Crime News: ಹುಡುಗಿ ಧ್ವನಿಯಲ್ಲೇ ಡಾಕ್ಟರ್​ ಕೈಯಿಂದ 2 ಕೋಟಿ ರೂ ಪೀಕಿದ ಚಾಲಾಕಿ..!

Crime News In Kannada: ತಾನು ಶ್ರೀಮಂತ ಕುಟುಂಬಕ್ಕೆ ಸೇರಿದ ಹುಡುಗಿ ಎಂದು ಪರಿಚಿಸಿಕೊಂಡಿದ್ದ ಅನನ್ಯ ಸಿಂಗ್, ನಮ್ಮ ಕುಟುಂಬಸ್ಥರು ದುಬೈನಲ್ಲಿ ದೊಡ್ಡ ವ್ಯಾಪಾರ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಳು.

Crime News: ಹುಡುಗಿ ಧ್ವನಿಯಲ್ಲೇ ಡಾಕ್ಟರ್​ ಕೈಯಿಂದ 2 ಕೋಟಿ ರೂ ಪೀಕಿದ ಚಾಲಾಕಿ..!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 06, 2021 | 10:47 PM

ಸೋಷಿಯಲ್ ಮೀಡಿಯಾ ಮೂಲಕ ವಂಚನೆ ಇಂದು ನಿನ್ನೆಯದಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್ ಜಾಲ ವಿಸ್ತರಿಸಿಕೊಂಡಿದೆ ಎನ್ನಬಹುದು. ಇಂತಹ ವಂಚನೆಗಳ ಪ್ರಕರಣಗಳು ದಿನನಿತ್ಯ ವರದಿಯಾಗುತ್ತಿದ್ದರೂ ಇಲ್ಲೊಬ್ಬರು ವೈದ್ಯರು 2 ಕೋಟಿ ರೂ.ಗೂ ಅಧಿಕ ಮೊತ್ತ ಕಳೆದುಕೊಂಡು ಸುದ್ದಿಯಾಗಿದ್ದಾರೆ. ಈ ಘಟನೆ ನಡೆದಿರುವುದು ದೆಹಲಿಯಲ್ಲಿ. 44 ವರ್ಷದ ಡಾಕ್ಟರ್​ಗೆ ಫೇಸ್​ಬುಕ್​ನಲ್ಲಿ ಮುಂಬೈ ಮೂಲದ ಅನನ್ಯ ಸಿಂಗ್ ಎಂಬ ಯುವತಿ ಪರಿಚಿತಳಾಗಿದ್ದಳು. ಈ ಪರಿಚಯ ಕೆಲವೇ ದಿನಗಳಲ್ಲಿ ಇಬ್ಬರ ನಡುವಣ ಸ್ನೇಹವಾಗಿ ಮಾರ್ಪಟ್ಟಿತು.

ತಾನು ಶ್ರೀಮಂತ ಕುಟುಂಬಕ್ಕೆ ಸೇರಿದ ಹುಡುಗಿ ಎಂದು ಪರಿಚಿಸಿಕೊಂಡಿದ್ದ ಅನನ್ಯ ಸಿಂಗ್, ನಮ್ಮ ಕುಟುಂಬಸ್ಥರು ದುಬೈನಲ್ಲಿ ದೊಡ್ಡ ವ್ಯಾಪಾರ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಳು. ಹೀಗೆ ಇಬ್ಬರ ನಡುವೆ ಆತ್ಮೀಯತೆ ಬೆಳೆದು ಫೋನ್ ನಂಬರ್​ ಅನ್ನು ಹಂಚಿಕೊಂಡಿದ್ದರು. ಇತ್ತ ಡಾಕ್ಟರ್ ಕೂಡ ಫೇಸ್‌ಬುಕ್ ಹೊರತುಪಡಿಸಿ, ಅದೇ ಹುಡುಗಿಯ ಪ್ರೊಫೈಲ್ ಇನ್‌ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಗಮನಿಸಿದ್ದರು. ಹೀಗಾಗಿ ಯುವತಿಯನ್ನು ವೈದ್ಯರು ಸಂಪೂರ್ಣವಾಗಿ ನಂಬಿದ್ದರು.

