Cyclone Shaheen: ಇಂದು ಗುಜರಾತ್​ ಪ್ರವೇಶಿಸಲಿದೆ ಶಾಹೀನ್ ಚಂಡಮಾರುತ; ಪಾಕಿಸ್ತಾನದಲ್ಲಿ ಹೆಚ್ಚಲಿದೆ ಸೈಕ್ಲೋನ್ ಅಬ್ಬರ

Shaheen Cyclone Effect: ಶಾಹೀನ್ ಚಂಡಮಾರುತ ಭಾರತದ ಕರಾವಳಿ ತೀರಗಳಿಗೆ ಅಪ್ಪಳಿಸಿದರೂ ಅದರ ಪರಿಣಾಮ ಹೆಚ್ಚಾಗಿ ಇರುವುದಿಲ್ಲ. ಆದರೆ, ಪಾಕಿಸ್ತಾನ, ಇರಾನ್ ದೇಶಗಳಲ್ಲಿ ಈ ಚಂಡಮಾರುತ ತೀವ್ರ ಪರಿಣಾಮ ಉಂಟುಮಾಡಲಿದೆ.

Cyclone Shaheen: ಇಂದು ಗುಜರಾತ್​ ಪ್ರವೇಶಿಸಲಿದೆ ಶಾಹೀನ್ ಚಂಡಮಾರುತ; ಪಾಕಿಸ್ತಾನದಲ್ಲಿ ಹೆಚ್ಚಲಿದೆ ಸೈಕ್ಲೋನ್ ಅಬ್ಬರ
ಶಾಹೀನ್ ಚಂಡಮಾರುತ

ನವದೆಹಲಿ: ಇಂದಿನಿಂದ ಭಾರತದಲ್ಲಿ ಶಾಹೀನ್ ಚಂಡಮಾರುತದ ಅಬ್ಬರ ಶುರುವಾಗಲಿದೆ. ಗುಲಾಬ್ ಚಂಡಮಾರುತದ ಅಬ್ಬರ ಕೊಂಚ ಕಡಿಮೆಯಾಗುತ್ತಿದ್ದಂತೆ (Cyclone Gulab) ಶಾಹೀನ್ ಚಂಡಮಾರುತ (Cyclone Shaheen)ವಾಗಿ ಅರಬ್ಬಿ ಸಮುದ್ರದಲ್ಲಿ ಮರುರೂಪ ತಳೆದಿದೆ. ಈ ಶಾಹೀನ್ ಚಂಡಮಾರುತ ಇಂದು ಬೆಳಗ್ಗೆ ಗುಜರಾತ್​ನ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಆದರೆ, ಈ ಚಂಡಮಾರುತ ಪಾಕಿಸ್ತಾನದ ಕಡೆಗೆ ಹೋಗುವ ನಿರೀಕ್ಷೆಯಿದ್ದು, ಭಾರತದ ಮೇಲೆ ಈ ಚಂಡಮಾರುತದ ಪರಿಣಾಮ ಹೆಚ್ಚಾಗಿರುವುದಿಲ್ಲ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.

