ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಗಟ್ಟಿ ವಿದ್ಯಾರ್ಥಿನಿ ಸಾವು; ಮೊಬೈಲ್ ಚಾರ್ಜ್​ ಹಾಕುವಾಗ ಹಾವು ಕಚ್ಚಿ ವಿದ್ಯಾರ್ಥಿಗೆ ಗಾಯ

ಅಯ್ಯೋ! ಹೀಗಾಗಬಾರದಿತ್ತು ಎಂದೆನಿಸುವ ಎರಡು ಪ್ರತ್ಯೇಕ ದುರ್ಘಟನೆಗಳು ಇಲ್ಲಿವೆ.

ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಗಟ್ಟಿ ವಿದ್ಯಾರ್ಥಿನಿ ಸಾವು; ಮೊಬೈಲ್ ಚಾರ್ಜ್​ ಹಾಕುವಾಗ ಹಾವು ಕಚ್ಚಿ ವಿದ್ಯಾರ್ಥಿಗೆ ಗಾಯ
ಹಾವಿನಿಂದ ಕಡಿತಕ್ಕೊಳಗಾದ ವಿದ್ಯಾರ್ಥಿ

ಬೆಂಗಳೂರು: ಗ್ಯಾಸ್ ಗೀಸರ್​ ಸೋರಿಕೆಯಾಗಿ ಉಸಿರುಗಟ್ಟಿ ಎಂಬಿಬಿಎಸ್ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಂಪದ (23) ವರ್ಷದ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯೇ ಮೃತಪಟ್ಟ ದುರ್ದೈವಿ. ಸೆಪ್ಟೆಂಬರ್ 4ರಂದು ಸ್ನಾನಕ್ಕೆ ತೆರಳಿದ್ದಾಗ ವಿದ್ಯಾರ್ಥಿನಿ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ನಾನ ಮಾಡಲು ಮಧ್ಯಾಹ್ನ 12.30ಕ್ಕೆ ಬಾತ್ರೂಂಗೆ ಹೋಗಿದ್ದ ವಿದ್ಯಾರ್ಥಿನಿ 2 ಗಂಟೆಯಾದರೂ ಹೊರಬಂದಿರಲಿಲ್ಲ. ಅನುಮಾನದಿಂದ ಬಾತ್​ರೂಮ್​ ಬಾಗಿಲು ಒಡೆದು ನೋಡಿದಾಗ ಪ್ರಜ್ಞೆತಪ್ಪಿ ಬಿದ್ದಿರುವುದು ಕಂಡಿತ್ತು. ತಕ್ಷಣವೇ ವಿದ್ಯಾರ್ಥಿನಿ ಸಂಪದಾಳನ್ನು ಆಸ್ಪತ್ರೆಗೆ ಕರೆತಂದರೂ ಮಾರ್ಗಮಧ್ಯೆಯೇ ಆಕೆ ಸಾವನ್ನಪ್ಪಿದ್ದಾಳೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೋನ್ ಚಾರ್ಜ್ ಹಾಕುವಾಗ ಹಾವು ಕಡಿದು ಗಾಯ
ಕೊಪ್ಪಳ: ಫೋನ್ ಚಾರ್ಜ್ ಹಾಕುವಾಗ ಹಾವು ಕಚ್ಚಿ ವಿದ್ಯಾರ್ಥಿಯೋರ್ವ ಗಾಯಗೊಂಡ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ಕಲ್ಮಠ ಖಾಸಗಿ ITI ಕಾಲೇಜಿನಲ್ಲಿ ನಡೆದಿದೆ. ಗವಿಸ್ವಾಮಿ(18) ಹಾವು ಕಡಿತಕ್ಕೊಳಗಾದ ವಿದ್ಯಾರ್ಥಿ. ಪೋನ್ ಚಾರ್ಜ್ ಹಾಕುವಾಗ ಸ್ವಿಚ್ ಬೋರ್ಡ್ನಲ್ಲಿ ಹೊಕ್ಕಿ ಕುಳಿತಿದ್ದ ಹಾವು ವಿದ್ಯಾರ್ಥಿಯನ್ನು ಕಚ್ಚಿದೆ. ಇದನ್ನು ತಿಳಿದ ಗವಿಸ್ವಾಮಿಯ ಸ್ನೇಹಿತರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.ಸದ್ಯ ಪ್ರಾಣಾಪಾಯದಿಂದ ವಿದ್ಯಾರ್ಥಿ ಬಚಾವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: 

ತಾಲಿಬಾನ್ ಆಡಳಿತಕ್ಕೆ ವಿಶ್ವಸಂಸ್ಥೆ ಅಭಯ: ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್ಸ್​-ಮುಲ್ಲಾ ಬಾರದಾರ್ ಭೇಟಿ 

ಹುಬ್ಬಳ್ಳಿ ಧಾರವಾಡ ಪಾಲಿಕೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗಂಡ ಜಯ; ಪಕ್ಷೇತರ ಅಭ್ಯರ್ಥಿ ಹೆಂಡತಿಗೆ ಸೋಲು

(Bengaluru MBBS student dies by gas geyser in bathroom Koppal ITI Student snake byte on mobile charging)

Click on your DTH Provider to Add TV9 Kannada