಾಹೀನ್ ಚಂಡಮಾರುತ; ಈ ರಾಜ್ಯಗಳಲ್ಲಿ ಹೈ ಅಲರ್ಟ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada