ಅಪರಾಧ ಸುದ್ದಿ: ಅತ್ತೆ ಮಗಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ

ಇಂದು ಇಳಿಸಂಜೆಯ ಹೊತ್ತಿಗೆ ಅಪರಾಧ ಜಗತ್ತಿನಲ್ಲಿ ಏನಾಗಿದೆ? ಓದಿ

ಅಪರಾಧ ಸುದ್ದಿ: ಅತ್ತೆ ಮಗಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ
ಪಾಕಿಸ್ತಾನದ ISI ಅಧಿಕಾರಿ ಜೊತೆ ಸಂಪರ್ಕದ ಹೊಂದಿದ್ದ ಎನ್ನಲಾದ ಬೆಂಗಳೂರಿನ ಬಟ್ಟೆ ವ್ಯಾಪಾರಿ ಅರೆಸ್ಟ್​

ಯಾದಗಿರಿ: ಸ್ವಂತ ಅತ್ತೆ ಮಗಳ ಬಳಿ ಮದುವೆ ಮಾಡಿಕೊಳ್ಳುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ ಆರೋಪದಡಿ ಜಿಲ್ಲೆಯ ವಡಗೇರ ತಾಲೂಕಿನ ಗುರಸಣಗಿ ಗ್ರಾಮದ ಹನುಮಂತ ಎಂಬಾತನ ವಿರುದ್ಧ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಳೆದ‌ ಎಂಟು ತಿಂಗಳ ಹಿಂದೆ ಅಜ್ಜಿ ತೀರಿ ಹೋಗಿದ್ದಕ್ಕೆ ಸಂತ್ರಸ್ತ ಯುವತಿ ಊರಿಗೆ ಬಂದಿದ್ದಳು. ಊರಿಗೆ ಬಂದಾಗ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಆರೋಪಿ ಹನುಮಂತ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಗಾಗ ಯುವತಿ ಇದ್ದ ಜಾಗಕ್ಕೆ ಹೋಗಿಯೂ ಆರೋಪಿ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಳೆದ‌ ಎರಡು ದಿನಗಳ ಹಿಂದೆ ಕೇಸ್ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಯಲ್ಲೇ ಗೃಹಿಣಿಯರಿಂದ ವೇಶ್ಯಾವಾಟಿಕೆ
ನೆಲಮಂಗಲ: ನಗರದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಣ ಸಂಪಾದನೆಯ ಆಸೆ ಹುಟ್ಟಿಸಿ ಗೃಹಿಣಿಯರಿಂದ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಹೆಸರಘಟ್ಟ ರಸ್ತೆ ಕಿರ್ಲೋಸ್ಕರ್ ಲೇಔಟ್​ನಲ್ಲಿ ಘಟನೆ ನಡೆದಿದ್ದು, ಮನೆ ಮಾಲೀಕ ಸೋಮಶೇಖರ್ ಸೇರಿದಂತೆ ನಾಲ್ವರನ್ನು ಪೊಲೀಸರು ದಾಳಿಯ ವೇಳೆ ವಶಕ್ಕೆ ಪಡೆದುಕೊಂಡಿದ್ದಾರೆ. ಜತೆಗೆ ಓರ್ವ ಗೃಹಿಣಿಯನ್ನು ರಕ್ಷಿಸಿದ್ದು, 5 ಸಾವಿರ ನಗದು, 4 ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.

ಕೋಲಾರ: ದೆಹಲಿ ಪೊಲೀಸರಿಂದ ವ್ಯಕ್ತಿ ವಶಕ್ಕೆ
ದೆಹಲಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ವಸೀವುಲ್ಲಾ (34) ಎಂಬ ವ್ಯಕ್ತಿಯನ್ನು ದೆಹಲಿಯ ಲಕ್ಷ್ಮೀನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಗಾರಪೇಟೆ ಪೊಲೀಸರ ಸಹಕಾರದೊಂದಿಗೆ ದೆಹಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಕೆಜಿಎಫ್ ಎಸ್ಪಿ ಇಲಕ್ಕಿಯಾ ಕರುಣಾಗರನ್ ತಿಳಿಸಿದ್ದಾರೆ.

ಇದನ್ನೂ ಓದಿ:

ಅಪರಾಧ ಸುದ್ದಿಗಳು: ಒಂಟಿ ವೃದ್ಧನ ಕೈಕಾಲು ಕಟ್ಟಿ ದರೋಡೆ ಮಾಡಿದ್ದ 6 ಮಂದಿ ಬಂಧನ

ಅಪರಾಧ ಸುದ್ದಿಗಳು: ಬೆಂಗಳೂರಿನಲ್ಲಿ ಹೆಚ್ಚಿದ ಪೆಟ್ರೋಲ್ ಕಳ್ಳರ ಹಾವಳಿ

(Bengaluru Nelamangala Prostitution found by housewife Arrest)

Click on your DTH Provider to Add TV9 Kannada