AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿಗೆ ಕಂಟಕ; ಕಾನೂನು ಹೋರಾಟಕ್ಕೆ ಟಿಎಪಿಸಿಎಂಎಸ್ ನಿರ್ಧಾರ

2018ರ ಏಪ್ರಿಲ್​ನಿಂದ ಬಾಡಿಗೆ ಮತ್ತು ಕಂದಾಯ ಪಾವತಿಸಿಲ್ಲ. ಗೋದಾಮು ಬಾಡಿಗೆ 42.47 ಲಕ್ಷ ರೂ. ಹಣ ಬಾಕಿ ಇದೆ. ಪುರಸಭೆಯ ಕಂದಾಯ ಬಾಕಿ 4.78 ಲಕ್ಷ ರೂಪಾಯಿ ಇದೆ.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿಗೆ ಕಂಟಕ; ಕಾನೂನು ಹೋರಾಟಕ್ಕೆ ಟಿಎಪಿಸಿಎಂಎಸ್ ನಿರ್ಧಾರ
ಸಭೆಯ ಸೂಚನಾ ಪತ್ರ, ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ
TV9 Web
| Updated By: sandhya thejappa|

Updated on:Oct 02, 2021 | 11:09 AM

Share

ಮಂಡ್ಯ: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾಗೆ ಕಾನೂನು ಕಂಟಕ ಎದುರಾಗಿದೆ. ಗೋದಾಮಿಗೆ ಬಾಡಿಗೆ, ಕಂದಾಯ ಪಾವತಿಸದ ಹಿನ್ನೆಲೆ ನಿಶಾ ಯೋಗೇಶ್ವರ್ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧಾರ ಮಾಡಲಾಗಿದೆ. ಬಿಜೆಪಿ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಮಾಲಕಿ. ಕಂಪನಿ 2017ರಲ್ಲಿ ಗೋದಾಮು ಬಾಡಿಗೆಗೆ ಪಡೆದಿತ್ತು. ಮಂಡ್ಯ ಜಿಲ್ಲೆಯ ಮದ್ದೂರಿನ ಟಿಎಪಿಸಿಎಂಎಸ್​ಗೆ ಸೇರಿದ ಗೋಡೌನ್ ಬಾಡಿಗೆ ಪಡೆದಿದ್ದರು. ಆದರೆ ನಿಶಾ ಒಪ್ಪಂದದಂತೆ ಬಾಡಿಗೆ ಮತ್ತು ಕಂದಾಯವನ್ನು ಪಾವತಿಸಿಲ್ಲ. ಹೀಗಾಗಿ ಟಿಎಪಿಸಿಎಂಎಸ್ ನಿಶಾ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧರಿಸಿದೆ.

2018ರ ಏಪ್ರಿಲ್​ನಿಂದ ಬಾಡಿಗೆ ಮತ್ತು ಕಂದಾಯ ಪಾವತಿಸಿಲ್ಲ. ಗೋದಾಮು ಬಾಡಿಗೆ 42.47 ಲಕ್ಷ ರೂ. ಹಣ ಬಾಕಿ ಇದೆ. ಪುರಸಭೆಯ ಕಂದಾಯ ಬಾಕಿ 4.78 ಲಕ್ಷ ರೂಪಾಯಿ ಇದೆ. ಹೀಗಾಗಿ ಕಾನೂನು ಹೋರಾಟಕ್ಕೆ ಟಿಎಒಇಸಿಎಂಎಸ್ ನಿರ್ಧಾರ ಮಾಡಿದೆ. ಟಿಎಪಿಸಿಎಂಎಸ್ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ನಿಯಮ ಉಲ್ಲಂಘಿಸಿ ಬಾಡಿಗೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಡೆಕ್ಕನ್ ಫೀಲ್ಡ್ ಅಗ್ರೋ ಕಂಪನಿಗೆ ಗೋದಾಮು ಬಾಡಿಗೆ ವಿಚಾರದಲ್ಲಿ ಆರೋಪ ಕೇಳಿ ಬಂದಿತ್ತು. ಆರೋಪದ ಹಿನ್ನೆಲೆಯಲ್ಲಿ ಸಹಕಾರ ಸಂಘದ ಉಪ ನಿರ್ದೇಶಕರಿಂದ ಆಡಳಿತ ಮಂಡಳಿ ವಜಾಗೊಳಿಸಲಾಗಿತ್ತು. ಅಧ್ಯಕ್ಷ ಮಹದೇವು ನೇತೃತ್ವದಲ್ಲಿ ವಜಾಗೊಳಿಸಲಾಗಿತ್ತು .ಆದೇಶಕ್ಕೆ ಹೈ ಕೋರ್ಟ್​ನಿಂದ ತಡೆಯಾಜ್ಞೆ ತರಲಾಗಿತ್ತು.

ಇದನ್ನೂ ಓದಿ

ಮಹಾತ್ಮ ಗಾಂಧಿ-ಲಾಲ್​ ಬಹದ್ದೂರ್​ ಶಾಸ್ತ್ರಿ ಜನ್ಮದಿನ; ಇಬ್ಬರೂ ನಾಯಕರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ

‘ಕರಣ್​ ಜೋಹರ್​ ಬಗ್ಗೆ ಕೆಟ್ಟದಾಗಿ ಮಾತಾಡು’ ಎಂದು ಕಾಂಟ್ರವರ್ಸಿ ಖಾನ್​ಗೆ ಮೆಸೇಜ್ ಮಾಡಿದ್ದ ಕಂಗನಾ?

Published On - 9:23 am, Sat, 2 October 21