Crime News: ಅಕ್ಕನಿಗೆ ಯುವಕನೊಂದಿಗೆ ಸಂಬಂಧ: ಕಥೆ ಮುಗಿಸಿ ನಗುತ್ತಾ ನಿಂತಿದ್ದ ತಮ್ಮ..!

Crime News In Kannada: ಇದಾಗ್ಯೂ ಈ ಸಂಬಂಧವನ್ನು ಮುಂದುವರೆಸಿದ್ದಳು. ಇದರಿಂದ ಕೋಪಗೊಂಡಿದ್ದ ಆರಿಶ್​ ಮತ್ತೆ ಜಗಳ ತೆಗೆದಿದ್ದಾನೆ. ಈ ವಿಚಾರ ಮನೆಯಲ್ಲಿ ದೊಡ್ಡ ರಾದ್ದಾಂತವಾಗಿದೆ.

Crime News: ಅಕ್ಕನಿಗೆ ಯುವಕನೊಂದಿಗೆ ಸಂಬಂಧ: ಕಥೆ ಮುಗಿಸಿ ನಗುತ್ತಾ ನಿಂತಿದ್ದ ತಮ್ಮ..!
ಸಾಂದರ್ಭಿಕ ಚಿತ್ರ
TV9kannada Web Team

| Edited By: Zahir PY

Sep 11, 2021 | 7:16 PM

Crime News In Kannada: ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಸ್ವಂತ ಅಕ್ಕನನ್ನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶ ಮೀರತ್​ನಲ್ಲಿ ನಡೆದಿದೆ. 22 ವರ್ಷದ ಸಿಮ್ರಾನ್ ತಮ್ಮನಿಂದ ಕೊಲೆಯಾದ ಯುವತಿ. ಸಿಮ್ರಾನ್​ ಸ್ಥಳೀಯ ಯುವಕನೊಬ್ಬನೊಂದಿಗೆ ಸಂಬಂಧ ಹೊಂದಿರುವ ವಿಚಾರ ತಮ್ಮ ಆರಿಶ್​ಗೆ ತಿಳಿದಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ಮನೆಯಲ್ಲಿ ಜಗಳವಾಗಿದೆ. ಅಷ್ಟೇ ಅಲ್ಲದೆ ಮನೆಯವರು ಕೂಡ ಸಿಮ್ರಾನ್​ಗೆ ಬುದ್ದಿವಾದ ಹೇಳಿ ಯುವಕ ಸಹವಾಸವನ್ನು ಬಿಡುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ಇದಾಗ್ಯೂ ಈ ಸಂಬಂಧವನ್ನು ಮುಂದುವರೆಸಿದ್ದಳು. ಇದರಿಂದ ಕೋಪಗೊಂಡಿದ್ದ ಆರಿಶ್​ ಮತ್ತೆ ಜಗಳ ತೆಗೆದಿದ್ದಾನೆ. ಈ ವಿಚಾರ ಮನೆಯಲ್ಲಿ ದೊಡ್ಡ ರಾದ್ದಾಂತವಾಗಿದೆ. ಆ ಬಳಿಕ ತಾಯಿ ಸೇರಿದಂತೆ ಎಲ್ಲರೂ ಸಿಮ್ರಾನ್​ಗೆ ಯುವಕನ ಜೊತೆ ಸಂಬಂಧವನ್ನು ಬಿಟ್ಟು ಬಿಡುವಂತೆ ಕೇಳಿಕೊಂಡಿದ್ದಾರೆ. ಆದರೂ ಕೂಡ ಸಿಮ್ರಾನ್ ಫೋನ್​ನಲ್ಲಿ ಯುವಕನೊಂದಿಗೆ ಮಾತುಕತೆ ಮುಂದುರೆಸಿದ್ದಳು.

ಇದರಿಂದ ಮತ್ತಷ್ಟು ಕುಪಿತಗೊಂಡಿದ್ದ ಆರಿಶ್​ ಅಕ್ಕನನ್ನೇ ಮುಗಿಸಲು ಪ್ಲ್ಯಾನ್ ಮಾಡಿಕೊಂಡಿದ್ದನು. ಅದರಂತೆ ನಾಡ ಪಿಸ್ತೂಲ್ ಖರೀದಿಸಿ ಮನೆಯಲ್ಲಿ ತಂದಿಟ್ಟಿದ್ದ. ಬುಧವಾರ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಆರಿಶ್ ಸದ್ದು ಮಾಡದೇ ಎದ್ದಿದ್ದಾನೆ. ಅಲ್ಲದೆ ಅಕ್ಕನ ಕೋಣೆಗೆ ಹೋಗಿ ಏಕಾಏಕಿ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ದ ಕೇಳಿ ಸಿಮ್ರಾನ್ ರೂಮ್​ನತ್ತ ಮನೆಯವರು ಓಡಿ ಬಂದು ನೋಡಿದಾಗ ಆಕೆ ರಕ್ತದ ಮಡುವಿನಲ್ಲಿ ಮಲಗಿದ್ದಳು. ಇತ್ತ ಏನೂ ಆಗಿಲ್ಲ ಎಂಬಂತೆ ಆರಿಶ್ ಶೂಟ್​ ಮಾಡಿದ ಜಾಗದಿಂದ ಕದಲದೆ ನಿಂತು ನಗುತ್ತಿದ್ದನು.

ಕೂಡಲೇ ಕುಟುಂಬಸ್ಥರು ಸಿಮ್ರಾನ್​ಳನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇನ್ನು ಪೊಲೀಸರು ಬಂದು ಆರಿಶ್​ನನ್ನು ಬಂಧಿಸಿದ್ದಾರೆ. ಅಲ್ಲದೆ ವಿಚಾರಣೆ ವೇಳೆ ಕೊಲೆ ಮಾಡಿರುವ ಬಗ್ಗೆ ನನಗೆ ಯಾವುದೇ ಪಶ್ಚಾತಾಪವಿಲ್ಲ. ನಾನು ಕೆಲ ದಿನಗಳಿಂದ ಎಲ್ಲವೂ ಸಹಿಸಿಕೊಳ್ಳುತ್ತಾ ಬಂದಿದ್ದೇನೆ. ಎಲ್ಲದಕ್ಕೂ ಅಂತ್ಯವಾಡಲೆಂದೇ ಕೊಲೆಗೆ ಮಾಡಿರುವುದಾಗಿ ಆರಿಶ್ ಬಾಯಿಬಿಟ್ಟಿದ್ದಾನೆ ಎಂದು ಮೀರತ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: 16 ಸಿಕ್ಸರ್, 4 ಫೋರ್: ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ಜಸ್ಕರನ್

ಇದನ್ನೂ ಓದಿ: Rashid Khan: ಟಿ20 ವಿಶ್ವಕಪ್​ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ

ಇದನ್ನೂ ಓದಿ: Crime News: ಯುವತಿಗೆ ಡ್ರಾಪ್ ಕೊಡಲು ಬೈಕ್ ನಿಲ್ಲಿಸಿದ ಯುವಕ: ಆಮೇಲೆ ಆಗಿದ್ದೇ ಬೇರೆ!

ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು

(Crime News: youth has murdered to his elder sister meerut)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada