AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tumkur soldier martyred: ಜಮ್ಮು-ಕಾಶ್ಮೀರ ಗಡಿಯಲ್ಲಿ ಗುಂಡಿನ ಚಕಮಕಿ, ತುಮಕೂರಿನ ಯೋಧ ರಂಗಯ್ಯ ಹುತಾತ್ಮ

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕೆ.ಟಿ ಹಳ್ಳಿ ಮೂಲದ ಯೋಧ ರಂಗಯ್ಯ (57) ಗುಂಡು ತಗುಲಿ ವೀರ ಮರಣವನ್ನಪ್ಪಿದ್ದಾರೆ. 35 ವರ್ಷದಿಂದ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

Tumkur soldier martyred: ಜಮ್ಮು-ಕಾಶ್ಮೀರ ಗಡಿಯಲ್ಲಿ ಗುಂಡಿನ ಚಕಮಕಿ, ತುಮಕೂರಿನ ಯೋಧ ರಂಗಯ್ಯ ಹುತಾತ್ಮ
ಜಮ್ಮು-ಕಾಶ್ಮೀರ ಗಡಿಯಲ್ಲಿ ಗುಂಡಿನ ಚಕಮಕಿ: ತುಮಕೂರಿನ ಯೋಧ ರಂಗಯ್ಯ ಹುತಾತ್ಮ
TV9 Web
| Updated By: ಸಾಧು ಶ್ರೀನಾಥ್​|

Updated on:Oct 02, 2021 | 10:08 AM

Share

ತುಮಕೂರು: ಜಮ್ಮು-ಕಾಶ್ಮೀರ ಗಡಿಯಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ತುಮಕೂರಿನ ಯೋಧ ಹುತಾತ್ಮರಾಗಿದ್ದಾರೆ. ಜಮ್ಮು-ಕಾಶ್ಮೀರ ಗಡಿಯಲ್ಲಿ ಕೆಲಸ ಮಾಡುತ್ತಿದ್ದ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೆ.ಟಿ.ಹಳ್ಳಿಯ ಯೋಧ ರಂಗಯ್ಯ (57) ಹುತಾತ್ಮರಾದವರು.

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕೆ.ಟಿ ಹಳ್ಳಿ ಮೂಲದ ಯೋಧ ರಂಗಯ್ಯ (57) ಗುಂಡು ತಗುಲಿ ವೀರ ಮರಣವನ್ನಪ್ಪಿದ್ದಾರೆ. 35 ವರ್ಷದಿಂದ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಯೋಧ ರಂಗಯ್ಯ ಪ್ರಸ್ತುತ ಗಡಿ ಭದ್ರತಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಗುರುವಾರ ರಾತ್ರಿ ಜಮ್ಮು ಕಾಶ್ಮೀರದಲ್ಲಿ ಗಡಿ ಕಾಯುತ್ತಿದ್ದ ವೇಳೆ ಗುಂಡಿನ ಚಕಮಕಿಯಲ್ಲಿ ರಂಗಯ್ಯ ಹುತಾತ್ಮರಾಗಿದ್ದಾರೆ. ಇಂದು ಶನಿವಾರ ಯೋಧನ ಪಾರ್ಥಿವ ಶರೀರ ಪಾವಗಡಕ್ಕೆ ಆಗಮನವಾಗುವ ಸಾಧ್ಯತೆಯಿದೆ. ಪಾವಗಡ ತಾಲ್ಲೂಕು ಆಡಳಿತದಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗುವುದು. ರಂಗಯ್ಯ ಹುಟ್ಟೂರು ಕೆ.ಟಿ. ಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

ನೀವು ಹೂಡಿಕೆ ಮಾಡೋಕೆ ತಿಳುವಳಿಕೆ ಬೇಕಾ ಬೇಡ್ವಾ!|Balaji Rao D.G.|Tv9 Investment Tips

Published On - 9:57 am, Sat, 2 October 21