ಆದರೆ ಅದೊಂದು ದಿನ ಡಾಕ್ಟರ್​ಗೆ ಅನನ್ಯ ಸಿಂಗ್ ಫೋನ್​ನಿಂದ ಅನಿರೀಕ್ಷಿತ ಕರೆಯೊಂದು ಬಂತು. ಈ ವೇಳೆ ಗಾಬರಿಯಿಂದ ಮಾತನಾಡಿದ್ದ ಅನನ್ಯ, ತನ್ನ ಸಹೋದರಿಯನ್ನು ಅಪಹರಿಸಿದ್ದಾಗಿ ತಿಳಿಸಿದ್ದಳು. ಅಲ್ಲದೆ ಅವಳನ್ನು ಬಿಡುಗಡೆ ಮಾಡಲು ಅಪಹರಣಕಾರರು 2 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಹೇಗಾದರು ಮಾಡಿ ಹಣ ಹೊಂದಿಸಿಕೊಡಬೇಕೆಂದು ಕೇಳಿಕೊಂಡಿದ್ದಳು. ತನ್ನ ಫ್ರೆಂಡ್​ನ ನೋವು ಕೇಳಿ ಡಾಕ್ಟರ್ ಹಾಗೂ ಹೀಗೂ ಮಾಡಿ 2 ಕೋಟಿ ರೂ. ರೆಡಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಪಹರಣಕಾರರು ತಿಳಿಸಿದ ಸ್ಥಳಕ್ಕೆ ಹೋಗಿ ಹಣವನ್ನು ವೈದ್ಯರೇ ಕೊಟ್ಟು ಬಂದಿದ್ದಾರೆ. ಈ ಎಲ್ಲಾ ಸಹಾಯಕ್ಕೆ ಧನ್ಯವಾದ ತಿಳಿಸಿದ ಅನನ್ಯ, ತನ್ನ ಸಹೋದರಿ ಸುರಕ್ಷಿತವಾಗಿ ಮನೆಗೆ ಮರಳಿದ್ದಾಳೆ ಎಂದು ಹೇಳಿದ್ದಳು.

ಈ ಘಟನೆಯ ಬಳಿಕ ಕೂಡ ಇಬ್ಬರ ನಡುವಿನ ಆತ್ಮೀಯತೆ ಮುಂದುವರೆದಿತ್ತು. ಅದೊಂದು ದಿನ ವೈದ್ಯರಿಗೆ ಬ್ಯಾಂಕ್ ಖಾತೆಯೊಂದನ್ನು ನೀಡಿದ್ದ ಅನನ್ಯ ಅರ್ಜೆಂಟ್ ದುಡ್ಡಿನ ನೆರವು ಕೇಳಿದ್ದಳು. ಈ ಸಲ ಕೂಡ ಡಾಕ್ಟರ್ 7 ಲಕ್ಷ 20 ಸಾವಿರ ರೂ. ನೀಡಿದ್ದಾರೆ. ಆದರೆ ಇದಾದ ಬಳಿಕ ಅನನ್ಯ ಫೋನ್ ನಂಬರ್ ಸ್ವಿಚ್ ಆಫ್ ಆಗಿದೆ. ಹಾಗೆಯೇ ಫೇಸ್​ಬುಕ್, ಇನ್​ಸ್ಟಾಗ್ರಾಮ್​ ಖಾತೆಗಳು ಡಿಲೀಟ್ ಮಾಡಿದ್ದಳು. ಒಂದೆರಡು ದಿನ ಕಳೆದರೂ ಅನನ್ಯಳ ಮೆಸೇಜ್ ಅಥವಾ ಕರೆ ಬರದಿದ್ದ ಕಾರಣ ಡಾಕ್ಟರ್​ಗೆ ಎಲ್ಲೋ ಒಂದು ಸಣ್ಣ ಸಂಶಯ ಮೂಡಿದೆ. ಆ ಸಂಶಯ ಬಳಿಕ ನಿಜವಾಗಿದೆ. ಹೌದು, ಅನನ್ಯ ಸಿಂಗ್ ವೈದ್ಯರನ್ನು ಯಾಮಾರಿಸಿ ಬರೋಬ್ಬರಿ 2 ಕೋಟಿ 7 ಲಕ್ಷ 20 ಸಾವಿರ ವಂಚಿಸಿದ್ದಳು.