ಶಾಹೀನ್ ಚಂಡಮಾರುತ ಭಾರತದ ಕರಾವಳಿ ತೀರಗಳಿಗೆ ಅಪ್ಪಳಿಸಿದರೂ ಅದರ ಪರಿಣಾಮ ಹೆಚ್ಚಾಗಿ ಇರುವುದಿಲ್ಲ. ಆದರೆ, ಪಾಕಿಸ್ತಾನ, ಇರಾನ್ ದೇಶಗಳಲ್ಲಿ ಈ ಚಂಡಮಾರುತ ತೀವ್ರ ಪರಿಣಾಮ ಉಂಟುಮಾಡಲಿದೆ. ಗುಜರಾತ್​ನಿಂದ ಪಾಕಿಸ್ತಾನ- ಮಕ್ರನ್ ಕರಾವಳಿ ತೀರದ ಕಡೆಗೆ ಶಾಹೀನ್ ಚಂಡಮಾರುತ ಚಲಿಸಲಿದೆ. ಇನ್ನು ಗುಜರಾತ್, ಮಹಾರಾಷ್ಟ್ರ, ಒರಿಸ್ಸಾ, ಕೇರಳ, ತಮಿಳುನಾಡು, ಕರ್ನಾಟಕದ ಕರಾವಳಿ ತೀರದಲ್ಲಿ ಶಾಹೀನ್ ಚಂಡಮಾರುತದ ಪರಿಣಾಮ ಕೊಂಚ ಮಟ್ಟಿಗೆ ಇರಲಿದೆ. ಈ ಹಿನ್ನೆಲೆಯಲ್ಲಿ ಈ ರಾಜ್ಯಗಳಲ್ಲಿ ಇಂದು ಮಳೆ ಹೆಚ್ಚಾಗಲಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾದ ಗುಲಾಬ್ ಚಂಡಮಾರುತವೇ ಅರಬ್ಬಿ ಸಮುದ್ರದಲ್ಲಿ ಶಾಹೀನ್ ಚಂಡಮಾರುತವಾಗಿ ಮರುರೂಪ ಪಡೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಶಾಹೀನ್ ಚಂಡಮಾರುತ ಅಪ್ಪಳಿಸಲಿದ್ದು, ಭಾರತದ ಪೂರ್ವ ಹಾಗೂ ಪಶ್ಚಿಮ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ. ಪಶ್ಚಿಮ ಬಂಗಾಳ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಶಾಹೀನ್ ಚಂಡಮಾರುತದ ಪರಿಣಾಮದಿಂದ ಇಂದು ವಿಪರೀತ ಮಳೆಯಾಗಲಿದ್ದು, ಗುಜರಾತ್ ಕರಾವಳಿ ತೀರದಲ್ಲಿ ಇದರ ಪರಿಣಾಮ ಹೆಚ್ಚಾಗಿರಲಿದೆ.

ಶಾಹೀನ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಗುಜರಾತ್​ನಲ್ಲಿ ಈಗಾಗಲೇ ಗಾಳಿ, ಮಳೆ ಹೆಚ್ಚಾಗಿದೆ. ಇಂದು ಮತ್ತು ನಾಳೆ ಶಾಹೀನ್ ಚಂಡಮಾರುತದ ಅಬ್ಬರ ಇರಲಿದೆ. ಶಾಹೀನ್ ಚಂಡಮಾರುತದ ಪರಿಣಾಮದಿಂದ ಗುಜರಾತ್, ಮಹಾರಾಷ್ಟ್ರ, ಕೊಂಕಣ, ಮರಾಠವಾಡ ಮತ್ತು ಗೋವಾ ಭಾಗದಲ್ಲಿ ವಿಪರೀತ ಮಳೆಯಾಗಲಿದೆ. ಹಾಗೇ, ಪಶ್ಚಿಮ ಬಂಗಾಳ. ಮರಾಠವಾಡ, ಸೌರಾಷ್ಟ್ರ, ಕಚ್, ಮಧ್ಯಪ್ರದೇಶ, ವಿದರ್ಭ, ಛತ್ತೀಸ್​ಗಢ, ಜಾರ್ಖಂಡ್, ಆಂಧ್ರಪ್ರದೇಶ, ಕರ್ನಾಟಕದ ಕರಾವಳಿ ಪ್ರದೇಶ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ. ಜೊತೆಗೆ ತೆಲಂಗಾಣ, ತಮಿಳುನಾಡು, ಕೇರಳ, ಪುದುಚೆರಿ, ಮಾಹೆಯಲ್ಲಿ ಕೂಡ ಶಾಹೀನ್ ಚಂಡಮಾರುತದ ಪರಿಣಾಮದಿಂದ ಅಲ್ಲಲ್ಲಿ ಮಳೆಯಾಗಲಿದೆ.

ಇದನ್ನೂ ಓದಿ: Cyclone Shaheen: ಗುಲಾಬ್ ಚಂಡಮಾರುತದ ಬೆನ್ನಲ್ಲೇ ಶಾಹೀನ್ ಸೈಕ್ಲೋನ್ ಭೀತಿ; ಕರ್ನಾಟಕದಲ್ಲಿ ಮತ್ತೆ ಭಾರೀ ಮಳೆ ಸಾಧ್ಯತೆ

Karnataka Weather Today: ಬೆಂಗಳೂರು, ಶಿವಮೊಗ್ಗ, ಕೊಡಗು, ಕರಾವಳಿಯಲ್ಲಿ ಅ. 3ರವರೆಗೂ ಭಾರೀ ಮಳೆ

Read Full Article

Click on your DTH Provider to Add TV9 Kannada