ಅಪ್ಪ-ಮಗ ಅರೆಸ್ಟ್: ಸರ್ಕಾರಿ ಕಂಪ್ಯೂಟರ್ನಲ್ಲಿದ್ದ ದಾಖಲೆಯನ್ನು ವಾಟ್ಸಪ್ ಮೂಲಕ ಎಲ್ಲರಿಗೂ ಕಳಿಸಿದ್ದ ಅರೋಪಿಗಳು!
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಿಡಿಒ ಗಳ ವರ್ಗಾವಣೆಗೂ ಮೊದಲೇ ಪ್ರತಿ ಸೋರಿಕೆ ಯಾಗಿರುವ ಪ್ರಕರಣದಲ್ಲಿ ಅಪ್ಪ-ಮಗನ ಕಿಲಾಡಿತನ ಬೆಳಕಿಗೆ ಬಂದಿದೆ. ಪ್ರಕರಣದ ಸಂಬಂಧ ಕೇಂದ್ರ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಅನ್ವಯ ಕೇಸ್ ದಾಖಲು ಮಾಡಿದ್ದ ಸಿ ಇ ಎನ್ ಪೊಲೀಸರು ಕೇಸ್ ನಲ್ಲಿ ಅಪ್ಪಾ-ಮಗ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 6: ಐನಾತಿ ಅಪ್ಪ-ಮಗ ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದುಕೊಂಡು ಸರ್ಕಾರಕ್ಕೆ ದ್ರೋಹ ಬಗೆದಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಿಡಿಒ ಗಳ ವರ್ಗಾವಣೆಗೂ ಮೊದಲೇ ಪ್ರತಿ ಸೋರಿಕೆಯಾಗಿರುವ ಪ್ರಕರಣದಲ್ಲಿ ಅಪ್ಪ-ಮಗನ (Father son duo) ಕಿಲಾಡಿತನ ಬೆಳಕಿಗೆ ಬಂದಿದೆ. ವರ್ಗಾವಣೆಗಾಗಿ ಅನುಮೋದನೆ ಪಡೆಯಲು ಪಂಚಾಯತ್ ರಾಜ್ ಇಲಾಖೆಯಿಂದ ಮುಖ್ಯಮಂತ್ರಿ ಕಛೇರಿಗೆ ಕಳಿಸಿದ್ದ ಪ್ರತಿ ಸೋರಿಕೆಯಾಗಿತ್ತು. ಆದರೆ ಈ ಪ್ರತಿಯನ್ನು ಸರ್ಕಾರದ ಅನುಮೋದನೆ ಆಗುವುದಕ್ಕೆ ಮೊದಲೆ ವಾಟ್ಸಪ್ (WhatsApp) ನಲ್ಲಿ ಹರಿಯಬಿಡಲಾಗಿತ್ತು. ಸರ್ಕಾರದ ಇ-ಆಫೀಸ್ ನಲ್ಲಿ ಇದ್ದ ಪ್ರತಿಯನ್ನು ಹ್ಯಾಕ್ ಮಾಡಲಾಗಿದೆ ಎಂದು ದೂರು ನೀಡಲಾಗಿತ್ತು. ಪಿಡಿಒ ಗಳ ವರ್ಗಾವಣೆ ಆದೇಶ ಆಗುವುದಕ್ಕೂ ಮೊದಲೆ ಕಳ್ಳತನ ನಡೆದಿರುವ ಅರೋಪ ಕೇಳಿಬಂದಿತ್ತು (Father son duo arrested).
ಪ್ರಕರಣದ ಸಂಬಂಧ ಕೇಂದ್ರ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಅನ್ವಯ ಕೇಸ್ ದಾಖಲು ಮಾಡಿದ್ದ ಸಿ ಇ ಎನ್ ಪೊಲೀಸರು ಕೇಸ್ ನಲ್ಲಿ ಅಪ್ಪಾ-ಮಗ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಮಗ ಶ್ರೀಧರ್ ಮತ್ತು ಅಪ್ಪ ನಾರಾಯಣ್ ಸದ್ಯಕ್ಕೆ ಪೊಲೀಸರ ವಶದಲ್ಲಿದ್ದಾರೆ.
