ಟೂತ್ ಪೇಸ್ಟ್ ಬದಲಿಗೆ ಇಲಿ ವಿಷದಿಂದ ಹಲ್ಲುಜ್ಜಿ ಯುವತಿ ಸಾವು..!
ಅಫ್ಸಾನಾ ತಾಯಿ ಹಣ್ಣುಗಳನ್ನು ಮಾರಿ ಕುಟುಂಬದ ಖರ್ಚುಗಳನ್ನು ನೋಡಿಕೊಳ್ಳುತಿದ್ದರು. ತಾಯಿಗೆ ಸಹಾಯ ಮಾಡುತ್ತಾ ಅಫ್ಸಾನಾ ವಿದ್ಯಾಭ್ಯಾಸ ಮುಂದುವರೆಸಿದ್ದರು.
ಟೂತ್ ಪೇಸ್ಟ್ ಎಂದು ತಪ್ಪಾಗಿ ಭಾವಿಸಿ ಇಲಿ ವಿಷದಲ್ಲಿ ಬ್ರಷ್ ಮಾಡಿ ಯುವತಿಯೊಬ್ಬಳು ಮೃತಪಟ್ಟಿರುವ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ. ಹೀಗೆ ದಾರುಣವಾಗಿ ಸಾವನ್ನಪ್ಪಿರುವ ಹುಡುಗಿಯ ಹೆಸರು ಅಫ್ಸಾನಾ ಖಾನ್. ಮುಂಬೈ ಧಾರವಿ ಪ್ರದೇಶದಲ್ಲಿ ವಾಸಿಸುತ್ತಿದ್ದ 18 ವರ್ಷದ ಅಫ್ಸಾನಾ ಎಂದಿನಂತೆ ಬೆಳಿಗ್ಗೆ ಹಲ್ಲುಜ್ಜಲು ತೆರಳಿದ್ದಳು. ನಿದ್ದೆ ಕಣ್ಣಿನಲ್ಲಿದ್ದ ಆಕೆ ಟೂತ್ ಪೇಸ್ಟ್ ಬದಲಿಗೆ ಅದರ ಬಳಿಯಿದ್ದ ಇಲಿ ವಿಷದ ಪೇಸ್ಟ್ ಅನ್ನು ಬ್ರಷ್ಗೆ ಹಾಕಿ ಹಲ್ಲುಜ್ಜಿದ್ದಾಳೆ. ತಕ್ಷಣವೇ ವ್ಯತ್ಯಾಸ ಅರಿತ ಆಕೆ ಎಲ್ಲವನ್ನೂ ಉಗುಳಿ ಬಾಯಿಯನ್ನು ತೊಳೆದುಕೊಂಡಳು. ಆದರೆ ಅಷ್ಟರಲ್ಲಾಗಲೇ ತಲೆ ಸುತ್ತು ಬಂದು ಕೆಳಗೆ ಬಿದ್ದಿದ್ದಾಳೆ.
ತಕ್ಷಣವೇ ಕುಟುಂಬಸ್ಥರು ಅಫ್ಸಾನಾಳನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟೊತ್ತಿಗೆ ತಡವಾಗಿತ್ತು. ವಿಷವು ದೇಹದಲ್ಲಿ ಹರಡಲು ಪ್ರಾರಂಭಿಸಿತು. ಎರಡು ದಿನಗಳ ಚಿಕಿತ್ಸೆಯ ನಂತರ, ಅಫ್ಸಾನಾ ಭಾನುವಾರ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವಿದ್ಯಾಭ್ಯಾಸದಲ್ಲಿ ಮುಂದಿದ್ದ ಅಫ್ಸಾನಾ ಮುಂದಿನ ದಿನಗಳಲ್ಲಿ ಕುಟುಂಬಕ್ಕೆ ನೆರವಾಗುವ ಭರವಸೆ ಮೂಡಿಸಿದ್ದಳು.
ಏಕೆಂದರೆ ಅಫ್ಸಾನಾ ತಾಯಿ ಹಣ್ಣುಗಳನ್ನು ಮಾರಿ ಕುಟುಂಬದ ಖರ್ಚುಗಳನ್ನು ನೋಡಿಕೊಳ್ಳುತಿದ್ದರು. ತಾಯಿಗೆ ಸಹಾಯ ಮಾಡುತ್ತಾ ಅಫ್ಸಾನಾ ವಿದ್ಯಾಭ್ಯಾಸ ಮುಂದುವರೆಸಿದ್ದರು. ತಾನು ಓದಿ ದೊಡ್ಡ ಉದ್ಯೋಗಕ್ಕೆ ಸೇರಿ ಇಡೀ ಕುಟುಂಬವನ್ನು ಕಾಪಾಡುವ ಭರವಸೆ ಹುಟ್ಟುಹಾಕಿದ್ದಳು. ಆದರೆ ಇದೀಗ ಮಗಳ ದುರಂತ ಸಾವಿನಿಂದ ಇಡೀ ಕುಟುಂಬ ಶೋಕದಲ್ಲಿದೆ. ಪೊಲೀಸರು ಈ ಘಟನೆಯನ್ನು ಆಕಸ್ಮಿಕ ಸಾವಿನ ಪ್ರಕರಣವಾಗಿ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಸುಲಭವಾಗಿ ಕೈಗೆ ಸಿಗುವಂತಹ ಸ್ಥಳಗಳಲ್ಲಿ ಇಂತಹ ವಿಷಕಾರಿ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: IPL 2021: ಪ್ಲೇ ಆಫ್ ಪ್ರವೇಶಿಸಲು ದ್ವಿತಿಯಾರ್ಧದಲ್ಲಿ ಪ್ರತಿ ತಂಡಗಳು ಎಷ್ಟು ಪಂದ್ಯ ಗೆಲ್ಲಬೇಕು?
ಇದನ್ನೂ ಓದಿ: IPL 2021: ಐಪಿಎಲ್ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಭಾಗ್ಯ ಕೊಹ್ಲಿ, ಗೇಲ್, ಎಬಿಡಿಗೆ ಇನ್ನೂ ಸಿಕ್ಕಿಲ್ಲ
ಇದನ್ನೂ ಓದಿ: Crime News: ಅಕ್ಕನಿಗೆ ಯುವಕನೊಂದಿಗೆ ಸಂಬಂಧ: ಕಥೆ ಮುಗಿಸಿ ನಗುತ್ತಾ ನಿಂತಿದ್ದ ತಮ್ಮ..!
ಇದನ್ನೂ ಓದಿ: Crime News: ಹುಡುಗಿ ಧ್ವನಿಯಲ್ಲೇ ಡಾಕ್ಟರ್ ಕೈಯಿಂದ 2 ಕೋಟಿ ರೂ ಪೀಕಿದ ಚಾಲಾಕಿ..!
(Mumbai Dharavi girl dies accidentally after brushing her teeth with rat poison)