ಈ ಬಗ್ಗೆ ಡಾಕ್ಟರ್ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ವಂಚನೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ಏಕೆಂದರೆ ಫೋನ್ ನಂಬರ್​ನ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿದ್ದು ಅನಿಲ್ ಮಂಕರ್ ಎನ್ನುವ 22 ವರ್ಷದ ಯುವಕ. ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಎಲ್ಲವನ್ನೂ ಬಾಯಿ ಬಿಟ್ಟಿದ್ದಾನೆ. ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯ ನಿವಾಸಿಯಾಗಿರುವ ಅನಿಲ್ 12 ನೇ ತರಗತಿಯವರೆಗೆ ಮಾತ್ರ ಓದಿದ್ದ. ಅಲ್ಲದೆ ಐದು ವರ್ಷಗಳ ಹಿಂದೆ ಅನನ್ಯ ಸಿಂಗ್ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ಖಾತೆ ತೆರೆದಿದ್ದ. ಈ ಮೂಲಕ ದೊಡ್ಡ ದೊಡ್ಡ ವ್ಯಕ್ತಿಗಳಿಗಾಗಿ ಬಲೆ ಬೀಸುತ್ತಿದ್ದ. ಹುಡುಗಿಯ ಧ್ವನಿ ಹೊಂದಿದ್ದ ಈತನ ಮಾತುಗಳನ್ನು ಕೇಳಿ ಯುವತಿ ಎಂದೇ ಎಲ್ಲರೂ ಭಾವಿಸುತ್ತಿದ್ದರು.

ಅದನ್ನೇ ಬಂಡವಾಳ ಮಾಡಿಕೊಂಡ ಅನಿಲ್ ವೈದ್ಯನಿಂದ 2 ಕೋಟಿ 7 ಲಕ್ಷದ 20 ಸಾವಿರ ಪೀಕಿದ್ದ. ಅಲ್ಲದೆ ಇನ್ನು ಮೂವರನ್ನು ಇದೇ ರೀತಿಯಲ್ಲಿ ಯಾಮಾರಿಸಿರುವುದಾಗಿ ತಿಳಿಸಿದ್ದಾನೆ. ಇದೀಗ ಅನನ್ಯ ಸಿಂಗ್ ಹೆಸರಿನ ಅನಿಲ್ ಮಂಕರ್ ಪೊಲೀಸರ ಅತಿಥಿಯಾಗಿದ್ದಾನೆ. ಅಲ್ಲದೆ ಆತನಿಂದ 1.97 ಕೋಟಿ ರೂ ನಗದು ಕೂಡ ವಶಪಡಿಸಿಕೊಳ್ಳಲಾಗಿದೆ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಭುಜ್ಬಲ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಯಾಮಾರುವರು ಇರುವ ತನಕ ಯಾಮಾರಿಸುವವರು ಇದ್ದೇ ಇರುತ್ತಾರೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ.

ಇದನ್ನೂ ಓದಿ: IPL 2021: ಈ ಸಲ ಕಪ್ ನಮ್ದೆ ಎಂದ RCB ತಂಡದ ಬಿಗ್ ಫ್ಯಾನ್

ಇದನ್ನೂ ಓದಿ: ಒಂದೇ ಒಂದು ರನ್ ನೀಡಲಿಲ್ಲ: 10 ಓವರ್ ಮೇಡನ್ ಮಾಡಿ ದಾಖಲೆ ಬರೆದ ಸ್ಪಿನ್ನರ್

ಇದನ್ನೂ ಓದಿ: ಮೊಬೈಲ್ ಬಳಕೆದಾರರ ಗಮನಕ್ಕೆ: ಇನ್ಮುಂದೆ ಈ ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ

(Yavatmal youth dupes Delhi-based doctor of Rs two crore)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