ಇದನ್ನೂ ಓದಿ: ನಿವೃತ್ತ ಶಿಕ್ಷಕರಿಗೆ ಸಿಹಿ ಸುದ್ದಿ, ಗುರು ನಮನ ಕಾರ್ಯಕ್ರಮದಡಿ ಉಚಿತ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆ
ಶ್ರೀಧರ್ ಆರ್ ಡಿಪಿ ಆರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತಿದ್ದರೆ, ಅಪ್ಪ ನಾರಾಯಣ್ ಸಹ ಸರ್ಕಾರಿ ನೌಕರರಾಗಿದ್ದಾರೆ. ಸರ್ಕಾರಿ ಕಂಪ್ಯೂಟರ್ ನಲ್ಲಿ ಇದ್ದ ದಾಖಲಾತಿಯನ್ನು ವಾಟ್ಸಪ್ ಗೆ ಹಾಕಿಕೊಂಡು ಅರೋಪಿಗಳು ಎಲ್ಲರಿಗೂ ಕಳಿಸಿದ್ದರು. ಕೇಂದ್ರ ವಿಭಾಗದ ಸಿಇಎನ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಧರ್ಮಸ್ಥಳದಲ್ಲಿರುವಾಗಲೇ ಕುಟುಂಬಸ್ಥರಿಗೆ ಬೆಂಗಳೂರಿನಲ್ಲಾಗಿದ್ದ ಕಳ್ಳತನದ ಶಾಕ್ :
ಬಾಗಲಗುಂಟೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮನೆಗಳವು ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ರವಿ, ಇಮ್ರಾನ್ ಮತ್ತು ಜಯಕುಮಾರ್ ಬಂಧಿತರು. ಬಂಧಿತರಿಂದ 7 ಲಕ್ಷ ಮೌಲ್ಯದ 130 ಗ್ರಾಂ ಚಿನ್ನ, 1.8 ಲಕ್ಷ ನಗದು ಹಣ ವಶಕ್ಕೆ ಪಡೆಯಲಾಗಿದೆ. ಬಾಗಲಗುಂಟೆಯ ಶೆಟ್ಟಿಹಳ್ಳಿಯಲ್ಲಿ ಈ ಮೂವರೂ ಕಳ್ಳತನ ನಡೆಸಿದ್ದರು. ಮನೆ ಮಾಲೀಕರು ಧರ್ಮಸ್ಥಳಕ್ಕೆ ತೆರಳಿದ್ದ ವೇಳೆ ಕೃತ್ಯವೆಸಗಿದ್ದರು. ಆಗಸ್ಟ್ 13 ರಂದು ಘಟನೆ ನಡೆದಿತ್ತು. ಕುಟುಂಬದವರು ಹ್ಯಾಂಗಿಂಗ್ ಲಾಕ್ ಹಾಕಿ ತೆರಳಿದ್ದರು.
ಹಾಗಾಗಿ ಮನೆಯಲ್ಲಿ ಯಾರು ಇಲ್ಲ ಎಂದು ಕಳ್ಳರ ಕರಾಮತ್ತು ನಡೆದಿತ್ತು. ಬೀಗ ಒಡೆದಿರೋದನ್ನ ನೋಡಿದ ಕಟ್ಟಡ ಮಾಲೀಕ ಕುಟುಂಬಸ್ಥರಿಗೆ ವಿಷಯ ಹೇಳಿದ್ದರು. ಧರ್ಮಸ್ಥಳದಲ್ಲಿರುವಾಗಲೇ ಕುಟುಂಬಸ್ಥರಿಗೆ ಕಳ್ಳತನದ ಶಾಕ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನೂ ಬಂಧಿಸಿ ಚಿನ್ನಾಭರಣ, ನಗದು ವಶಕ್ಕೆ ಪಡೆದಿದ್ದಾರೆ.
ಸಂಜಯನಗರದದಲ್ಲಿ ಮನೆಗಳವು: ಆರೋಪಿ ಸುಬ್ರತೋಮಂಡಲ್ ಬಂಧನ
ಸಂಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಮನೆಗಳವು ಮಾಡಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಸುಬ್ರತೋಮಂಡಲ್ ಬಂಧಿತ ಆರೋಪಿ. ಆಗಸ್ಟ್ 27 ರಂದು ಮಧ್ಯಾಹ್ನ ಸಂಜಯನಗರದ ಪಟೇಲಪ್ಪ ಲೇಔಟ್ ನಲ್ಲಿ ಮನೆಗಳವು ಘಟನೆ ನಡೆದಿತ್ತು. ಮನೆ ಮಾಲೀಕರು ತಮ್ಮ ಸ್ನೇಹಿತನ ಮನೆಗೆ ದೇವರ ಪೂಜೆಗೆ ತೆರಳಿದ್ದರು. ಈ ವೇಳೆ ಕಳ್ಳ, ಮನೆ ಡೋರ್ ಮುರಿದು ಒಳಗೆ ಹೋಗಿದ್ದ. ಮನೆಯಲ್ಲಿದ್ದ 211 ಗ್ರಾಂ ಚಿನ್ನ, 2 ಲಕ್ಷ ನಗದು ಹಣ ಕಳ್ಳತನವಾಗಿತ್ತು. ಆರೋಪಿಯನ್ನು ಬಂಧಿಸಿ 211 ಗ್ರಾಂ ಚಿನ್ನ ಮತ್ತು 75 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:36 am, Wed, 6 September 23