AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಐಪಿಎಲ್​ನಲ್ಲಿ ಪಾಕ್ ಆಟಗಾರರಿಗೆ ಸಿಕ್ಕ ಭಾಗ್ಯ ಕೊಹ್ಲಿ, ಗೇಲ್, ಎಬಿಡಿಗೆ ಇನ್ನೂ ಸಿಕ್ಕಿಲ್ಲ

RCB: ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. 6076 ರನ್ ಗಳಿಸಿರುವ ಕೊಹ್ಲಿ ಐಪಿಎಲ್​ನಲ್ಲಿ 5 ಶತಕ ಮತ್ತು 40 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

TV9 Web
| Edited By: |

Updated on: Sep 14, 2021 | 5:58 PM

Share
ಐಪಿಎಲ್​ನ ದ್ವಿತಿಯಾರ್ಧಕ್ಕೆ ಭಾನುವಾರ ಚಾಲನೆ ದೊರೆಯಲಿದೆ. ಟೂರ್ನಿಯ ಉಳಿದ 31 ಪಂದ್ಯಗಳನ್ನು ಯುಎಇನ ಶಾರ್ಜಾ, ಅಬುಧಾಬಿ ಹಾಗೂ ದುಬೈ ಕ್ರಿಕೆಟ್ ಮೈದಾನದಲ್ಲಿ ಆಡಲಾಗುತ್ತದೆ. ಆದರೆ ದ್ವಿತಿಯಾರ್ಧ ಆರಂಭಕ್ಕೂ ಮುನ್ನವೇ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡವನ್ನು ಹೆಸರಿಸಿದ್ದಾರೆ ಟೀಮ್ ಇಂಡಿಯಾ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್.

1 / 5
ಈ ಲೆಕ್ಕಾಚಾರಗಳಲ್ಲಿ ಎಂದಿನಂತೆ ಬಲಿಷ್ಠ ತಂಡವಾಗಿ ಆರ್​ಸಿಬಿ ಕೂಡ ಇರುವುದು ವಿಶೇಷ. ಒಂದು ವೇಳೆ ಈ ಸಲ ಆರ್​ಸಿಬಿ ಕಪ್ ಗೆದ್ದರೆ ಇಬ್ಬರು ಲೆಜೆಂಡ್ ಆಟಗಾರರ 13 ವರ್ಷಗಳ ದೀರ್ಘ ಕಾಯುವಿಕೆಗೆ ಫುಲ್ ಸ್ಟಾಪ್ ಬೀಳಲಿದೆ. ಹೌದು, ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ.  6076 ರನ್ ಗಳಿಸಿರುವ ಕೊಹ್ಲಿ ಐಪಿಎಲ್​ನಲ್ಲಿ  5 ಶತಕ ಮತ್ತು 40 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇದಾಗ್ಯೂ ಒಂದೇ ಒಂದು ಬಾರಿ ಕಪ್ ಗೆದ್ದ ತಂಡದ ಭಾಗವಾಗಲು ಸಾಧ್ಯವಾಗಿಲ್ಲ.

2 / 5
ಇನ್ನು  ಆರ್​ಸಿಬಿ ತಂಡದ ಆಪತ್ಭಾಂಧವ ಎಬಿ ಡಿವಿಲಿಯರ್ಸ್ ಐಪಿಎಲ್​ನಲ್ಲಿ 5056 ರನ್ ಗಳಿಸಿದ್ದಾರೆ. ಹಲವು ಪಂದ್ಯಗಳನ್ನೂ ಸಹ ಗೆಲ್ಲಿಸಿಕೊಟ್ಟಿದ್ದಾರೆ. ಇದಾಗ್ಯೂ ಐಪಿಎಲ್ ಟ್ರೋಫಿ ಎನ್ನುವುದು ಎಬಿಡಿಗೆ ಮರೀಚಿಕೆ. ಹಾಗೆಯೇ ಪಂಜಾಬ್ ಕಿಂಗ್ಸ್ ತಂಡ ಆಟಗಾರ ಕ್ರಿಸ್ ಗೇಲ್ 4950 ರನ್ ಗಳಿಸಿದ್ದಾರೆ. ಕೆಕೆಆರ್, ಆರ್​ಸಿಬಿ ಸೇರಿದಂತೆ ಮೂರು ಫ್ರಾಂಚೈಸಿಗಳ ಪರ ಆಡಿರುವ ಗೇಲ್ ಕೂಡ ಇದುವರೆಗೆ ಐಪಿಎಲ್ ಟ್ರೋಫಿ ಗೆದ್ದ ತಂಡದ ಭಾಗವಾಗಿಲ್ಲ ಎಂಬುದು ವಿಶೇಷ.

3 / 5
ಇದಾಗ್ಯೂ ಪಾಕಿಸ್ತಾನ್ ತಂಡದ ಕೆಲ ಆಟಗಾರರಿಗೆ ಐಪಿಎಲ್ ಟ್ರೋಫಿ ಗೆದ್ದ ತಂಡಗಳ ಭಾಗವಾಗುವ ಅವಕಾಶ ಲಭಿಸಿದೆ. 2008 ರಲ್ಲಿ ಪಾಕ್​ ಆಟಗಾರರು ಐಪಿಎಲ್​ನಲ್ಲಿ ಭಾಗವಹಿಸಿದ್ದರು. ಚೊಚ್ಚಲ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ವೇಳೆ ತಂಡದಲ್ಲಿ ಪಾಕ್ ಎಡಗೈ ವೇಗದ ಬೌಲರ್‌ ಸೊಹೈಲ್ ತನ್ವಿರ್, ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಕಮ್ರಾನ್ ಅಕ್ಮಲ್ ಮತ್ತು ಯೂನಿಸ್ ಖಾನ್ ಚಾಂಪಿಯನ್ ತಂಡದ ಭಾಗವಾಗಿದ್ದರು.

4 / 5
ಅಷ್ಟೇ ಅಲ್ಲದೆ ಚೊಚ್ಚಲ ಟೂರ್ನಿಯಲ್ಲಿ 11 ಪಂದ್ಯಗಳಿಂದ 22  ವಿಕೆಟ್ ಪಡೆದು ಸೊಹೈಲ್ ತನ್ವೀರ್ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. 2008ರ ಉಗ್ರರ ಮುಂಬೈ ದಾಳಿ ಬಳಿಕ ಪಾಕ್ ಆಟಗಾರರನ್ನು ಐಪಿಎಲ್​ನಿಂದ ಕೈ ಬಿಡಲು ಭಾರತ ಸರ್ಕಾರ ನಿರ್ದೇಶಿಸಿತ್ತು. ಅದರಂತೆ ಕಳೆದ  13 ಸೀಸನ್​ಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಪಾಕ್ ಆಟಗಾರರಿಗೆ ನಿಷೇಧ ಹೇರಲಾಗಿದೆ.

5 / 5
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ

ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ

ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ

ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ

ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!

ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು

ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!

ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ

ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